ವಿಜಯ್ ದೇವರಕೊಂಡ ಜೊತೆಗಿರುವ ಫೇವರೇಟ್ ಫೋಟೋ ಶೇರ್ ಮಾಡಿದ ರಶ್ಮಿಕಾ
ಮುಂಬೈ: ಕನ್ನಡದ ಕಿರಿತ ಪಾರ್ಟಿ ಸಿನಿಮಾ ಮೂಲಕ ಫೇಮ್ ಪಡೆದು ನ್ಯಾಷನಲ್ ಕ್ರಷ್ ಆಗಿ ಗುರುತಿಸಿಕೊಂಡ ರಶ್ಮಿಕಾ ಟಾಲಿವುಡ್ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆಗೆ ತೆರೆಹಂಚಿಕೊಂಡು , ತಮಿಳುನಲ್ಲಿಯೂ ನಟಿಸಿ ಇದೀಗ ಬಾಲಿವುಡ್ ಗೆ ಹಾರಿದ್ದಾರೆ.. ಬಾಲಿವುಡ್ ನಲ್ಲಿ ತಮ್ಮ 2ನೇ ಸಿನಿಮಾ , ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸುತ್ತಿದ್ದಾರೆ.. ರಶ್ಮಿಕಾ ನಟನೆಯ ಹೊರತಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗಳ ಮೂಲಕವೇ ಸಖತ್ ಚರ್ಚೆಯಲ್ಲಿಯಲ್ಲಿರುವ ನಟಿ ಅಂತ ಹೇಳ್ಬೋದು.. ಯಾವುದಾದರೂ ಒಂದು ವಿಚಾರದಲ್ಲಿ ಸುದ್ದಿಯಲ್ಲಿಯೇ ಇರುತ್ತಾರೆ..
ಅದ್ರಲ್ಲೂ ಹೆಚ್ಚಾಗಿ ಅವರ ಮತ್ತು ಟಾಲಿವುಡ್ ನ ರೋಮ್ಯಾಂಟಿಕ್ ಹೀರೋ ವಿಜಯ್ ದೇವರಕೊಂಡ ನಡುವಿನ ಸಂಬಂಧದ ಬಗ್ಗೆ ಆಗಾಗ ಚರ್ಚೆಗಳು ಆಗ್ತಲೇ ಇರುತ್ವೆ… ಈ ಜೋಡಿಯ ಬಗ್ಗೆ ಗಾಸಿಪ್ ಗಳು ಹರಿದಾಡ್ತಿರುತ್ತವೆ.. ಇದರ ನಡುವೆ ಆಗಾಗ ೀ ಇಬ್ಬರೂ ಒಟ್ಟಾಗಿ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿರೋದು ಉಂಟು.. ಇದೀಗ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆಗಿರುವ ತಮ್ಮ ಮೆಚ್ಚಿನ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಗಾಸಿಕ್ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ರಶ್ಮಿಕಾ ಮಂದಣ್ಣ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳು ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ನೀವು, ವಿಜಯ್ ದೇವರಕೊಂಡ ಜೊತೆ ಕ್ಲಿಕ್ಕಿಸಿಕೊಂಡ ಫೇವರೇಟ್ ಫೋಟೋವನ್ನು ಶೇರ್ ಮಾಡುವಂತೆ ಕೇಳಿದ್ದಾರೆ. ಆಗ ರಶ್ಮಿಕಾ ಮಂದಣ್ಣ ಒಂದು ಚೂರು ಸಮಯವಕಾಶ ತೆಗೆದುಕೊಳ್ಳದೇ ಇಬ್ಬರು ಒಟ್ಟಿಗಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಕೊಚ್ಚಿಯಲ್ಲಿ ಡಿಯರ್ ಕಾಮ್ರೇಡ್ ಸಿನಿಮಾದ ಮ್ಯೂಸಿಕಲ್ ಫೆಸ್ಟ್ ನಡೆಯುತ್ತಿದ್ದ ವೇಳೆ ಈ ಫೋಟೋವನ್ನು ಕ್ಲಿಕ್ಕಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.