Rashmika Mandanna : ನಟಿ ರಶ್ಮಿಕಾ ಬ್ಯಾನ್ ಬಗ್ಗೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ….
ಸಿನಿಮಾರಂಗದಲ್ಲಿ ಸದ್ಯಕ್ಕೆ ಟಾಲಿವುಡ್ ನಟಿ ಅಂತಲೇ ನೆಟ್ಟಿಗರು ಬಿಂಬಿಸುತ್ತಿರುವ ರಶ್ಮಿಕಾ ಮಂದಣ್ಣ ,ಮೋಸ್ಟ್ ಸಕ್ಸಸ್ ಫುಲ್ , ಬೇಡಿಕೆಯಲ್ಲಿರುವ , ಬೃಹತ್ ಸಂಭಾವನೆ ಪಡೆಯುವ ನಟಿಯಾಗಿದ್ದಾರೆ.
ಕರ್ನಾಟಕದವರೇ ಆದ್ರೂ ಕನ್ನಡದ ಮೇಲಿನ ಅವರ ತಾತ್ಸಾರ ಅವರನ್ನ ಜನ ಟ್ರೋಲ್ ಮಾಡುವಂತೆ ಮಾಡುತ್ತಿದೆ.
ಯಾರಾದ್ರೂ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾರೆ, ಸ್ವಭಾಷಿಕರಿಂದಲೇ ಟೀಕೆಗೆ ಗುರಿಯಾಗ್ತಾರಂದ್ರೆ ಅದು ರಶ್ಮಿಕಾ ಮಂದಣ್ಣ ಅಂತ ಹಿಂದೂ ಮುಂದೂ ಯೋಚನೆ ಮಾಡ್ದೇ ಹೇಳಬಹುದು… ಅದು ಚಷ್ಮಾ ಸುಂದರಿ ರಶ್ಮಿಕಾ ಅಂತ.!!
ಟ್ರೋಲ್ ಗಳಿಗಷ್ಟೇ ಸೀಮಿತವಾಗ್ದೇ ಇದೀಗ ರಶ್ಮಿಕಾ ಬ್ಯಾನ್ ಆಗ್ಬೇಕು ಎಂಬ ದೊಡ್ಡ ಕೂಗು ಕೇಳಿಬರುತ್ತಿದೆ. ವಿವಾದಗಳಲ್ಲಿ ಸಿಲುಕಿ ಒದ್ದಾಡ್ತಿರುವ ರಶ್ಮಿಕಾ ಮಂದಣ್ಣಗೆ ಇದು ಒಂದ್ ರೀತಿ ತಾನೇ ತಂದುಕೊಂಡ ಭಾಗ್ಯ ಅಂದ್ರೆ ತಪ್ಪಾಗಲ್ಲ..
ಪ್ರೆಸ್ ಮೀಟ್‌ವೊಂದರಲ್ಲಿ ರಶ್ಮಿಕಾ ಬ್ಯಾನ್ ಬಗ್ಗೆ ಶಿವರಾಜ್ ಕುಮಾರ್ ಅವರನ್ನ ಕೇಳಿದಾಗ ನನಗೆ ಈ ಬಗ್ಗೆ ಗೊತ್ತಿಲ್ಲ. ಅವರ ಸಿನಿಮಾ ಚೆನ್ನಾಗಿ ಹೋಗುತ್ತೀದೆಯಾ ಅದನ್ನ ಅಷ್ಟೇ ನೋಡುತ್ತೇನೆ. ಕಾಂಟ್ರವರ್ಸಿಗಳ ಕಡೆ ನಾನು ಗಮನ ಕೊಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Rashmika Mandanna : Shivraj Kumar’s reaction to actress Rashmika’s ban….