ಅತ್ಯಾಚಾರವೆಸಗಿದವ ಹಾಗೂ ಸಂತ್ರಸ್ತೆ ಇಬ್ಬರನ್ನೂ ಥಳಿಸಿ ಮೆರವಣಿಗೆ ಮಾಡಿದ ರಾಕ್ಷಸರು..!
ಮಧ್ಯಪ್ರದೇಶ : ಮಧ್ಯಪ್ರದೇಶದ ಅಲಿರಾಜಪುರ್ ಜಿಲ್ಲೆಯಲ್ಲಿ 16 ವರ್ಷದ ಅತ್ಯಾಚಾರ ಸಂತ್ರಸ್ತೆ ಹಾಗೂ ಅತ್ಯಾಚಾರವೆಸಗಿದ ಆರೋಪಿಯಿಬ್ಬರನ್ನೂ ಗ್ರಾಮಸ್ಥರು ಥಳಿಸಿ ಊರೆಲ್ಲಾ ಮೆರವಣಿಗೆ ಮಾಡಿದ್ಧಾರೆ. ಬಾಲಕಿ ಮತ್ತು ಆರೋಪಿಯನ್ನು ಹಗ್ಗದಿಂದ ಕಟ್ಟಿ, ಥಳಿಸಲಾಗಿದ್ದು, ಸಾರ್ವಜನಿಕವಾಗಿ ಮೆರವಣಿಗೆ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರಕರಣ ಸಂಬಂಧ ಅತ್ಯಾಚಾರ ಎಸಗಿದ ಆರೋಪಿ ಮತ್ತು ಐವರು ಗ್ರಾಮಸ್ಥರು ಒಳಗೊಂಡಂತೆ ಒಟ್ಟು 6 ಜನರ ವಿರುದ್ಧ ಕೇಸ್ ದಾಖಲಾಗಿದೆ. ಜಾಬತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಅತ್ಯಾಚಾರ ಎಸಗಿದ 21 ವರ್ಷದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಸಂತ್ರಸ್ತೆ ಕುಟುಂಬದ ಸದಸ್ಯರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಪಾಲುದಾರಿಕೆ ವಿಚಾರ : ಅಡಕೆ ವ್ಯಾಪಾರಿಯ ಭೀಕರ ಹತ್ಯೆ