ನಾನು ಶೂಟಿಂಗ್ ಗೆ ಹೋದ್ರೆ … ಪೋಷಕರು ಭಯ ಪಡ್ತಾರೆ – ರಶ್ಮಿಕಾ
ಸ್ಯಾಂಡಲ್ ವುಡ್ ನ ಕಿರಿಕ್ ಪಾರ್ಟಿ ಮೂಲಕ ನ್ಯಾಷನಲ್ ಕ್ರಷ್ ಆದ ಚಷ್ಮಾ ಸುಂದರಿ ಟಾಲಿವುಡ್ ಟಾಲಿವುಡ್ ಈ ಬಾಲಿವುಡ್ ನಲ್ಲಿ ಮಿಂಚು ಹರಿಸುತ್ತಿದ್ದಾರೆ.. ಒನ್ ಆಫ್ ದ ಬ್ಯುಸಿಯೆಸ್ಟ್ ನಟಿಯರಲ್ಲಿ ರಶ್ಮಿಕಾ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ..
ಸದ್ಯ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸುತ್ತಿದ್ದಾರೆ. ಕೊರೊನಾ 2ನೇ ಅಲೆ ಮುಗಿಯುತ್ತಿದ್ದಂತೆ ರಶ್ಮಿಕಾ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಬಾಲಿವುಡ್ ಸಿನಿಮಾ ಚಿತ್ರೀಕರಣಕ್ಕಾಗಿ ಮುಂಬೈನಲ್ಲೇ ಬೀಡುಬಿಟ್ಟಿದ್ದಾರೆ. ಮುಂಬೈನಲ್ಲಿ ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ. ಆದ್ರೆ ರಶ್ಮಿಕಾ ಶೂಟಿಂಗ್ ಗಾಗಿ ಹೈದ್ರಾಬಾದ್ ಮುಂಬೈ ಅಂತ ಸಖತ್ ಓಡಾಟ ನಡೆಸಸುತ್ತಿರೋದ್ರಿಂದ ಅವರ ಪೋಷಕರು ತುಂಬಾ ಭಯಪಡುತ್ತಾರೆ ಎಂದು ರಶ್ಮಿಕಾ ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಬಹಿರಂಗ ಪಡಿಸಿದ್ದಾರೆ.
Rap ಸಿಂಗರ್ ‘ಯೋ ಯೋ ಹನಿಸಿಂಗ್’ ವಿರುದ್ಧ ದೌರ್ಜನ್ಯ ಕೇಸ್ ದಾಖಲಿಸಿದ ಪತ್ನಿ
ಈ ಬಗ್ಗೆ ಮಾತನಾಡಿರುವ ರಶ್ಮಿಕಾ, ಚಿತ್ರೀಕರಣ ನಡೆಯುವಾಗ ನಮಗೆ ಮಾಸ್ಕ್ ಧರಿಸಲು ಸಾಧ್ಯವಿಲ್ಲ. ಆದರೆ ಅವರೂ ನನಗೆ ಏನು ಹೇಳುವುದಿಲ್ಲ. ಯಾಕೆಂದರೆ ಇದು ನನ್ನ ಕೆಲಸ ಎಂದಿದ್ದಾರೆ. ಕೆಲಸ ಅಂತ ಬಂದಾಗ ನಾನು ಯಾರನ್ನು ಎಂಟ್ರಿ ಕೊಡಲು ಬಿಡುವುದಿಲ್ಲ ಎಂದು ರಶ್ಮಿಕಾ ಹೇಳಿದ್ದಾರೆ.
ಒಂದು ವೇಳೆ ಪೋಷಕರು ಈ ಸಮಯದಲ್ಲಿ ಚಿತ್ರೀಕರಣ ಮಾಡುವುದು ಸುರಕ್ಷಿತವಲ್ಲ, ಹೋಗಬೇಡ ಎಂದು ಹೇಳಿದರೆ ನಾನು ಕೇಳುವುದಿಲ್ಲ ಎಂದು ಅವರಿಗೂ ಗೊತ್ತು. ಆದರೆ ಸಿನಿಮಾಗಾಗಿ ತುಂಬಾ ಹಣ ಹಾಕಿರುತ್ತಾರೆ. ನಾನು ಕೆಲಸವನ್ನು ಮಾಡಲೇ ಬೇಕಾಗಿರುತ್ತದೆ ಎಂದು ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ನಾಯಕನಾಗಿರುವ ಮಿಷನ್ ಮಜ್ನು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರಶ್ಮಿಕಾ ಸಹಿ ಮಾಡಿದ ಮೊದಲ ಬಾಲಿವುಡ್ ಸಿನಿಮಾವಿದಾಗಿದೆ.
ಹೆಡ್ – ಬುಶ್ ಗೆ ಡಾಲಿ ನಿರ್ಮಾಪಕ – ಈ ನಿರ್ಧಾರಕ್ಕೆ ನಿಜವಾದ ಕಾರಣವೇನು..?
ಇನ್ನೂ ಸಿನಿಮಾಗಳು ಮತ್ತಿತ್ತರ ಪಾಸಿಟಿವ್ ವಿಚಾರಗಳಿಗಿಂತಲೂ ಹೆಚ್ಚಾಗಿ ನೆಗೆಟಿವ್ ವಿಚಾರಗಳಿಂದಲೇ ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್ ಆಗುವ ನಟಿಯಾಗಿದ್ದಾರೆ.. ರಶ್ಮಿಕಾ ಅವರು ಈ ಬಗ್ಗೆ ತಲೆ ಕೆಡಿಸಿಕೊಳ್ಲೋದಿಲ್ಲ.. ಆದ್ರೆ ರಶ್ಮಿಕಾ ಬಿಟ್ರು ಟ್ರೋಲಿಗರು ಅವನರನ್ನ ಬಿಡೋದಿಲ್ಲ..