60 ರ ವೃದ್ಧೆಯನ್ನ ಕೊಂದು ಶವದ ಮೇಲೆ ಅತ್ಯಾಚಾರವೆಸಗಿದ 19 ವರ್ಷದ ಕಾಮುಕ
ರಾಜಸ್ಥಾನದಲ್ಲೊಂದು ಮನುಕುಲವೇ ತಲೆತಗ್ಗಿಸುವಂತಹ ಘಟನೆ
60 ವರ್ಷದ ವೃದ್ಧ ಮಹಿಳೆಯ ಶವದ ಮೇಲೆ ಅತ್ಯಾಚಾರ
ಹನುಮಾನ್ ಘರ್ ನ ಪಿಲಿಬಾಂಗಾ ಪಟ್ಟಣದಲ್ಲಿ ಈ ಘಟನೆ
ರಾಜಸ್ಥಾನ : ರಾಜಸ್ಥಾನದಲ್ಲೊಂದು ಮನುಕುಲವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ. 19 ವರ್ಷದ ಯುವಕನೋರ್ವ 60 ವರ್ಷದ ವೃದ್ಧ ಮಹಿಳೆಯನ್ನ ಕೊಂದು ಬಳಿಕ ಆಕೆಯ ಶವದ ಮೇಲೆಯೇ ಅತ್ಯಾಚಾರವೆಸಗಿದ್ದಾನೆ.
ಹನುಮಾನ್ ಘರ್ ನ ಪಿಲಿಬಾಂಗಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಅಮಲಿನ ಸ್ಥಿತಿಯಲ್ಲಿದ್ದ ಕಾಮುಕ ವೃದ್ಧೆ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದು, ವಿಫಲವಾದ ನಂತರ ಮಹಿಳೆಯನ್ನು ಕೊಂದು ಶವದ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊರರಾಜ್ಯದಿಂದ ಬಂದಿದ್ದ ಯುವಕ ಮನೆಯೊಳಗೆ ನುಗ್ಗಿ ಈ ರೀತಿ ವಿಕೃತಿ ಮೆರೆದಿದ್ದಾನೆ. ಸದ್ಯ ಆರೋಪಿಯನ್ನ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ವೃದ್ಧೆಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ ಸತ್ಯ ತಿಳಿದಿದೆ.








