Rashmika vs Rishab : ನ್ಯಾಷನಲ್ ಕ್ರಶ್ ರಶ್ಮಿಕಾಗೆ ಅವರದೇ ಸ್ಟೈಲ್ ನಲ್ಲಿ ರಿಷಬ್ ಶೆಟ್ಟಿ ತಿರುಗೇಟು
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಅವರದೇ ಸ್ಟೈಲ್ ನಲ್ಲಿ ರಿಷಬ್ ಶೆಟ್ಟಿ ತಿರುಗೇಟು ನೀಡಿದ್ದಾರೆ.
ರಿಷಬ್ ನಿರ್ದೇಶನದ ಸಿನಿಮಾ ‘ಕಿರಿಕ್ ಪಾರ್ಟಿ’ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, ನ್ಯಾಷನಲ್ ಕ್ರಶ್ ಪಟ್ಟವನ್ನು ಅಲಂಕರಿಸಿದವರು ನಟಿ ರಶ್ಮಿಕಾ ಮಂದಣ್ಣ. ಇತ್ತೀಚೆಗೆ ರಶ್ಮಿಕಾ ಯೂಟ್ಯೂಬ್ ಚಾನಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದರು.
ಕಾಲೇಜ್ ನಲ್ಲಿ ಓದುತ್ತಿದ್ದಾಗ ‘ಫ್ರೆಶ್ ಫೇಸ್’ ಕಾಂಟೆಸ್ಟ್ ನಲ್ಲಿ ಗೆದ್ದಿದ್ದ ನನ್ನ ಒಂದು ಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅದರಲ್ಲಿ ನಾನು ಬಹಳ ಕೆಟ್ಟದಾಗಿ ಕಾಣುತ್ತಿದೆ. ಅದೇ ಸಮಯಕ್ಕೆ ‘ಕಿರಿಕ್ ಪಾರ್ಟಿ’ ತಂಡ ನಾಯಕಿಗಾಗಿ ಹುಡುಕಾಟ ನಡೆಸ್ತಾ ಇದ್ದರು. ನನ್ನ ಫೋಟೊ ನೋಡಿ ನನ್ನ ಹಿಂದೆ ದುಂಬಾಲು ಬಿದ್ದು ನಟಿಸುವಂತೆ ಕೇಳಿಕೊಂಡಿದ್ದರು ಎಂದು ಅವರು ಆ ಸಂದರ್ಶನದಲ್ಲಿ ಹೇಳಿದ್ದರು.
ನಿರ್ದೇಶಕ ರಿಷಬ್ ಶೆಟ್ಟಿ, ನಟ ರಕ್ಷಿತ್ ಶೆಟ್ಟಿ, ‘ಪರಂವಹ್ ಸ್ಟುಡಿಯೋಸ್’ ಹೆಸರು ಹೇಳದೇ ವ್ಯಂಗ್ಯವಾಗಿ ಕೈ ಸನ್ನೆ ಮಾಡಿ ತೋರಿಸುತ್ತಾ ಆ ಸಂಸ್ಥೆಯಿಂದ ಕರೆ ಬಂದಿತ್ತು ಎಂದು ಸಂದರ್ಶನದಲ್ಲಿ ರಶ್ಮಿಕಾ ಹೇಳಿದ್ದರು.
ಇದೀಗ ರಿಷಬ್ ಶೆಟ್ಟಿ ಯೂಟ್ಯೂಬ್ ಸಂದರ್ಶನದಲ್ಲಿ ಪರೋಕ್ಷವಾಗಿ ರಶ್ಮಿಕಾಗೆ ತಿರುಗೇಟು ನೀಡಿದ್ದಾರೆ. ಯೂಟ್ಯೂಬ್ ಸಂದರ್ಶನದಲ್ಲಿ ರಿಷಬ್ ಶೆಟ್ಟಿ, ರಶ್ಮಿಕಾ ಕೈ ಸನ್ನೆ ಮಾಡಿ ತೋರಿಸಿದಂತೆ ಮಾಡಿ ಈ ತರಹದ ನಟಿಯರ ಜೊತೆ ನಟಿಸಲು ಇಷ್ಟ ಇಲ್ಲ ಎಂದಿದ್ದಾರೆ.
ಯೂಟ್ಯೂಬ್ ಸಂದರ್ಶನದಲ್ಲಿ ರಿಷಬ್ ಶೆಟ್ಟಿಗೆ ಸಮಂತಾ, ರಶ್ಮಿಕಾ, ಕೀರ್ತಿ ಸುರೇಶ್, ಸಾಯಿ ಪಲ್ಲವಿ ಈ 4 ಜನರಲ್ಲಿ ಯಾರ ನಟನೆ ಇಷ್ಟ? ಯಾರೊಟ್ಟಿಗೆ ನಟಿಸ್ತೀರಾ? ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಿದ ರಿಷಬ್, ಸ್ಕ್ರಿಪ್ಟ್ ಮುಗಿದ ಮೇಲೆ ಕಲಾವಿದರ ಬಗ್ಗೆ ನಾನು ಯೋಚಿಸುತ್ತೇನೆ. ಹೊಸ ಕಲಾವಿದರ ಜೊತೆ ನಟಿಸಲು ಇಷ್ಟಪಡುತ್ತೇನೆ. ನೀವು ಹೇಳಿದ ಹೆಸರುಗಳಲ್ಲಿ ಈ ತರಹದ (ರಶ್ಮಿಕಾ ಸನ್ನೆ ಮಾಡಿ ತೋರಿಸಿದಂತೆ) ನಟಿಯರು ನನಗೆ ಇಷ್ಟ ಇಲ್ಲ ಎಂದು ಹೇಳಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ರಶ್ಮಿಕಾಗೆ ರಿಷಬ್ ಶೆಟ್ಟಿ ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ.