2025ರವರೆಗೆ ಮಾನ್ಯತೆ ಇರುವ ರೇಷನ್ ಕಾರ್ಡ್ ಹೊಂದಿರುವ ಎಲ್ಲರೂ ತಕ್ಷಣವೇ ಇ-ಕೆವೈಸಿ (e-KYC) ಮಾಡಿಸಬೇಕು. ಇಲ್ಲದಿದ್ದರೆ, ನಿಮಗೆ ದೊರೆಯುತ್ತಿರುವ ಉಚಿತ ರೇಷನ್ ಸೌಲಭ್ಯವನ್ನು ಸರ್ಕಾರ ರದ್ದು ಮಾಡುವ ಎಂಬ ಸಾಧ್ಯತೆ ಇದೆ.
ಇ-ಕೆವೈಸಿ ಅಂದರೆ ಏನು?
ಇದು ಒಂದು ಇಲೆಕ್ಟ್ರಾನಿಕ್ ಕೆವೈಸಿ ಪ್ರಕ್ರಿಯೆ, ಅಂದರೆ ನೀವು ಆಧಾರ್ ಕಾರ್ಡ್ ಮೂಲಕ ನಿಮ್ಮ ವಿವರಗಳನ್ನು ಸರ್ಕಾರದ ಪೋರ್ಟಲ್ನಲ್ಲಿ ವೆರಿಫೈ ಮಾಡಬೇಕು. ಇದು ಮಾಡಿದ್ರೆ ಸರ್ಕಾರಕ್ಕೆ ನಿಖರವಾದ ಫಲಾನುಭವಿಗಳ ಲಿಸ್ಟ್ ಸಿಗುತ್ತೆ.
ಯಾಕೆ ಇ-ಕೆವೈಸಿ ಕಡ್ಡಾಯವಾಗಿದೆ?
ಇತ್ತೀಚೆಗೆ ಹಲವರು ಹಳೆಯ ದಾಖಲೆಗಳ ಆಧಾರದ ಮೇಲೆ ಅಥವಾ ನಕಲಿ ವಿವರಗಳಿಂದ ರೇಷನ್ ಪಡೆಯುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ನಷ್ಟವಾಗ್ತಿದೆ. ಇದನ್ನು ತಪ್ಪಿಸಲು, ನಿಜವಾದ ಬಡವರಿಗೇ ಸೌಲಭ್ಯ ಸಿಗಲೆಂದು ಸರ್ಕಾರ ಇ-ಕೆವೈಸಿ ಕಡ್ಡಾಯ ಮಾಡಿದೆ.
ನೀವು ಏನು ಮಾಡಬೇಕು?
1. ನಿಮ್ಮ ಇ-ಕೆವೈಸಿ ಆಗಿದೆಯಾ ಇಲ್ಲವೋ ಪರಿಶೀಲಿಸಿ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಹೋಗಿ.
ನಿಮ್ಮ ರೇಷನ್ ಕಾರ್ಡ್ ವಿವರಗಳನ್ನು ಹಾಕಿ, ಸ್ಟೇಟಸ್ ಪರಿಶೀಲಿಸಿ.
2. ಇನ್ನು ಇ-ಕೆವೈಸಿ ಮಾಡಿಲ್ಲದಿದ್ದರೆ?
ತಕ್ಷಣವೇ ಹತ್ತಿರದ ಅನ್ನಭಾಗ್ಯ ಕೇಂದ್ರ / ಪಡಿತರ ಅಂಗಡಿ / ಗ್ರಾಮ ಪಂಚಾಯತಿ / ಫುಡ್ ಡಿಪಾರ್ಟ್ಮೆಂಟ್ ಕಚೇರಿಗೆ ಹೋಗಿ.
ನಿಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ತೆಗೆದುಕೊಂಡು ಹೋಗಿ.
ಅಲ್ಲಿ ನಿಮ್ಮ ಇ-ಕೆವೈಸಿ ಪ್ರಕ್ರಿಯೆ ನೆರವೇರಿಸುತ್ತಾರೆ.
ಆನ್ಲೈನ್ಲ್ಲಿ ಹೇಗೆ ಪರಿಶೀಲಿಸೋದು?
1. ಕೆಳಗಿನ ವೆಬ್ಸೈಟ್ಗೆ ಹೋಗಿ:
ahara.kar.nic.in
2. e-KYC Status Check ಎಂಬ ಆಯ್ಕೆ ಆಯ್ದುಕೊಳ್ಳಿ.
3. ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಕಿ, ನಿಮ್ಮ ಸ್ಟೇಟಸ್ ನೋಡಿ.
ಗಮನದಲ್ಲಿರಿಸಬೇಕು:
ಇ-ಕೆವೈಸಿ ಪ್ರಕ್ರಿಯೆ ನಿಖರವಾಗಿ ಹಾಗೂ ಉಚಿತವಾಗಿ ನಡೆಯುತ್ತದೆ.
ಒಂದಕ್ಕಿಂತ ಹೆಚ್ಚು ಕಾರ್ಡ್ ಇದ್ದರೆ, ಅದನ್ನ ತಕ್ಷಣವೇ ಸ್ಪಷ್ಟಪಡಿಸಿ.
ಇ-ಕೆವೈಸಿ ಇಲ್ಲದಿದ್ದರೆ, ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಹುದು.
ಸರ್ಕಾರದ ಈ ಹೊಸ ರೂಲ್ ಎಲ್ಲ ಬಡ ಕುಟುಂಬಗಳಿಗೆ ಅನುಕೂಲವಾಗಲು ತರಲಾಗಿದೆ. ನೀವು ಯಾವುದೇ ರೀತಿಯಲ್ಲಿ ಈ ಸೌಲಭ್ಯ ತಪ್ಪಿಸಿಕೊಳ್ಳಬೇಡಿ. ತಕ್ಷಣವೇ ನಿಮ್ಮ ಇ-ಕೆವೈಸಿ ಮಾಡಿ, ಉಚಿತ ರೇಷನ್ ಪಡೆಯಲು ಅರ್ಹರಾಗಿರಿ.
![{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}](https://saakshatv.com/wp-content/uploads/2025/04/Picsart_25-04-11_20-53-27-540-750x500.jpg)







