Mysore ಪಾಲುದಾರಿಕೆ ವಿಚಾರ : ಅಡಕೆ ವ್ಯಾಪಾರಿಯ ಭೀಕರ ಹತ್ಯೆ
ಮೈಸೂರು : ವ್ಯವಹಾರದ ಪಾಲುದಾರಿಕೆ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಚೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
60 ವರ್ಷದ ಹ್ಯಾರಿಸ್ ಹತ್ಯಗೊಳಗಾದ ವ್ಯಕ್ತಿಯಾಗಿದ್ದು, ಈತ ನಾಪೋಕ್ಲು ಸಮೀಪದ ಕೊಟ್ಟಮುಡಿ ಜಮಾತ್ ಅಧ್ಯಕ್ಷ ಎಂದು ತಿಳಿದುಬಂದಿದೆ.
ಅಡಕೆ ವ್ಯಾಪಾರಿಯಾಗಿದ್ದ ಹ್ಯಾರಿಸ್ ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.
ವ್ಯವಹಾರದ ಪಾಲುದಾರಿಕೆ ವಿಚಾರದಲ್ಲೇ ಗಲಾಟೆ ನಡೆದು ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
