ದೊಡ್ಡ ದೊಡ್ಡ ಕೆಲಸಗಳನ್ನ ಮಾಡಲು ಹೊರಟ ಹುಡುಗಿಗೆ , ಚಿಕ್ಕ ಚಿಕ್ಕ ವಿಷಯಗಳು ಲೆಕ್ಕಕ್ಕಿಲ್ಲ – ರಶ್ಮಿಕಾ
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಂತರ ಟಾಲಿವುಡ್ ನಲ್ಲಿ ಶೈನ್ ಆಗಿ , ತಮಿಳಿನಲ್ಲೂ ಮಿಂಚಿ ಇದೀಗ ಬಾಲಿವುಡ್ ಗೆ ಎಮಟ್ರಿ ಕೊಟ್ಟಿರುವ ನ್ಯಾಷನಲ್ ಕ್ರಷ್ , ಚಷ್ಮಾ ಸುಂದರಿ ರಶ್ಮಿಕಾ ಮಂದಣ್ಣ ಸದಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿಯಲ್ಲಿರೋ ಸೆಲೆಬ್ರಿಟಿ ಕೂಡ.. ಅದ್ರಲ್ಲೂ ಟ್ರೋಲ್ ಪೇಜ್ ಗಳಲ್ಲಿ ಸದಾ ರಾರಾಜಿಸುವ ನಟಿ ಅಂದ್ರು ತಪ್ಪಾಗಲ್ಲ.. ಸದಾ ಒಂದಲ್ಲಾ ಒಮದು ವಿಚಾರದಿಂದ ರಶ್ಮಿಕಾ ಟ್ರೋಲ್ ಆಗ್ತಲೇ ಇರ್ತಾರೆ.. ಆದ್ರೆ ಇದಕ್ಕೆಲ್ಲಾ ರಶ್ಮಿಕಾ ತಲೆ ಕೆಡಿಸಿಕೊಂಡಿಲ್ಲ..
ಆದ್ರೆ ಟ್ರೋಲಿಗರಿಗೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ “ದೊಡ್ಡ ಕೆಲಸಗಳನ್ನು ಮಾಡುವ ಹುಡುಗಿಗೆ, ಸಣ್ಣ ವಿಚಾರಗಳು ತಲುಪಲ್ಲ ಅಂತ ಯಾರೋ ಹೇಳಿದ್ದಾರೆ. ನನ್ನ ವಿಚಾರದಲ್ಲಿ ಇದು ಸೂಕ್ತವಾಗಿದೆ” ಎಂದಿದ್ದಾರೆ..
ಹೌದು.. ಇತ್ತೀಚೆಗೆ ಹಾಟ್ ಅಂಡ್ ಗ್ಲಾಮರಸ್ ಆಗಿರುವ ತಮ್ಮ ಫೋಟೋವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಈ ರೀತಿಯಾದ ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಮೂಲಕ ಟೀಕಾಕಾರು , ಟ್ರೋಲಿಗರಿಗೆ ಪರೋಕ್ಷವಾಗಿ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ. ಅಂದ್ಹಾಗೆ ರಶ್ಮಿಕಾ ಬಾಲಿವುಡ್ ನಲ್ಲಿ ಈಗಾಗಲೇ ಸಿನಿಮಾವೊಂದರ ಶೂಟಿಂಗ್ ಮುಗಿಸಿ ಅಮಿತಾಬ್ ಬಚ್ಚನ್ ಅವರ ‘ಗುಡ್ ಬೈ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಲಾಕ್ ಡೌನ್ ನಿಂದಾಗಿ ಮುಂಬೈನಿಂದ ಹೈದ್ರಾಬಾದ್ ಗೆ ತೆರಳಿದ್ದ ನಟಿ ಇದೀಗ ಮರಳಿ ಮುಂಬೈಗೆ ವಾಪಸ್ ಆಗಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.