ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಸಾವಿಗೆ ಇಡೀ ಲೋಕ ಕಂಬನಿ ಮಿಡಿಯುತ್ತಿದೆ. ಈ ಮಧ್ಯೆ ರತನ್ ಟಾಟಾ ಅವರ ಮಾಜಿ ಪ್ರೇಯಸಿ ಎಂದೆ ಗುರುತಿಸಲಾಗಿದ್ದ ಹಾಗೂ ಹಿರಿಯ ನಟಿ ಸಿಮಿ ಗರೆವಾಲ್ (Simi Garewal) ಎಕ್ಸ್ ನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.
ನೀವು ಹೋಗಿದ್ದೀರಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ನೀವು ನಮ್ಮ ಜೊತೆಗೆ ಇಲ್ಲ ಎನ್ನುವ ಸತ್ಯ ಅರಗಿಸಿಕೊಳ್ಳುವುದು ತುಂಬಾ ಕಷ್ಟ. ಹೋಗಿ ಬನ್ನಿ ನನ್ನ ಗೆಳೆಯ ಎಂದು ಪೋಸ್ಟ್ ನಲ್ಲಿ ಬರೆದು ಭಾವುಕರಾಗಿದ್ದಾರೆ.
2011ರಲ್ಲಿ ಸಂದರ್ಶನವೊಂದರಲ್ಲಿ ನಟಿ ಸ್ವತಃ ರತನ್ ಟಾಟಾ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದರು. ಅವರು ಪರಿಪೂರ್ಣ ವ್ಯಕ್ತಿ, ಹಾಸ್ಯ ಪ್ರಜ್ಞೆ ಕೂಡ ಚೆನ್ನಾಗಿತ್ತು, ಸಭ್ಯರು, ಯಾವಾಗಲೂ ಅವರು ಶ್ರೀಮಂತಿಕೆ ತೋರಿಸಿಕೊಂಡವರಲ್ಲ ಎಂದು ಹೇಳಿದ್ದರು. ಆನಂತರ ಸಿಮಿ ಅವರು ರತನ್ ಅವರಿಂದ ದೂರವಾಗಿ ಬೇರೊಬ್ಬರನ್ನು ವಿವಾಹವಾಗಿದ್ದರು. ಹಲವು ವರ್ಷಗಳ ಕಾಲ ಸಿಮಿ ಹಾಗೂ ರತನ್ ಉತ್ತಮ ಸ್ನೇಹಿತರಾಗಿದ್ದರು.
ಸಂದರ್ಶನವೊಂದರಲ್ಲಿ ಸ್ವತಃ ರತನ್ ಟಾಟಾ ನಾಲ್ಕು ಬಾರಿ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ, ಯಾವುದೂ ಮದುವೆಯ ಹಂತ ತಲುಪಲಿಲ್ಲ. 1960 ರ ದಶಕದಲ್ಲಿ ಅಮೆರಿಕದಲ್ಲಿ ಕೆಲಸ ಮಾಡುವಾಗ ರತನ್ ಟಾಟಾ ಹುಡುಗಿಯನ್ನು ಪ್ರೀತಿಸಿದ್ದರು. ಆಗ ಭಾರತದಲ್ಲಿ ಯುದ್ಧ ನಡೆಯುತ್ತಿತ್ತು. ಅವರು ಕೂಡ ಮದುವೆಗೆ ತಿರಸ್ಕರಿಸಿದ್ದರು.