ಕಡಿಮೆ ಅವಧಿಯಲ್ಲಿ ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆದ ನಟಿ ರಷ್ಮಿಕಾ ಮಂದಣ್ಣ. Rashmika Mandanna
ಪ್ರಸ್ತುತ ಸತತ ಸಿನಿಮಾಗಳ ಮೂಲಕ ಬ್ಯೂಸಿಯಾಗಿರುವ ರಶ್ಮಿಕಾ ಸದ್ಯ ಹಿಂದಿಯಲ್ಲಿ ನಟಿಸುತ್ತಿದ್ದಾರೆ.
ಅವರು ನಟಿಸಿರುವ ಸಿದ್ದಾರ್ಥ್ ಮಲ್ಹೋಥ್ರಾ ಜೊತೆ ನಟಿಸಿರುವ ಮಿಷನ್ ಮಜ್ನು ರಿಲೀಸ್ ಗೆ ಸಿದ್ಧವಾಗಿದೆ.
ಶೀಘ್ರದಲ್ಲಿಯೇ ಗುಡ್ ಬೈ ಕೂಡ ಪ್ರೇಕ್ಷಕರ ಮುಂದೆ ಬರಲಿದೆ.
ಸಿನಿಮಾ ಮಾತ್ರವಲ್ಲದೇ ಸೋಶೀಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಶ್ಮಿಕಾ, ಆಗಾಗ ಟ್ರೆಂಡಿ ಡ್ರೆಸ್ ಗಳನ್ನು ಧರಿಸುತ್ತಾ ಟ್ರೆಂಡ್ ಆಗುತ್ತಲೇ ಇರುತ್ತಾರೆ.
ತಮಿಳಿನಲ್ಲಿ ದಳಪತಿ ವಿಜಯ್ 66 ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿ ಪುಷ್ಪಪ 2 ನಲ್ಲೂ ಬ್ಯುಸಿಯಿದ್ದಾರೆ..
ಹೀಗಿರೋವಾಗಲೇ ಮತ್ತೊಂದು ತಮಿಳಿನ ಸಿನಿಮಾಗೆ ಆಫರ್ ಸಿಕ್ಕಿದೆ.. ಅದು ಸಹ ಸ್ಟಾರ್ ನಟನ ಜೊತೆಗೆ ನಟಿಸುವ ಅದೃಷ್ಟ ಸಿಕ್ಕಿದೆ ‘ಕಿರಿಕ್’ ರಾಣಿಗೆ..
ಟಾಲಿವುಡ್ ನಲ್ಲಿ ಮಹೇಶ್ ಬಾಬು ನಂತರ ಈಗ ಕಾಲಿವುಡ್ ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್‌ಗೆ ನಾಯಕಿಯಾಗಿ ನಟಿಸಲು ರಶ್ಮಿಕಾ ಮಂದಣ್ಣಗೆ
ಅವಕಾಶ ಸಿಕ್ಕಕಿದೆ.. ಕಾಲಿವುಡ್ ನಟ ಚಿಯಾನ್ ವಿಕ್ರಮ್ ರ 61ನೇ ಸಿನಿಮಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.. ಕಬಾಲಿ, ಕಾಲಾ ಖ್ಯಾತಿಯ ನಿರ್ದೇಶಕ ಪಾ ರಂಜಿತ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ನಾಯಕಿ ಎನ್ನಲಾಗ್ತಿದೆ..
ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ..








