ಶ್ರೀ ಕ್ಷೇತ್ರ ಕೈವಾರ ಶ್ರೀ ಯೋಗಿ ನಾರಾಯಣ ತಾತಯ್ಯ ದೇಗುಲದಲ್ಲಿ ಅಪರೂಪದ ಮದುವೆ kaiwara saaksha tv
ಚಿಕ್ಕಬಳ್ಳಾಪುರ: ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎನ್ನುವಂತೆ ಇಂದು ಕಲ್ಯಾಣನಗರಿ ಶ್ರೀ ಕ್ಷೇತ್ರ ಕೈವಾರದಲ್ಲಿ ಅಪರೂಪದ ಮದುವೆಯೊಂದು ನಡೆಯಿತು.
ಈ ವಧು-ವರರಿಬ್ಬರು ಕುಬ್ಜರಾಗಿದ್ದು, ನೂತನ ಬಾಳಿಗೆ ಕಾಲಿಟ್ಟಿದ್ದಾರೆ.
ಫೋಟೋ ನೋಡಿ ಇದು ಮಕ್ಕಳ ಮದುವೆ ಎಂದುಕೊಳ್ಳಬೇಡಿ… ಗಂಡಿಗೆ 28 ವರ್ಷ ಹೆಣ್ಣಿಗೆ 25 ವರ್ಷ. ಹಸೆಮಣೆ ಏರಿದ ಗಂಡು ವಿಷ್ಣು ಬೆಂಗಳೂರಿನವರು..
ಹೆಣ್ಣು ಜ್ಯೋತಿ ಕೋಲಾರ ಮೂಲದವರು. ಇಬ್ಬರೂ ಪದವೀಧರರಾಗಿದ್ದು,ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ..
ಸದ್ಗುರು ತಾತಯ್ಯನವರ ಸನ್ನಿಧಿಯಲ್ಲಿ ಮದುವೆಯಾದದ್ದು ನಮ್ಮ ಸೌಭಾಗ್ಯವೆಂದ ನೂತನ ವಧು-ವರರು.. ಅರಿಶಿನ ಸೇವೆಯಲ್ಲಿ ಭಾಗವಹಿಸಿ ತಾತಯ್ಯನವರ ಆಶೀರ್ವಾದವನ್ನು ಪಡೆದರು.









