ನಾನು ಕಲ್ಲಾಗಿದ್ದೀನಿ… ಟ್ರೋಲ್ ಗಳಿಗೆ ತಲೆ ಕಡೆಸಿಕೊಳ್ಳಲ್ಲ – ರಷ್ಮಿಕಾ
ಸ್ಯಾಂಡಲ್ ವುಡ್ ನ ಕಿರಿಕ್ ಪಾರ್ಟಿ ಮೂಲಕ ನ್ಯಾಷನಲ್ ಕ್ರಷ್ ಆದ ಚಷ್ಮಾ ಸುಂದರಿ ಟಾಲಿವುಡ್ , ಕಾಲಿವುಡ್ , ಈಗ ಬಾಲಿವುಡ್ ನಲ್ಲಿ ಮಿಂಚು ಹರಿಸುತ್ತಿದ್ದಾರೆ.. ಒನ್ ಆಫ್ ದ ಬ್ಯುಸಿಯೆಸ್ಟ್ ನಟಿಯರಲ್ಲಿ ರಶ್ಮಿಕಾ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ..
ಸದ್ಯ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸುತ್ತಿದ್ದಾರೆ. ಕೊರೊನಾ 2ನೇ ಅಲೆ ಮುಗಿಯುತ್ತಿದ್ದಂತೆ ರಶ್ಮಿಕಾ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಬಾಲಿವುಡ್ ಸಿನಿಮಾ ಚಿತ್ರೀಕರಣಕ್ಕಾಗಿ ಮುಂಬೈನಲ್ಲೇ ಬೀಡುಬಿಟ್ಟಿದ್ದಾರೆ. ಮುಂಬೈನಲ್ಲಿ ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ. 
ಸಾಲು ಸಾಲು ಸಿನಿಮಾಗಳಲ್ಲಿ ಮಿಂಚುತ್ತಿರುವ ರಷ್ಮಕಾಗೆ ಅಪಾರ ಅಭಿಮಾನಿಗಳಿದ್ದಾರೆ.. ಆದ್ರೆ ಅದಕ್ಕಿಂತ ಒಂದು ಪಟ್ಟು ಹೆಚ್ಚು ಹೇಟರ್ಸ್ ಇದ್ದಾರೆ.. ಟ್ರೋಲಿಗರೇ ಇದ್ದಾರೆ ಅಂದ್ರೆ ತಪ್ಪಾಗಲಾರದು.. ಅದಕ್ಕೆ ಮುಖ್ಯ ಕಾರಣ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕ್ ಅಪ್.. ಅದ್ರಲ್ಲೂ ಬ್ರೇಕ್ ಅಪ್ ಆಗಿದ್ದ ಟೈಮ್ ನಲ್ಲಂತೂ ರಷ್ಮಿಕಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಯಾವ ಟ್ರೋಲ್ ಪೇಜ್ ನೋಡಿದ್ರೂ ಅಲ್ಲೆಲ್ಲಾ ರಷ್ಮಿಕಾ ಅವರದ್ದೇ ಸುದ್ದಿಯಾಗಿಬಿಟ್ಟಿತ್ತು.
ಕಿರಿಕ್ ಪಾರ್ಟಿ ಸೂಪರ್ ಹಿಟ್ ಆದ ಬಳಿಕ ರಷ್ಮಿಕಾ ನಸೀಬ್ ಬದಲಾಗಿಬಿಟ್ಟಿತ್ತು.. ಪರ ಬಾಷೆಗಳಿಂದ ಆಫರ್ ಗಳ ಸುರಿಮಳೆಯೇ ಬಂದಿತ್ತು.. ಬಳಿಕ ಟಾಲಿವುಡ್ ಗೆ ಕಾಲಿಟ್ಟ ರಶ್ಮಿಕಾ ಮೊದಲ ಸಿನಿಮಾದಲ್ಲೇ ತೆಲುಗು ಪ್ರೇಕ್ಷಕರ ಮನಗೆದ್ದರು. ಅಷ್ಟರಲ್ಲೇ ರಶ್ಮಿಕಾ ನಟ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಅದ್ದೂರಿಯಾಗಿ ರಕ್ಷಿತ್ ಜೊತೆ ಎಂಗೇಜ್ ಆಗುತ್ತಿದ್ದಂತೆ ತೆಲುಗು ಕಡೆ ಮುಖಮಾಡಿದರು. ತೆಲುಗಿನಲ್ಲಿ ನಟ ವಿಜಯ್ ದೇವರಕೊಂಡ ಜೊತೆ ಗೀತಾ ಗೋವಿಂದಂ ಸಿನಿಮಾದಲ್ಲಿ ಕಾಣಿಸಿಕೊಂಡ ರಶ್ಮಿಕಾ ಸಿಕ್ಕಾಪಟ್ಟೆ ಸುದ್ದಿಯಾದರು. ವಿಜಯ್ ಜೊತೆ ಕಿಸ್ಸಿಂಗ್ ದೃಶ್ಯದಲ್ಲಿ ನಟಿಸಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ರಶ್ಮಿಕಾ ಬಗ್ಗೆ ಕನ್ನಡಾಭಿಮಾನಿಗಳು , ರಕ್ಷಿತ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು.. ಆಗ್ಲಿಂದಲೇ ಅನೇಕ ಗೊಂದಲಗಳು ಶುರುವಾಗಿತ್ತು..
ಅದೆ ಸಮಯದಲ್ಲಿ ನಟ ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಕೂಡ ಮಾಡಿಕೊಂಡರು. ರಕ್ಷಿತ್ ಅವರಿಂದ ದೂರ ಆಗುತ್ತಿದ್ದಂತೆ ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಿಯಾದರು. ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾರನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಲಾಯಿತು. ರಶ್ಮಿಕಾ ಏನೆ ಮಾಡಿದರು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದರು. ಯಾವುದೇ ಪೋಸ್ಟ್ ಶೇರ್ ಮಾಡಿದರೂ ಕೆಟ್ಟದಾಗಿ ಕಾಮೆಂಟ್ ಮಾಡಿ ರಶ್ಮಿಕಾ ಕಾಲೆಳೆಯುತ್ತಿದ್ದರು. ಈಗ ಮೊದಲಿನಷ್ಟು ಇಲ್ಲ ಅಂದ್ರೂ ರಷ್ಮಿಕಾರನ್ನ ನೆಟ್ಟಿಗರು ಟ್ರೋಲ್ ಮಾಡೋದನ್ನ ಮಾತ್ರ ಬಿಟ್ಟಿಲ್ಲ.
ಇತ್ತೀಚೆಗೆ ರಷ್ಮಿಕಾ ಟ್ರೋಲ್ ಗಳನ್ನು ಎದುರಿಸಿದ ರೀತಿಯ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ನಿರ್ಮಾಪಕಿ ಅನುಪಮಾ ಚೋಪ್ರಾಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಬ್ರೇಕಪ್ ಬಳಿಕ ನಿಭಾಯಿಸಿದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಪ್ರಾರಂಭದಲ್ಲಿ ಇದು ತುಂಬಾ ಕಷ್ಟವಾಗಿತ್ತು. ನಮ್ಮ ಕುಟುಂಬ ಸಿನಿಮಾ ಬ್ಯಾಕ್ ಗ್ರೌಂಡ್ ನಿಂದ ಬಂದಿದ್ದಲ್ಲ. ಯಾರಿಗೂ ಕೂಡ ಸಿನಿಮಾಗೆ ಸಂಬಂಧ ಇರಲಿಲ್ಲ. ನನಗೆ ಎಲ್ಲವೂ ಹೊಸದಾಗಿತ್ತು. ಜನರು ನನ್ನನು ಟ್ರೋಲ್ ಮಾಡುತ್ತಿದ್ದರು, ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದರು. ತುಂಬಾ ಗಂಭೀರವಾಗಿ ಪರಿಗಣಿಸುತ್ತಿದ್ದೆ. ತುಂಬಾ ಉಸಿರುಗಟ್ಟಿಸುವ ವಾತಾವರಣವಾಗಿತ್ತು ಎಂದಿದ್ದಾರೆ.
ಜನರು ನಿಮ್ಮ ಬಾಡಿ, ಬಣ್ಣ, ಸಂಬಂಧ ಸೇರಿದಂತೆ ಎಲ್ಲದರ ಬಗ್ಗೆಯೂ ಮಾತನಾಡುತ್ತಾರೆ. ಆಗ ನನಗೆ ಇದು ತುಂಬಾ ಕಷ್ಟವಾಗಿತ್ತು. ಕೆಲವು ಬಾರಿ ನನಗೆ ತುಂಬಾ ನೋವಾಗಿತ್ತು. ಕೆಲಸದ ಬಗ್ಗೆ ಕಾಮೆಂಟ್ ಮಾಡಿ. ಆದರೆ ನನ್ನ ಬಾಲ್ಯದ ಫೋಟೋ, ನನ್ನ ಕುಟುಂಬದ ಬಗ್ಗೆ ಕಾಮೆಂಟ್ ಮಾಡುವುದು ಹೇಳಿದ್ದಾರೆ.
19ನೇ ವಯಸ್ಸಿನಲ್ಲೇ ನನಗೆ ಟ್ರೋಲ್ ಕಾಟ ಶುರುವಾಗಿತ್ತು. ಆದರೆ ಈಗ ನಾನು ಕಲ್ಲಾಗಿದ್ದೇನೆ. ಈಗ ನನಗೆ ಟ್ರೋಲ್ ಯಾವುದೇ ಮ್ಯಾಟರ್ ಆಗಲ್ಲ. ಈಗ ತುಂಬಾ ಹಗುರವಾಗಿ ತೆಗೆದುಕೊಳ್ಳುತ್ತೇನೆ. ಟ್ರೋಲ್ ನೋಡಿದರೆ ಹಾ..ಹಾ.. ಎಂದು ನಗುತ್ತೇನೆ ಅಷ್ಟೆ. ಓ ದೇವರೆ ಹಾಗಿಯಿತು, ಹೀಗಾಯಿತು ಅಂತ ಎಲ್ಲಾ ಸ್ಟಾರ್ಸ್ ಗೂ ಅನುಭವವಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಜನ ಎಲ್ಲಾ ಕಡೆಯಿಂದ ಪಂಚ್ ಮಾಡುತ್ತಲ್ಲೇ ಇದ್ದಾಗ ಮಾಡಿ ಎಂದು ಸುಮ್ಮನಾಗುವುದು ಅಷ್ಟೆ. ನೀವು ನನಗೆ ಏನು ಕೊಟ್ಟರೂ ತೆಗೆದುಕೊಳ್ಳುತ್ತೇನೆ. ಜನರು ನನ್ನ ಬಗ್ಗೆ ಒಳ್ಳೆಯಮಾತುಗಳನ್ನು ಆಡಿದ್ದಾರೆ. ತನ್ನ ಕೆಲಸವನ್ನು ಇಷ್ಟಪಟ್ಟಿದ್ದಾರೆ. ಎಲ್ಲಾ ಕಡೆ ಕೆಟ್ಟದ್ದು ಮತ್ತು ಒಳ್ಳೆಯದ್ದು ಎರಡು ಇರುತ್ತದೆ. ಜನರು ನನ್ನನ್ನು ಸಾನ್ವಿ ಎನ್ನುತ್ತಾರೆ, ಲಿಲ್ಲಿ ಎನ್ನುತ್ತಾರೆ, ಗೀತಾ ಎಂದು ಕರೆಯುತ್ತಾರೆ ಇದು ತುಂಬಾ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.
ಸದ್ಯ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ರಷ್ಮಿಕಾ ನಾಯಕಿಯಾಗಿದ್ದು, ಈ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.. ಬಾಲಿವುಡ್ ನಲ್ಲಿ ಮಿಷನ್ ಮಜ್ನು ಮತ್ತು ಗುಡ್ ಬೈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ನಾನು ಶೂಟಿಂಗ್ ಗೆ ಹೋದ್ರೆ … ಪೋಷಕರು ಭಯ ಪಡ್ತಾರೆ – ರಶ್ಮಿಕಾ








