ಬಾಂಡಲಿಯಾದ ರಶ್ಮಿಕಾ… ಅಭಿಮಾನಿಗಳು ಶಾಕ್… ಏನಿದು ಕಿರಿಕ್ ರಾಣಿಯ ಹೊಸ ವರಸೆ..!
ಚೆನ್ನೈ : ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸದಾ ಕ್ಯೂಟ್ ಲುಕ್ ನಲ್ಲಿ ಕಾಣಿಸಿಕೊಂಡು ಫ್ಯಾನ್ಸ್ ಗಳ ಹಾರ್ಟ್ ನಲ್ಲಿ ಹಲ್ ಚಲ್ ಸೃಷ್ಟಿಸುತ್ತಾರೆ. ಆದ್ರೆ ಇತ್ತೀಚೆಗೆ ರಶ್ಮಿಕಾ ಮಂದಣ್ಣರ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.
ಹೌದು.. ರಶ್ಮಿಕಾ ತಲೆ ಬೋಳಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಫೋಟೋ ನೋಡಿದ ಅನೇಕರಿಗೆ ಶಾಕ್ ಆಗಿದ್ದರೆ. ರಶ್ಮಿಕಾ ಯಾಕೆ ಹೀಗೆ ತಲೆ ಬೋಳಿಸಿದ್ದಾರೆ ಅಂತ ಯೋಚನೆ ಮಾಡಿದ್ದಾರೆ.
ಆದ್ರೆ ಇದು ರಿಯಲ್ ಅಲ್ಲ ರೀಲ್… ಸಲೂನ್ ಗಳ ಜಾಹಿರಾತು ಫಲಕಗಳಲ್ಲಿ ಈ ಫೋಟೋಗಳು ರಾರಾಜಿಸುತ್ತಿವೆ. ತಮಿಳುನಾಡಿನಲ್ಲಿ ರಶ್ಮಿಕಾ ತಲೆ ಬೋಳಿಸಿರುವ ಫೋಟೋಗಳು ಕಂಡುಬಂದಿದೆ.
ತಮ್ಮ ಸಲೂನ್ ಉದ್ಯಮದ ಜಾಹಿರಾತಿಗಾಗಿ ಈ ಫೋಟೋ ಅಳವಡಿಸಲಾಗಿದೆ. ಇತ್ತ ರಶ್ಮಿಕಾರ ಫೋಟೋ ಟ್ರೋಲ್ ಗೂ ಗುರಿಯಾಗಿದೆ. ಹೌದು… ರಶ್ಮಿಕಾಗೆ ಅವಮಾನ ಮಾಡುವ ಕಾರಣಕ್ಕೆ ಈ ರೀತಿಯಾದ ಫೋಟೋಗಳನ್ನ ಹಾಕಲಾಗಿದೆ ಎನ್ನಲಾಗಿದ್ದು, ರಶ್ಮಿಕಾ ಫ್ಯಾನ್ಸ್ ಸಿಕ್ಕಾಪಟ್ಟೆ ಆಕ್ರೋಶಗೊಂಡಿದ್ದಾರೆ.
ರಾಮನವಮಿಯಂದೇ ‘ಶಬರಿ’ಯಾಗಿ ದರ್ಶನ ಕೊಟ್ಟ ‘ಡಿಂಪಲ್ ಕ್ವೀನ್’..!