ಯುಎಸ್ ಸಂವಿಧಾನದ ಹಳೆಯ ಪ್ರತಿ ದಾಖಲೆಗೆ ಹರಾಜು
ಯುಎಸ್ ಸಂವಿಧಾನದ ಅತ್ಯಂತ ಅಪರೂಪದ ಮೂಲ ಪ್ರತಿಯನ್ನು ಗುರುವಾರ $ 43 ಮಿಲಿಯನ್ಗೆ ಹರಾಜು ಮಾಡಲಾಯಿತು- ಭಾರತೀಯ ರುಪಾಯಿ ಮೌಲ್ಯದಲ್ಲಿ 319 ಕೋಟಿ ಎಂದು ಹೇಳಲಾಗುತ್ತಿದೆ. ಇಲ್ಲಿಯವರೆಗಿನ ಹರಾಜಿನಲ್ಲಿ ಇದು ಐತಿಹಾಸಿಕ ವಿಶ್ವ ದಾಖಲೆಯಾಗಿದೆ ಎಂದು ಸೋಥೆಬಿಸ್ ಸಂಸ್ಥೆ ಹೇಳಿದೆ.
ಜಾರ್ಜ್ ವಾಷಿಂಗ್ಟನ್, ಬೆಂಜಮಿನ್ ಫ್ರಾಂಕ್ಲಿನ್ ಮತ್ತು ಜೇಮ್ಸ್ ಮ್ಯಾಡಿಸನ್ ಸೇರಿದಂತೆ ಅಮೆರಿಕದ ಸ್ಥಾಪಕ ಪಿತಾಮಹರಿಂದ ಸೆಪ್ಟೆಂಬರ್ 17, 1787 ರಂದು ಫಿಲಡೆಲ್ಫಿಯಾದ ಸ್ವಾತಂತ್ರ್ಯ ಸಭಾಂಗಣದಲ್ಲಿ ಸಹಿ ಮಾಡಲಾದ US ಚಾರ್ಟರ್ನ ಉಳಿದಿರುವ 11 ಪ್ರತಿಗಳಲ್ಲಿ ಇದು ಒಂದಾಗಿದೆ. ಮುಂದಿನ ವರ್ಷಗಳಿಗಾಗಿ ಇವುಗಳನ್ನ ಅಂಗೀಕರಿಸಿಲಾಗಿತ್ತು..
ವಿಶ್ವ ದಾಖಲೆಯು ಹಿಸ್ಟಾರಿಕ್ ಸಂವಿಧಾನದ ಪ್ರತಿ ಸಂಗ್ರಹಿಸಲು ಕ್ರಿಪ್ಟೋಕರೆನ್ಸಿ ಹೂಡಿಕೆದಾರರ ಗುಂಪು ಡಾಕ್ಯುಮೆಂಟ್ ಖರೀದಿಸಲು $40 ಮಿಲಿಯನ್ ಸಂಗ್ರಹಿಸಿದೆ. ಸೊಥೆಬಿಯಾದ ವಕ್ತಾರರು ಹೇಳಿದಂತೆ ಕಮಿಷನ್ ಸೇರಿ 43.2 ,ಮಿಲಿಯನ್ ಡಾಲರ್ ಆಗಲಿದೆ.