Rashmika : ರಶ್ಮಿಕಾ ವಾಲೆಂಟೈನ್ ಯಾರ್ ಗೊತ್ತಾ..??? ಅವರೇ ಹಂಚಿಕೊಂಡ ವಿಡಿಯೋ ಇಲ್ಲಿದೆ..!!
ರಶ್ಮಿಕಾ ಮಂದಣ್ಣ ಪ್ರಸ್ತುತ ಬಹುಭಾಷಾ ನಟಿ.. ಪುಷ್ಪ 2 , ಬಾಲಿವುಡ್ ನ ಅನಿಮಲ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಸಿನಿಮಾಗಳಿಗಿಂತಲೂ ಜಾಸ್ತಿ ಟ್ರೋಲ್ ಗಳಿಂದಲೇ ಸುದ್ದಿಯಲ್ಲಿರುವ ರಶ್ಮಿಕಾ ಮಂದಣ್ಣ ಆಗಾಗ ಲವ್ ಗಾಸಿಪ್ ವಿಚಾರವಾಗೂ ಚರ್ಚೆಯಾಗ್ತಾರೆ..
ವಿಜಯ್ ದೇವರಕೊಂಡ ಜೊತೆಗೆ ಪ್ರೀತಿಯಲ್ಲಿದ್ದಾರೆ ಎಂಬ ಗಾಸಿಪ್ ಇದೆ.. ಅದಕ್ಕೆ ಸರಿಯಾಗಿ ಹಲವೆಡೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ ಕೂಡ. ಇದೀಗ ತಮ್ಮ ವಾಲೆಂಟೈನ್ ಪರಿಚಯ ಮಾಡಿಕೊಟ್ಟಿದ್ದಾರೆ.. ಬೆಡ್ ರೂಮಿನಿಂದಲೇ ವಿಡಿಯೋ ಒಂದನ್ನ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ತಮ್ಮ ವಾಲೆಂಟೈನ್ ನನ್ನ ವಾಲೆಂಟೈನ್ಸ್ ಡೇ ದಿನವೇ ಪರಿಚಯ ಮಾಡಿಕೊಟ್ಟಿದ್ದಾರೆ..
ಇತ್ತೀಚಿಗೆ ರಶ್ಮಿಕಾ, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನನ್ನ ವ್ಯಾಲೆಂಟೈನ್ ಯಾರು ಎಂದು ಗೆಸ್ ಮಾಡಿ ಎಂದು ಪ್ರಶ್ನಿಸಿ ಸ್ಟೋರಿ ಹಾಕಿದ್ದರು. ನಟಿಯ ಪೋಸ್ಟ್ ಗೆ ಅಭಿಮಾನಿಗಳು ವಿಜಯ್ ದೇವರಕೊಂಡ ಹೆಸರನ್ನೇ ಹೇಳಿದ್ದರು. ಇದೀಗ ಪ್ರೇಮಿಗಳ ದಿನವದ ಇಂದು ( ಫೆಬ್ರವರಿ 14) ಪೋಸ್ಟ್ ಹಾಕಿದ್ದು , ತನ್ನ ಮುದ್ದಿನ ನಾಯಿ ಜೊತೆ ಇದ್ದಾರೆ.. ಈ ವಿಡಿಯೋಗೆ ನಿಮಗೆ ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ಬರೆದಿದ್ದಾರೆ.. ಈ ವಿಡಿಯೋ ವೈರಲ್ ಆಗ್ತಿದೆ.. ಅಂತೆಯೇ ಟ್ರೋಲ್ ಕೂಡ ಆಗ್ತಿದೆ..
Rashmika , who is rashmika mandanna’s valentine








