ADVERTISEMENT
Tuesday, April 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಬೆಳಗೆರೆ ಸಿನಿಮಾ ಜರ್ನಿ : ಸಿನಿಮಾರಂಗದವರ ಜೊತೆಗಿನ ವಿವಾದಗಳು..!

Namratha Rao by Namratha Rao
November 13, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

Ravi belagere

ಚಿತ್ರಕಥೆ ಬರಹಗಾರ, ನಟ, ಕ್ರೈಂ ಡೈರಿ ಕಾರ್ಯಕ್ರಮ ನಿರೂಪಕ, ಹಾಯ್ ಬೆಂಗಳೂರು ಹಾಗೂ ಓ ಮನಸೇ ಪತ್ರಿಕೆಯ ಸಂಪಾದಕ, ಖ್ಯಾತ ಪತ್ರಕರ್ತ, ನಿರೂಪಕ, ಲೇಖಕ, ಕಾದಂಬರಿಕಾರ ಆಗಿರುವ ರವಿ ಬೆಳಗೆರೆ ಅವರು ತಡರಾತ್ರಿ ಹೃದಯಾಘಾತದಿಂದ ಅಸ್ತಂಗತರಾಗಿದ್ದಾರೆ. 62 ವರ್ಷದ ಬೆಳಗೆರೆ ಅವರ ನಿಧನಕ್ಕೆ ನಟ ಸುದೀಪ್, ಜಗ್ಗೇಶ್, ಯೋಗರಾಜ್ ಭಟ್, ಕವಿರಾಜ್, ಸಿಂಪಲ್ ಸುನಿ ಸೇರಿದಂತೆ ಅನೇಕರು ರವಿ ಬೆಳಗೆರೆ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Related posts

ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿದರೆ ಕಠಿಣ ಕ್ರಮ ಗೃಹ ಸಚಿವ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ

ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿದರೆ ಕಠಿಣ ಕ್ರಮ ಗೃಹ ಸಚಿವ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ

April 7, 2026
ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ವದಂತಿಗಳಿಗೆ ಬ್ರೇಕ್ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದ ಗೃಹ ಸಚಿವ ಜಿ ಪರಮೇಶ್ವರ್

ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ವದಂತಿಗಳಿಗೆ ಬ್ರೇಕ್ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದ ಗೃಹ ಸಚಿವ ಜಿ ಪರಮೇಶ್ವರ್

April 7, 2026

ಸಿನಿಮಾರಂಗದ ಜೊತೆ ಅಪಾರ ನಂಟು ಹೊಂದಿದ್ದ ಬೆಳಗೆರೆ ಅವರು ಕೆಲ ಸಿನಿಮಾಗಳಲ್ಲಿ ನಟಿಸಿ   ನಟನಾಗಿಯೂ ಗುರುತಿಸಿಕೊಂಡಿದ್ದಾರೆ. ಆದರೆ ಅವರು ಅಷ್ಟರ ಮಟ್ಟಿಗೆ ಖ್ಯಾತಿ ಗಳಿಸಲು ಸಾಧ್ಯವಾಗಿರಲಿಲ್ಲ. ರವಿ ಶ್ರೀವತ್ಸ ನಿರ್ದೇಶನದ ಗಂಡ ಹೆಂಡತಿ ಸಿನಿಮಾ ಮೂಲಕ ರವಿ ಬೆಳಗೆರೆ ಬೆಳ್ಳೆ ಪರದೆ ಮೇಲೆ ಮೊದಲ ಬಾರಿಗೆ ಕಾಣಿಸಿಕೊಂಡರು. ಬಳಿಕ ಶಿವರಾಜ್ ಕುಮಾರ್ ಅಭಿನಯದ ಮಾದೇಶ, ವಾರಸ್ದಾರ, ಡೆಡ್ಲಿ ಸೋಮ ಸಿನಿಮಾಗಳಲ್ಲಿ ನಟಿಸಿದ್ದಾರೆ.  ರವಿ ಬೆಳಗೆರೆ ಧಾರಾವಹಿಯಲ್ಲೂ ನಟಿಸಿದ್ದಾರೆ.

ಇನ್ನೂ ಬೆಳಗೆರೆ ಅವರು ಸಿನಿಮಾರಂಗದ ಕೆಲ ವಿವಾದಗಳಿಂದಲೂ ಆಗಾಗ ಚರ್ಚೆಯಲ್ಲಿದ್ದವರು. ಹೌದು ಬೆಳಗೆರೆ ಅವರಿಗೆ ಎಷ್ಟು ಹಿತೈಶಿಗಳಿದ್ದಾರೋ ಅಷ್ಟೇ ಶತ್ರುಗಳು ಇದ್ದಾರೆ. ಇಷ್ಟ ಪಡುವವರಷ್ಟೇ ದ್ವೇಷಿಸುವವರೂ ಇದ್ದಾರೆ. ಇದಕ್ಕೆ ಕಾರಣ ಹಲವು. ಬೆಳಗೆರೆ ಅವರು ಬಹುತೇಕ ಸಿನಿಮಾ ಮಂದಿ ವಿರುದ್ಧ ಗುಡುಗಿ ಅವರ ವಿರುದ್ಧ ಹರಿಹಾಯ್ದು ವಿವಾದಗಳನ್ನ ಮಾಡಿಕೊಂಡು, ಅನೇಕರು ದ್ವೇಷಿಸುವಂತೆ ಮಾಡಿಕೊಂಡಿದ್ದರು.

ಅಂದ್ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರವಿ ಬೆಳಗೆರೆ ನಡುವೆಯೂ ಜಗಳಗಳಾಗಿದ್ದವು. ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ನಡುವಿನ ಗಲಾಟೆ ವಿಚಾರದ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ವಿಚಾರವಾಗಿ ನಟ ದರ್ಶನ್ ಅವರು ಕೆಂಡಾಮಂಡಲವಾಗಿದ್ದರು.  ಅಲ್ಲದೇ ರವಿ ಬೆಳಗೆರೆ ಅವರ ಬಗ್ಗೆ ಆಕ್ರೋಶವನ್ನೂ ಹೊರಹಾಕಿದ್ದರು.

ಇನ್ನೂ ಸ್ಯಾಂಡಲ್ ವುಡ್ ನ ಕರಿಚಿರತೆ ಎಂದೇ ಫೇಮಸ್ ಆಗಿರುವ ದುನಿಯಾ ವಿಜಯ್ ಹಾಗೂ ರವಿ ಬೆಳಗೆರೆ ಅವರ ನಡುವಿನ ವೈಶಮ್ಯವೂ ಯಾರಿಗೂ ತಿಳಿದಿರದ ವಿಚಾರವೇನಲ್ಲ. ದುನಿಯಾ ವಿಜಯ್ ಹಾಗೂ ರವಿ ಬೆಳಗೆರೆ ನಡುವೆ ಜಗಳ ಬೀದಿ ರಂಪವಾಗಿ ಪರಿಣಮಿಸಿತ್ತು. ದುನಿಯಾ ವಿಜಯ್, ಮಾಧ್ಯಮಗಳಲ್ಲಿ ಕೂತು ರವಿ ಬೆಳಗೆರೆ ಅವರಿಗೆ ಏಕವಚನದಲ್ಲೇ ಕಿಡಿಕಾರಿದ್ದರು. ಬೆಳಗೆರೆ ಅವರು ಸಹ ಸುಮ್ಮನೆ ಕೂತಿರಲಿಲ್ಲ. ವಿಜಿ ಅವರ ವಿರುದ್ಧ ಹರಿಹಾಯ್ದಿದ್ದರು. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ವಿಜಯ್ ಮದುವೆ, ಪ್ರೀತಿ ಹಾಗೂ ಇತರೇ ವಿಚಾರಗಳನ್ನ ಪ್ರಕಟಿಸಿದ್ದು, ಈ ವಿಚಾರವಾಗಿ ಇಬ್ಬರ ನಡುವೆ ವೈಶಮ್ಯ ಏರ್ಪಟ್ಟಿತ್ತು.

ಇನ್ನೂ ರಾಜ್ ಲೀಲಾ ವಿನೋದ ಪುಸ್ತಕದ ವಿವಾದವೂ ಎಲ್ಲರಿಗೂ ಗೊತ್ತಿರೋ ವಿಚಾರವೇ.  ರವಿ ಬೆಳಗೆರೆ ಅವರ ಕೃತಿಗಳಲ್ಲಿ ಹೆಚ್ಚು ವಿವಾದಕ್ಕೆ ಕಾರಣವಾದ ಪುಸ್ತಕ ಅಂದ್ರೆ  ಅದು ‘ರಾಜ್ ಲೀಲಾ ವಿನೋದ’. ಈ ಪುಸ್ತಕ ಬಿಡುಗಡೆಯಾಗ್ತಾಯಿದ್ದಂತೆ  ರವಿ ಬೆಳಗೆರೆ ವಿರುದ್ಧ ವರನಟ ಡಾ.ರಾಜ್ಕುಮಾರ್ ಅಭಿಮಾನಿಗಳು ಸಿಡಿದೆದ್ದಿದ್ದರು. ಅನೇಕರು ಪುಸ್ತಕದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಬೆಳಗೆರೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ವಿರೋಧದ ನಡುವೆಯೇ ಪುಸ್ತಕ ಬಿಡುಗಡೆಯಾಗಿತ್ತು.

ಇನ್ನೂ ನಟಿ ಶ್ರುತಿ ಅವರು ಸಹ ರವಿ ಬೆಳಗೆರೆ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ನಟಿ ಶ್ರುತಿ ಬಗ್ಗೆ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಲೇಖನ ಬಂದಾಗ, ಈ ಬಗ್ಗೆ ಬಹಿರಂಗವಾಗಿಯೇ ಪ್ರತಿಕ್ರಿಯೆ ನೀಡಿದ್ದ ಶ್ರುತಿ ಅವರು ಬೆಳಗೆರೆ ಹಣ ಕೇಳಿದ್ದರು, ಕೊಡದೇ ಇದ್ದಿದ್ದಕ್ಕೆ ನನ್ನ ಬಗ್ಗೆ ಕೆಟ್ಟದಾಗಿ ಬರೆದಿದ್ದಾರೆ ಎಂದು ಆರೋಪಿಸಿ ಕಿಡಿಕಾರಿದ್ರು.

Ravi belagere

‘ಅಕ್ಷರ ಮಾಂತ್ರಿಕ’ನ ನಿಧನಕ್ಕೆ ಸಂತಾಪ ಸೂಚಿಸಿದ ‘ನವರಸ ನಾಯಕ’

`ದುರ್ಯೋಧನ’ನ ಜೊತೆ ಸಿನಿಮಾ ಮಾಡ್ತಾರಂತೆ `ಕೌರವ’

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: filmRavi BelagereSandalwood
ShareTweetSendShare
Join us on:

Related Posts

ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿದರೆ ಕಠಿಣ ಕ್ರಮ ಗೃಹ ಸಚಿವ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ

ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿದರೆ ಕಠಿಣ ಕ್ರಮ ಗೃಹ ಸಚಿವ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ

by Shwetha
April 7, 2026
0

ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲ ಸಿಲಿಂಡರ್ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುವ ದಂಧೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು...

ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ವದಂತಿಗಳಿಗೆ ಬ್ರೇಕ್ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದ ಗೃಹ ಸಚಿವ ಜಿ ಪರಮೇಶ್ವರ್

ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ವದಂತಿಗಳಿಗೆ ಬ್ರೇಕ್ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದ ಗೃಹ ಸಚಿವ ಜಿ ಪರಮೇಶ್ವರ್

by Shwetha
April 7, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ಕೇಳಿಬರುತ್ತಿರುವ ಬಿಸಿಬಿಸಿ ಚರ್ಚೆಗಳು ಮತ್ತು ವದಂತಿಗಳಿಗೆ ಗೃಹ ಸಚಿವ ಜಿ ಪರಮೇಶ್ವರ್ ಇದೀಗ...

ಬಸ್ ಟಿಕೆಟ್ ದರ ಏರಿಕೆ ಇಲ್ಲ: ಸಚಿವ ರಾಮಲಿಂಗರೆಡ್ಡಿ ಸ್ಪಷ್ಟನೆ

ಬಸ್ ಟಿಕೆಟ್ ದರ ಏರಿಕೆ ಇಲ್ಲ: ಸಚಿವ ರಾಮಲಿಂಗರೆಡ್ಡಿ ಸ್ಪಷ್ಟನೆ

by Shwetha
April 7, 2026
0

ಸದ್ಯಕ್ಕೆ ಸಾರಿಗೆ ಬಸ್‌ ಪ್ರಯಾಣದ ಟಿಕೆಟ್ ದರ ಏರಿಕೆ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಸ್...

ಮಹಿಳಾ ಪಿಎಸ್ಐಗೆ ಬೆದರಿಕೆ : ಖಾಕಿಗೇ ಕಂಟಕವಾದ ಪುಂಡಾಟಿಕೆ ಇದು ಬಿಹಾರ ಅಲ್ಲ ಕರುನಾಡು ಮಹಿಳಾ ಪಿಎಸ್ಐಗೆ ದಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದರೂ ಮೌನವೇಕೆ

ಮಹಿಳಾ ಪಿಎಸ್ಐಗೆ ಬೆದರಿಕೆ : ಖಾಕಿಗೇ ಕಂಟಕವಾದ ಪುಂಡಾಟಿಕೆ ಇದು ಬಿಹಾರ ಅಲ್ಲ ಕರುನಾಡು ಮಹಿಳಾ ಪಿಎಸ್ಐಗೆ ದಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದರೂ ಮೌನವೇಕೆ

by Shwetha
April 7, 2026
0

ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆಯೇ ಎಂಬ ಆತಂಕಕಾರಿ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ರಾಜ್ಯದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲದಂತಹ ವಾತಾವರಣ ನಿರ್ಮಾಣವಾಗುತ್ತಿರುವುದು...

ರಾಜ್ಯಕ್ಕೆ ನೀಡಬೇಕಾದ ಕನಿಷ್ಠ ಅನಿಲ ಪೂರೈಕೆ ಮಾಡಲಿ: ಪರಮೇಶ್ವರ್

ರಾಜ್ಯಕ್ಕೆ ನೀಡಬೇಕಾದ ಕನಿಷ್ಠ ಅನಿಲ ಪೂರೈಕೆ ಮಾಡಲಿ: ಪರಮೇಶ್ವರ್

by Shwetha
April 7, 2026
0

ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಬೇಕಾದ ಕನಿಷ್ಠ ಅನಿಲ ಪೂರೈಕೆ ಆಗದಿರುವುದರಿಂದ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಸಚಿವ G. ಪರಮೇಶ್ವರ್ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ರಾಜ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram