ಸಾಲ ನೀಡಲು ತಡವಾಗಿದ್ದಕ್ಕೆ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಲಿಕ್ಕರ್ ದಂಧೆ ಮಾಲೀಕನ ಮಗ..!
ಪಂಜಾಬ್ : ಲಿಕ್ಕರ್ ಕಳ್ಳದಂಧೆ ನಡೆಸುತ್ತಿದ್ದವನ ಪುತ್ರನೊಬ್ಬ ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಮಹಿಳೆಯ ಅಪ್ರಾಪ್ತ (16) ಮಗಳ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ ಘಟನೆ ಪಂಜಾಬ್ ನ ಲೂಧಿಯಾನದಲ್ಲಿ ನಡೆದಿದೆ.
ಸಂತ್ರಸ್ತೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ತಮ್ಮ ಪಕ್ಕದ ಮನೆಯ 45 ವರ್ಷದ ವ್ಯಕ್ತಿ ಹಾಗೂ ಆತನ 22 ವರ್ಷದ ಮಗನ ವಿರುದ್ಧ ಕೇಸ್ ದಾಖಲು ಮಾಡಿದ್ದಾಳೆ. 39 ವರ್ಷದ ಮಹಿಳೆಯು ಆರೋಪಿಯಿಂದ ಕೆಲ ತಿಂಗಳುಗಳ ಹಿಂದೆ 10000 ಹಣ ಪಡೆದಿದ್ದಳು. ಆದ್ರೆ ಅದನ್ನ ತೀರಿಸುವುದಕ್ಕೆ ಆಕೆಯಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ಸಾಲ ಕೊಟ್ಟಿದ್ದವನ ಮಗ ಮಹಿಳೆಯ ಮನೆಯವರನ್ನ ಹಿಂಸಿಸಿ ಮನೆಯಿಂದ ಆಚೆ ಹಾಕಿ ಮಹಿಳೆಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಸಂತ್ರಸ್ತೆಯ ತಂದೆ ಕೆಲಸದ ಮೇಲೆ ಹೊರಗಿದ್ದ ವೇಳೆ ರಾತ್ರಿ ಮನೆಗೆ ನುಗ್ಗಿ ಈ ರೀತಿ ಮಾಡಿದ್ದಾರೆ. ಕಂಠ ಪೂರ್ತಿ ಕುಡಿದು ಮನೆಗೆ ನುಗ್ಗಿ ನನ್ನ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಮಗಳ ರಕ್ಷಣೆಗಾಗಿ ನಾನು ಪ್ರಯತ್ನಿಸಿದಾಗ ನನ್ನ ತಲೆಗೆ ದೊಣ್ಣೆಯಿಂದ ಹಲ್ಲೆ ಮಾಡಿದರು. ಈ ವೇಳೆ ಕಿರುಚಾಟ ಕೇಳಿ ಕೇಳಿಸಿಕೊಂಡು ಸ್ಥಳೀಯರು ಜಮಾ ಆಗ್ತಿದ್ದಂತೆ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಾಯಿ ಆರೋಪ ಮಾಡಿದ್ದಾರೆ.
ಅಷ್ಟೇ ಅಲ್ಲ ಮೊದಲಿಗೆ ಮಹಿಳೆಯು ದೂರು ನೀಡಿದಾಗ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ಬಳಿಕ ಮಹಿಳೆ ಸಾಕಷ್ಟು ಒತ್ತಡ ಹೇರಿದ ನಂತರ ಕೇಸ್ ದಾಖಲಿಸಿದ್ರೂ ಕೂಡ ಯಾವುದೇ ಕ್ರಮ ಜರುಗಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಇದ್ರಿಂದಾಗಿ ಮಹಿಳೆಯು ನೇರವಾಗಿ ಪೊಲೀಸ್ ಕಮಿಷನರ್ ರಾಕೇಶ್ ಅವರ್ವಾಲ್ ಅವರ ಬಳಿಯೇ ದೂರು ಸಲ್ಲಿಸಿದ್ದಾರೆ. ಬಳಿಕ ದೂರು ಸ್ವೀಕರಿಸಿದ ಕಮಿಷನರ್ ಪೊಲೀಸರಿಗೆ ತನಿಖೆ ನಡೆಸುವಂತೆ ಕಡಕ್ ಆಗಿ ಆದೇಶ ನೀಡಿದ್ದಾರೆ. ಪೊಲಿಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅತ್ಯಾಚಾರಿಗಳಿಂದ ಪಾರಾಗಲೂ 3ನೇ ಮಹಡಿಯಿಂದ ಜಿಗಿದ ಯುವತಿ – ಸಂಚು ರೂಪಿಸಿದ್ದು ಮತ್ತೊಬ್ಬ ಹೆಣ್ಣಿನ ರೂಪದ ರಾಕ್ಷಸಿ..!
ಸೆಲ್ಫಿ ಗಂಡಾಂತರ… ರೈಲಿನ LPG ಟ್ಯಾಂಕ್ ಮೇಲೆ ಹತ್ತಿ ಸೆಲ್ಫಿ ತೆಗೆಯುತ್ತಿದ್ದ ಬಾಲಕನಿಗೆ ಕರೆಂಟ್ ಶಾಕ್..!








