Rashmika Mandanna | ಯಾರೊಂದಿಗೂ ಮದುವೆ ಫಿಕ್ಸ್ ಆಗಿಲ್ಲ
ಹೈದರಾಬಾದ್ : ಪುಷ್ಪ, ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾದಲ್ಲಿ ನಟಿಸಿದ ಬಳಿಕ ಮಹಿಳೆಯಾಗಿ ಡ್ರೆಸ್ಸಿಂಗ್ ನಲ್ಲಿ ತುಂಬಾ ಕಷ್ಟ ಎನಿಸುತ್ತಿದೆ. ಅದಕ್ಕಾಗಿಯೇ ಮುಂದಿನ ಜನ್ಮ ವಿದ್ದರೇ ಪುರುಷನಾಗಿ ಹುಟ್ಟುತ್ತೇನೆ ಎಂದು ನಟಿ ರಷ್ಮಿಕಾ ಹಾಸ್ಯ ಮಾಡಿದ್ದಾರೆ.
ರಷ್ಮಿಕಾ ಮಂಡಣ್ಣ ನಟನೆಯ ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾದ ಪ್ರಮೋಷನ್ ಭಾಗವಾಗಿ ರಷ್ಮಿಕಾ ಮಂದಣ್ಣ ಸುದ್ದಿವಾಹಿನಿಗೆ ಸಂದರ್ಶನ ನೀಡಿದರು. ಈ ವೇಳೆ ಮಾತನಾಡುತ್ತಾ ರಷ್ಮಿಕಾ… ‘ನಾವು ಬಹಳ ದಿನಗಳ ನಂತರ ಕೌಟುಂಬಿಕ ಸಿನಿಮಾ ಮಾಡಿದ್ದೇವೆ. ಥಿಯೇಟರ್ ಗೆ ಬಂದು ನೋಡಿ.
ವಯಸ್ಸಿನ ಬೇಧವಿಲ್ಲದೆ ಎಲ್ಲರೂ ನೋಡಿ ಆನಂದಿಸಬಹುದು. ಕೆಲವು ಘಟನೆಗಳು ನಮ್ಮ ಮನೆಯಲ್ಲಿ ನಡೆಯುತ್ತವೆ. ನಮ್ಮ ಮನೆಯಲ್ಲಿಯೂ ಅಮ್ಮ, ಅಪ್ಪ, ತಂಗಿ ಈ ಸಿನಿಮಾ ರಿಲೀಸ್ ದಿನ ಮೊದಲ ಆಟ ನೋಡಲು ಹೋಗುತ್ತಾರೆ. ನಿಮ್ಮ ಕುಟುಂಬದೊಂದಿಗೆ ನೀವು ಹೋಗಿ ಸಿನಿಮಾ ನೋಡಿ ಆನಂದಿಸಿ ಎಂದು ಮನವಿ ಮಾಡಿಕೊಂಡರು.
rashmika-mandanna-interesting-comments-on marriage
ಇದಾದ ಬಳಿಕ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ ರಷ್ಮಿಕಾ ಮಂದಣ್ಣ, ಪುಷ್ಪ, ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾ ಮಾಡಿದ ಬಳಿಕ, ಮಹಿಳೆಯಾಗಿ ಡ್ರೆಸ್ಸಿಂಗ್ ನಲ್ಲಿ ತುಂಬಾ ಕಷ್ಟ ಅನಿಸುತ್ತಿದೆ. ಅದಕ್ಕಾಗಿಯೇ ಮುಂದಿನ ಜನ್ಮ ಅಂತಾ ಇದ್ದರೇ ಪುರುಷನಾಗಿ ಹುಟ್ಟುತ್ತೇನೆ ಎಂದು ಹಾಸ್ಯ ಮಾಡಿದರು.
ಇದೇ ವೇಳೆ ಮದುವೆ ವಿಚಾರವಾಗಿ ಮಾತನಾಡಿ ಒಳ್ಳೆಯ ವ್ಯಕ್ತಿ ಸಿಕ್ಕರೆ ಮದುವೆಯಾಗುತ್ತೇನೆ, ಇದುವರೆಗೂ ಯಾರೊಂದಿಗೂ ಮದುವೆ ಫಿಕ್ಸ್ ಆಗಿಲ್ಲ ಎಂದರು.