ಅತ್ಯಾಚಾರ ಸಂತ್ರಸ್ತೆಗೆ ವಿಷಪ್ರಾಶನ : ಉತ್ತರಪ್ರದೇಶದಲ್ಲಿ ಮತ್ತೊಂದು ಘೋರ..!
ಅತ್ಯಾಚಾರ ಸಂತ್ರಸ್ತೆಗೆ ವಿಷಪ್ರಾಶನ ಮಾಡಿಸಿರುವ ಘಟನೆ ಅಪರಾಧಗಳ ತವರಾಗಿರುವ ಉತ್ತರಪ್ರದೇಶದಲ್ಲಿ ನಡೆದಿದೆ. ತಾಂಡಾ ಪ್ರದೇಶದಲ್ಲಿ ಸಂತ್ರಸ್ತೆಗೆ ವಿಷ ನೀಡಲಾಗಿದೆ. ಊರಿನ ಮಾಜಿ ಮುಖಿಯಾ ಆಕೆಯ ಮೇಲೆ ಅತ್ಯಾಚಾರದ ಆರೋಪ ಮಾಡಿ ತಂದೆ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ಯುವತಿಯನ್ನ ತನ್ನ ತಮ್ಮನಿಗೆ ಕೊಟ್ಟು ಮದುವೆ ಮಾಡಿಸುವುದಾಗಿ ಆಕೆಯನ್ನ ಮನೆಗೆ ಬರುವಂತೆ ಆ ಊರಿನ ಮಾಜಿ ಅಧ್ಯಕ್ಷ ( ಮುಖ್ಯಸ್ಥ) ತಿಳಿಸಿದ್ದ ಎನ್ನಲಾಗಿದೆ.
15 ವರ್ಷದ ಬಾಲಕಿಯ ಮೇಲೆ 2 ವಾರ ಸಾಮೂಹಿಕ ಅತ್ಯಾಚಾರ : 20 ಜನರ ಬಂಧನ
ಈ ವೇಳೆ ಸಂತ್ರಸ್ತೆ ಆತನ ಮನೆಗೆ ತೆರಳುವಾಗ ತಾಂಡಾ ಪ್ರದೇಶದಲ್ಲಿ ಆಕೆಗೆ ವಿಷಪ್ರಾಶನ ಮಾಡಿರುವುದು ಕಂಡು ಬಂದಿದೆ. ಇನ್ನೂ ಆಕೆಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇತ್ತ ತನ್ನ ಮಗಳ ಸಾವಿನ ಹಿಂದೆ ಊರಿನ ಮಾಜಿ ಮುಖಿಯಾ ಕೈವಾಡವಿರೋದಾಗಿ ಆರೋಪಿಸಿ ಸಂತ್ರಸ್ತೆ ತಂದೆ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಷ್ಟೇ ಅಲ್ಲ ಆರೋಪಿ ತಮ್ಮ ಪಾಶಾ ವಿರುದ್ಧವೂ ದೂರು ದಾಖಲಿಸಿಕೊಂಡಿದ್ಧಾರೆ.
ಆರೋಪಿಯನ್ನ ನಾಝಿಮ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆಯು ಧುನುಪುರದ ತಾಂಡಾದ ನಿವಾಸಿಯಾಗಿದ್ದು, ನಾಝಿಮ್ ಹಾಗೂ ಆಕೆ ಒಂದು ವರ್ಷದ ಹಿಂದೆ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಆ ವೇಳೆ ಮಹಿಳೆಯನ್ನ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ.