ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಾಗಿದೆ.. ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾದಲ್ಲಿ ರಶ್ಮಿಕಾ ಸೋತಿದ್ದು ಬಿಟ್ರೆ ,,, ಉಳಿಕೆಲ್ಲಾ ಅವರ ನಟನೆಯ ಸಿನಿಮಾಗಳು ಹಿಟ್ ಆಗಿವೆ..
ಅದೃಷ್ಟದ ರಾಣಿ ರಶ್ಮಿಕಾ ಕರ್ನಾಟಕದವರೇ ಆದ್ರೂ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ.. ಕನ್ನಡಿಗರಿಂದ , ಕನ್ನಡ ಸಿನಿಮಾಗಳ ಮೂಲಕ ಫೇಮಸ್ ಆದ್ರೂ ಕನ್ನಡಿಗರಿಂದಲೇ ಅತಿ ಹೆಚ್ಚು ಟ್ರೋಲ್ ಆಗುವ ನಟಿ ರಶ್ಮಿಕಾ ಮಂದಣ್ಣ..
ಕನ್ನಡಿಗರಿಗೆ ಬೇಡವಾಗಿರೋ ರಶ್ಮಿಕಾಗೆ ಪರ ಭಾಷೆಗಳಲ್ಲಿ ಕ್ರೇಜ್ ಏನ್ ಕಡಿಮೆಯಾಗಿಲ್ಲ.. ತಮಿಳು , ತೆಲುಗು , ಬಾಲಿವುಡ್ ನಲ್ಲಿ ಮಿಂಚುತ್ತಿರುವ ರಶ್ಮಿಕಾ ಪ್ರಸ್ತುತ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದು , ಈ ಸಿನಿಮಾ ಮೇಲೆ ಅವರ ನಿರೀಕ್ಷೆ ಹೆಚ್ಚಿದೆ..
ಆದ್ರೀಗ ಹೊಸದೊಂದು ಟ್ವಿಸ್ಟ್ ಸಿಕ್ಕಿದ್ದು , ರಶ್ಮಿಕಾ ಫ್ಯಾನ್ಸ್ ಶಾಕ್ ಆಗಿದ್ದಾರೆ…
ಹೌದು..! ಪುಷ್ಪ ಮೊದಲ ಭಾಗದ ಚಿತ್ರೀಕರಣ ಮಾಡುವಾಗಲೇ ಪುಷ್ಪ 2 ಸಿನಿಮಾದ ಶೂಟಿಂಗ್ ಒಂಚೂರು ಕಂಪ್ಲೀಟ್ ಆಗಿತ್ತು.. ಈ ವಿಚಾರ ಎಲ್ರಿಗೂ ಗೊತ್ತಿದೆ.. ಆದ್ರೆ ಮೊದಲ ಭಾಗ ಸಕ್ಸಸ್ ಆದ ನಂತರ ಎರಡನೇ ಭಾಗದ ಮೇಲೆ ಸಾಕಷ್ಟು ಒತ್ತು ನೀಡಲಾಗಿದ್ದು , ಅನೇಕ ಬದಲಾವಣೆಗಳನ್ನ ಸಿನಿಮಾತಂಡವು ಮಾಡಿಕೊಂಡಿದೆ..
ಅಂದ್ಹಾಗೆ ಮೊದಲ ಭಾಗದಲ್ಲಿ ರಶ್ಮಿಕಾ ಹೆಚ್ಚಾಗಿ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದರು.. ಆದ್ರೆ ಎರಡನೇ ಭಾಗದಲ್ಲಿ ಸಿನಿಮಾದಲ್ಲಿ ಅಲ್ಲು ಒನ್ ಮ್ಯಾನ್ ಶೋ ಇರಲಿದೆ. ಅಂದ್ರೆ ರಶ್ಮಿಕಾ ಸ್ಕ್ರೀನ್ ಟೈಮ್ ತೀರಾ ಕಡಿಮೆ ಎನ್ನಲಾಗಿದೆ..
ಅವಶ್ಯಕ ಎನಿಸುವಂತಹ ಸನ್ನಿವೇಶಗಳಲ್ಲಿ ಮಾತ್ರ ಶ್ರೀವಲ್ಲಿಯ ಪಾತ್ರ ಬಂದು ಹೋಗುತ್ತದೆ ಅಷ್ಟೇ ಎನ್ನಲಾಗಿದೆ.. ಜೊತೆಗೆ ಕ್ಲೈಮ್ಯಾಕ್ಸ್ ನಲ್ಲಿ ರಶ್ಮಿಕಾ ಶ್ರೀವಲ್ಲಿ ಪಾತ್ರ ಸಾಯುವ ಮೂಲಕ ಟ್ರ್ಯಾಜಿಡಿಯಾಗಿ ಎಂಡ್ ಆಗಲಿದೆ ಎಂಬ ಮಾತುಗಳೂ ಕೂಡ ಕೇಳಿ ಬರುತ್ತಿದೆ. ಇದ್ರಿಂದ ರಶ್ಮಿಕಾ ಫ್ಯಾನ್ಸ್ ಡಿಸಪಾಯಿಂಟ್ ಆಗಿದ್ದಾರೆ..
Russia – Ukraine : ಯೂರೋಪಿಯನ್ ಒಕ್ಕೂಟದ ಸದಸ್ಯತ್ವಕ್ಕೆ ಉಕ್ರೇನ್ ಸೇರ್ಪಡೆಗೆ ನಮ್ಮ ವಿರೋಧವಿಲ್ಲ : ಪುಟಿನ್