ಸಿನಿಮಾರಂಗಕ್ಕೆ ರಶ್ಮಿಕಾ ಎಂಟ್ರಿಕೊಟ್ಟು 5 ವರ್ಷ- ಎಷ್ಟೆಲ್ಲಾ ಪಾಠ ಕಲಿತೆ ಎಂದು ದೊಡ್ಡ ಲೆಟರ್ ಬರೆದ ‘ಸಾನವಿ’…
ಬೆಂಗಳೂರು : 2016 ರಲ್ಲಿ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕವೇ ಬಣ್ಣದ ಜಗತ್ತಿನಲ್ಲಿ ಸಿನಿ ಜರ್ನಿ ಆರಂಭಿಸಿರುವ ರಶ್ಮಿಕಾ ಪ್ರಸ್ತುತ ಕನ್ನಡ ಮರೆತ್ರು , ಬೇರೆ ಭಾಷೆಗಳಲ್ಲಿ ನೆಲೆ ಕಂಡುಕೊಳ್ತಿದ್ದಾರೆ.. ಟಾಲಿವುಡ್ ನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ.. ಇದೇ ಸ್ಥಾನವನ್ನ ಕಾಲಿವುಡ್ , ಬಾಕಿವುಡ್ ನಲ್ಲೂ ಗಿಟ್ಟಿಸಿಕೊಳ್ಳೋಕೆ ಕಸರತ್ತು ಮಾಡ್ತಿದ್ದಾರೆ..
ಸದ್ಯ ರಶ್ಮಿಕಾ ಮಂದಣ್ಣ ಸಿನಿಮಾ ಜರ್ನಿ ಆರಂಭಿಸಿ 5 ವರ್ಷ ಕಳೆದಿದೆ.. ದರ್ಶನ್ , ಪುನೀತ್ ರಾಜ್ ಕುಮಾರ್ , ಗಣೇಶ್ , ಧ್ರುವ ಸರ್ಜಾರ , ಟಾಲಿವುಡ್ ನ ಸ್ಟಾರ್ ಗಳಾದ ವಿಜಯ್ ದೇವರಕೊಂಡ , ಅಲ್ಲು ಅರ್ಜುನ್ , ಮಹೇಶ್ ಬಾಬು , ಕಾಲಿವುಡ್ ನಲ್ಲಿ ಕಾರ್ತಿ ಜೊತೆಗೆ ಹೀಗೆ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವ ರಶ್ಮಿಕಾ ಮಂದಣ್ಣಗೆ ಕನ್ನಡಾಭಿಮಾನಿಗಳೂ ಯಾರೂ ಕೂಡ ಕೇರ್ ಮಾಡಲ್ಲ ಅಂದ್ರೂ ತೆಲುಗಿನಲ್ಲಿ ಫೇಮಸ್ ಆಗಿದ್ದಾರೆ..
ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಸಿನಿಮಾದಲ್ಲಿ ನಟಿಸಿರುವ ರಶ್ಮಿಕಾ, ಸಿದ್ಧಾರ್ಥ್ ಜೊತೆಗೆ ಮಿಷನ್ ಮಜ್ನು ಸಿನಿಮಾದಲ್ಲೂ ಅಭಿನಯಿಸಿದ್ದಾರೆ.. ಇತ್ತೀಚೆಗೆ ಅವರ ಪುಷ್ಪಾ ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕಂಡಿದೆ.. ಹೀಗೆ ಅದೃಷ್ಟದಿಂದಲೇ ಯಶಸ್ಸಿನ ಉತ್ತುಂಗಕ್ಕೇರಿರುವ , ನ್ಯಾಷನಲ್ ಕ್ರಶ್ ರಶ್ಮಿಕಾ ಸಿನಿ ಪಯಣ ಆರಂಭಿಸಿ 5 ವರ್ಷಗಳಾದ ಖುಷಿಯಲ್ಲಿ ತಾನು ಈ 5 ವರ್ಷಗಳಲ್ಲಿ ಏನೆಲ್ಲಾ ಕಿಲತೆ ಎಂಬುದನ್ನ ಹಂಚಿಕೊಂಡು ಅಭಿಮಾನಿಗಳಿಗೆ , ತನ್ನ ಬೆಂಗಲಿಗರಿಗೆ ಧನ್ಯವಾದ ತಿಳಿಸಿದ್ದಾರೆ..
ಒಂದು ನಗುಮೊಗದ ಫೋಟೋ ಶೇರ್ ಮಾಡಿಕೊಂಡಿರೋ ರಶ್ಮಿಕಾ , ನಾನು ಚಿತ್ರರಂಗಕ್ಕೆ ಬಂದು 5 ವರ್ಷಗಳಾಗಿದೆ. ಇದು ಹೇಗೆ ಸಾಧ್ಯವಾಯಿತು..?? ಈ ಐದು ವರ್ಷಗಳಲ್ಲಿ ಕೆಲವೊಂದು ವಿಚಾರಗಳನ್ನು ಕಲಿತಿದ್ದೇನೆ. ಸಮಯ ತುಂಬಾ ವೇಗವಾಗಿ ಕಳೆದುಹೋಗುತ್ತಿದೆ. ಪ್ರತಿದಿನ ನೆನಪುಗಳನ್ನು ಸೃಷ್ಟಿಸಿಕೊಳ್ಳಿ. ಮನಸ್ಸಿನಿಂದ ಸಂತೋಷವಾಗಿರುವುದು ಹೇಗೆ ಎಂಬುವುದನ್ನು ತಿಳಿದುಕೊಳ್ಳಿ. ಜೀವನದಲ್ಲಿ ಯಾವುದು ಸುಲಭವಾಗಿರುವುದಿಲ್ಲ ಎಂಬುವುದನ್ನು ನಾನು ಕಲಿತುಕೊಂಡೆ. ನಿಮಗೆ ಬೇಕಾಗಿರುವುದಕ್ಕಾಗಿ ಯಾವಾಗಲೂ ಹೋರಾಡಬೇಕಾಗುತ್ತದೆ. ತಾಳ್ಮೆಯಿಂದ ಇರಿ. ಎಲ್ಲ ಆಗಬೇಕಾದದ್ದು ಆಗುತ್ತದೆ ಎಂದಿದ್ದಾರೆ.
ಜನ ಹಲವಾರು ವಿಚಾರಗಳನ್ನು ನಿಮಗೆ ಕಲಿಸುತ್ತಾರೆ ಮತ್ತು ಕಲಿಯಲು ಯಾವಾಗಲೂ ಮುಕ್ತರಾಗಿರಿ. ಉದ್ರೇಕಕ್ಕೆ ಒಳಗಾಗಬೇಡಿ. ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಬೇಡಿ. ನಿಮ್ಮನ್ನ ಅಗಲಿ ಹೋಗುವುದನ್ನು ಬಿಟ್ಟು ಬದುಕುವುದನ್ನು ಕಲಿಯಿರಿ. ನಿಮಗೆ ಇಷ್ಟವಾದವರಿಗೆ ಸಮಯ ನೀಡಿ. ಚೆನ್ನಾಗಿ ತಿನ್ನಿ, ನಿದ್ರೆ ಮಾಡಿ, ಕೆಲಸ ಮಾಡಿ, ಸಂತೋಷದಿಂದ ಇರಿ ಮತ್ತು ಎಲ್ಲರನ್ನು ಪ್ರೀತಿಸಿ. ಮೊದಲು ನಿಮ್ಮ ಬಗ್ಗೆ ಯೋಚಿಸಿ, ನಿಮಗೆ ಆದ್ಯತೆ ನೀಡಿ ಎಂದು ಬರೆದುಕೊಂಡಿದ್ದಾರೆ.









