ಪುಷ್ಪ ಸಿನಿಮಾದ ಪ್ರಮುಖ ಪಾತ್ರಗಳಿಗೆ ಕತ್ತರಿ : ಅದಕ್ಕಿದೆ ಈ ಎರೆಡು ಕಾರಣಗಳು..!
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಸದ್ಯ ದೇಶಾದ್ಯಂತ ರಿಲೀಸ್ ಆಗಿದ್ದು, ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಕರ್ನಾಟಕದಲ್ಲಿ ಸಿನಿಮಾಗೆ ಅಷ್ಟು ಒಳ್ಳೆ ಪ್ರತಿಕ್ರಿಯೆ ಸಿಗದೇ ಹೋದ್ರು, ಬೇರೆ ರಾಜ್ಯಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.. ಕರ್ನಾಟಕದಲ್ಲಿ ಬಾಯ್ಕಟ್ ಪುಷ್ಪ ಅಭಿಯಾನವೂ ಶುರುವಾಗಿತ್ತು.. ಅದಕ್ಕೆ ಕಾರಣ ಕನ್ನಡದ ಕಡೆಗಣನೆ.. ಸಿನಿಮಾ ಕನ್ನಡದಕ್ಕೂ ಡಬ್ ಆಗಿತ್ತು.. ಆದ್ರೆ ಕನ್ನಡದ ವರ್ಷನ್ ಗೆ ಕೊಟ್ಟಿದ್ದು ಕೇವಲ ಒಂದೇ ಒಂದು ಸ್ಕ್ರೀನ್,.. ಹೀಗಾಗಿ ಕನ್ನಡಿಗರು ಆಕ್ರೋಶಗೊಂಡು ಪುಷ್ಪ ವಿರುದ್ಧ ಬಾಯ್ಕಟ್ ಘೋಷಣೆ ಸಾರಿದ್ದರು.. ಈ ನಡುವೆಯೂ ಕೆಲವೆಡೆ ಸಿನಿಮಾಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ..
ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಈಗ ಒಂದು ಸೀನ್ ಗೆ ಕತ್ತರಿ ಹಾಕಲಾಗಿದೆ.. ಹೌದು.. ಅದಕ್ಕೆ 2 ಪ್ರಮುಖ ಕಾರಣ.. ಒಂದು ಫ್ಯಾಮಿಲಿ ಆಡಿಯನ್ಸ್ ಗೆ ಸ್ವಲ್ಪ ಇರಿಸು ಮುರಿಸಾಗಬಹುದು ಎನ್ನುವುದು. ಮತ್ತೊಂದು , ಸಿನಿಮಾದ ಮೇಲೆ ನೆಗೆಟಿವ್ ಒಪಿಯನ್ ಹೊರಹಾಕಲು ಪ್ರಮುಖ ಕಾರಣ ಟೈಮ್ ಲ್ಯಾಗ್.. ಹೀಗಾಗಿ ಸಿನಿಮಾದ ಅವಧಿ ಕಡಿಮೆ ಮಾಡುವ ಉದ್ದೇಶವೂ ಇದೆ..
IMDBಯ ಪ್ರಕಾರ 2022 ರ 10 ಅತ್ಯಂತ ನಿರೀಕ್ಷಿತ ಸಿನಿಮಾಗಳಿವು…! KGF ಗೆ ಎಷ್ಟನೇ ಸ್ಥಾನ..!
ಹೌದು.. ಈ ಸಿನಿಮಾದಲ್ಲಿ ಅಲ್ಲು ಹಾಗೂ ರಶ್ಮಿಕಾ ನಡುವಿನ ರೋಮ್ಯಾಂಟಿಕ್ ದೃಶ್ಯಗಳನ್ನು ತೆಗೆಯಬೇಕು ಎಂದು ನಿರ್ಧರಿಸಲಾಗಿದೆ ಎಂಬ ಮಾತು ಜೋರಾಗಿ ಚರ್ಚೆಯಾಗ್ತಿದೆ.. ಪುಷ್ಟ ಸಿನಿಮಾದಲ್ಲಿ ರೋಮ್ಯಾಂಟಿಕ್ ದೃಶ್ಯಗಳು ಭಾರೀ ವಿವಾದ ಸೃಷ್ಟಿಸುತ್ತಿದೆ ಎನ್ನಲಾಗ್ತಿದೆ.. ಈ ಸಿನಿಮಾದಲ್ಲಿ ನಾಯಕ, ನಾಯಕಿಯ ಎದೆಯನ್ನು ಮುಟ್ಟುವ ದೃಶ್ಯವಿದೆ. ಅದನ್ನು ನೋಡಿದ ಪ್ರೇಕ್ಷಕರು ಈ ದೃಶ್ಯ ಸಿನಿಮಾಗೆ ಅವಶ್ಯಕತೆ ಇರಲಿಲ್ಲ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಈ ಪರಿಣಾಮ ಆ ದೃಶ್ಯವನ್ನೇ ಚಿತ್ರದಿಂದ ತೆಗೆಯಬೇಕು ಎಂದು ಚಿತ್ರತಂಡ ನಿರ್ಧರಿಸಿದೆ ಎಂಬ ಸುದ್ದಿ ಕೇಳಿಬರುತ್ತಿದೆ.








