‘ಚಷ್ಮಾ ಸುಂದರಿ’ಯ ಕಣ್ಣಲ್ಲಿ ಮ್ಯಾಜಿಕ್ ಇದ್ಯಂತೆ..!
ಸ್ಯಾಂಡಲ್ ವುಡ್ ‘ಸಾನವಿ’ಯಾಗಿ ನ್ಯಾಷನಲ್ ಕ್ರಶ್ ಆದ ರಶ್ಮಿಕಾ ಟಾಲಿವುಡ್ , ಕಾಲಿವುಡ್ , ಬಾಲಿವುಡ್ ನಲ್ಲಿ ದರ್ಬಾರ್ ಮಾಡ್ತಿದ್ದಾರೆ. ಸ್ಟಾರ್ ನಟರ ಸಿನಿಮಾಗಳಲ್ಲಿ ರಶ್ಮಿಕಾ ಮಿಂಚುತ್ತಿದ್ದಾರೆ. ಪ್ರಸ್ತುತ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪದಲ್ಲಿ ರಶ್ಮಿಕಾ ಬಣ್ಣ ಹಚ್ಚಿದ್ದು, ಸಿನಿಮಾ ರಿಲೀಸ್ ಆಗಲು ಅಭಿಮಾನಿಗಳು ಕಾಯ್ತಾ ಇದ್ದಾರೆ.
ಗಾಂಧಿ ಜಯಂತಿಗೆ – ಶ್ರೀಕೃಷ್ಣ@ gmail.com ಟ್ರೇಲರ್ ರಿಲೀಸ್
ಸಿನಿಮಾ ಹೊರತಾಗಿ ಸೋಷಿಯಲ್ ಮೀಡಿಯಾದಲ್ಲೂ ರಶ್ಮಿಕಾ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಅಷ್ಟೇ ಟ್ರೋಲ್ ಕೂಡ ಆಗ್ತಾಯಿರುತ್ತಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನ ಹಾಕಿರೋ ರಶ್ಮಿಕಾ ಮಾದಕ ನೊಟ ಬೀರಿರುವ ಫೋಟೋ ಸೇರ್ ಮಾಡಿ ನನ್ನ ಕಣ್ಣಿನಲ್ಲಿ ಮ್ಯಾಜಿಕ್ ಇದೆ ಎಂದು ಕ್ಯಾಕ್ಷನ್ ಕೊಟ್ಟಿದ್ದಾರೆ. ಈ ಪೋಸ್ಟ್ ಗೆ ನೆಟ್ಟಿಗರು ಫಿದಾ ಆಗಿದ್ದು, ಲೈಕ್ಸ್ ಕಮೆಂಟ್ ಗಳ ಸುರಿಮಳೆಗೈದಿದ್ದಾರೆ.