Ravi belagere
ಚಿತ್ರಕಥೆ ಬರಹಗಾರ, ನಟ, ಕ್ರೈಂ ಡೈರಿ ಕಾರ್ಯಕ್ರಮ ನಿರೂಪಕ, ಹಾಯ್ ಬೆಂಗಳೂರು ಹಾಗೂ ಓ ಮನಸೇ ಪತ್ರಿಕೆಯ ಸಂಪಾದಕ, ಖ್ಯಾತ ಪತ್ರಕರ್ತ, ನಿರೂಪಕ, ಲೇಖಕ, ಕಾದಂಬರಿಕಾರ ಆಗಿರುವ ರವಿ ಬೆಳಗೆರೆ ಅವರು ತಡರಾತ್ರಿ ಹೃದಯಾಘಾತದಿಂದ ಅಸ್ತಂಗತರಾಗಿದ್ದಾರೆ. 62 ವರ್ಷದ ಬೆಳಗೆರೆ ಅವರ ನಿಧನಕ್ಕೆ ನಟ ಸುದೀಪ್, ಜಗ್ಗೇಶ್, ಯೋಗರಾಜ್ ಭಟ್, ಕವಿರಾಜ್, ಸಿಂಪಲ್ ಸುನಿ ಸೇರಿದಂತೆ ಅನೇಕರು ರವಿ ಬೆಳಗೆರೆ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಸಿನಿಮಾರಂಗದ ಜೊತೆ ಅಪಾರ ನಂಟು ಹೊಂದಿದ್ದ ಬೆಳಗೆರೆ ಅವರು ಕೆಲ ಸಿನಿಮಾಗಳಲ್ಲಿ ನಟಿಸಿ ನಟನಾಗಿಯೂ ಗುರುತಿಸಿಕೊಂಡಿದ್ದಾರೆ. ಆದರೆ ಅವರು ಅಷ್ಟರ ಮಟ್ಟಿಗೆ ಖ್ಯಾತಿ ಗಳಿಸಲು ಸಾಧ್ಯವಾಗಿರಲಿಲ್ಲ. ರವಿ ಶ್ರೀವತ್ಸ ನಿರ್ದೇಶನದ ಗಂಡ ಹೆಂಡತಿ ಸಿನಿಮಾ ಮೂಲಕ ರವಿ ಬೆಳಗೆರೆ ಬೆಳ್ಳೆ ಪರದೆ ಮೇಲೆ ಮೊದಲ ಬಾರಿಗೆ ಕಾಣಿಸಿಕೊಂಡರು. ಬಳಿಕ ಶಿವರಾಜ್ ಕುಮಾರ್ ಅಭಿನಯದ ಮಾದೇಶ, ವಾರಸ್ದಾರ, ಡೆಡ್ಲಿ ಸೋಮ ಸಿನಿಮಾಗಳಲ್ಲಿ ನಟಿಸಿದ್ದಾರೆ. ರವಿ ಬೆಳಗೆರೆ ಧಾರಾವಹಿಯಲ್ಲೂ ನಟಿಸಿದ್ದಾರೆ.
ಇನ್ನೂ ಬೆಳಗೆರೆ ಅವರು ಸಿನಿಮಾರಂಗದ ಕೆಲ ವಿವಾದಗಳಿಂದಲೂ ಆಗಾಗ ಚರ್ಚೆಯಲ್ಲಿದ್ದವರು. ಹೌದು ಬೆಳಗೆರೆ ಅವರಿಗೆ ಎಷ್ಟು ಹಿತೈಶಿಗಳಿದ್ದಾರೋ ಅಷ್ಟೇ ಶತ್ರುಗಳು ಇದ್ದಾರೆ. ಇಷ್ಟ ಪಡುವವರಷ್ಟೇ ದ್ವೇಷಿಸುವವರೂ ಇದ್ದಾರೆ. ಇದಕ್ಕೆ ಕಾರಣ ಹಲವು. ಬೆಳಗೆರೆ ಅವರು ಬಹುತೇಕ ಸಿನಿಮಾ ಮಂದಿ ವಿರುದ್ಧ ಗುಡುಗಿ ಅವರ ವಿರುದ್ಧ ಹರಿಹಾಯ್ದು ವಿವಾದಗಳನ್ನ ಮಾಡಿಕೊಂಡು, ಅನೇಕರು ದ್ವೇಷಿಸುವಂತೆ ಮಾಡಿಕೊಂಡಿದ್ದರು.
ಅಂದ್ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರವಿ ಬೆಳಗೆರೆ ನಡುವೆಯೂ ಜಗಳಗಳಾಗಿದ್ದವು. ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ನಡುವಿನ ಗಲಾಟೆ ವಿಚಾರದ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ವಿಚಾರವಾಗಿ ನಟ ದರ್ಶನ್ ಅವರು ಕೆಂಡಾಮಂಡಲವಾಗಿದ್ದರು. ಅಲ್ಲದೇ ರವಿ ಬೆಳಗೆರೆ ಅವರ ಬಗ್ಗೆ ಆಕ್ರೋಶವನ್ನೂ ಹೊರಹಾಕಿದ್ದರು.
ಇನ್ನೂ ಸ್ಯಾಂಡಲ್ ವುಡ್ ನ ಕರಿಚಿರತೆ ಎಂದೇ ಫೇಮಸ್ ಆಗಿರುವ ದುನಿಯಾ ವಿಜಯ್ ಹಾಗೂ ರವಿ ಬೆಳಗೆರೆ ಅವರ ನಡುವಿನ ವೈಶಮ್ಯವೂ ಯಾರಿಗೂ ತಿಳಿದಿರದ ವಿಚಾರವೇನಲ್ಲ. ದುನಿಯಾ ವಿಜಯ್ ಹಾಗೂ ರವಿ ಬೆಳಗೆರೆ ನಡುವೆ ಜಗಳ ಬೀದಿ ರಂಪವಾಗಿ ಪರಿಣಮಿಸಿತ್ತು. ದುನಿಯಾ ವಿಜಯ್, ಮಾಧ್ಯಮಗಳಲ್ಲಿ ಕೂತು ರವಿ ಬೆಳಗೆರೆ ಅವರಿಗೆ ಏಕವಚನದಲ್ಲೇ ಕಿಡಿಕಾರಿದ್ದರು. ಬೆಳಗೆರೆ ಅವರು ಸಹ ಸುಮ್ಮನೆ ಕೂತಿರಲಿಲ್ಲ. ವಿಜಿ ಅವರ ವಿರುದ್ಧ ಹರಿಹಾಯ್ದಿದ್ದರು. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ವಿಜಯ್ ಮದುವೆ, ಪ್ರೀತಿ ಹಾಗೂ ಇತರೇ ವಿಚಾರಗಳನ್ನ ಪ್ರಕಟಿಸಿದ್ದು, ಈ ವಿಚಾರವಾಗಿ ಇಬ್ಬರ ನಡುವೆ ವೈಶಮ್ಯ ಏರ್ಪಟ್ಟಿತ್ತು.
ಇನ್ನೂ ರಾಜ್ ಲೀಲಾ ವಿನೋದ ಪುಸ್ತಕದ ವಿವಾದವೂ ಎಲ್ಲರಿಗೂ ಗೊತ್ತಿರೋ ವಿಚಾರವೇ. ರವಿ ಬೆಳಗೆರೆ ಅವರ ಕೃತಿಗಳಲ್ಲಿ ಹೆಚ್ಚು ವಿವಾದಕ್ಕೆ ಕಾರಣವಾದ ಪುಸ್ತಕ ಅಂದ್ರೆ ಅದು ‘ರಾಜ್ ಲೀಲಾ ವಿನೋದ’. ಈ ಪುಸ್ತಕ ಬಿಡುಗಡೆಯಾಗ್ತಾಯಿದ್ದಂತೆ ರವಿ ಬೆಳಗೆರೆ ವಿರುದ್ಧ ವರನಟ ಡಾ.ರಾಜ್ಕುಮಾರ್ ಅಭಿಮಾನಿಗಳು ಸಿಡಿದೆದ್ದಿದ್ದರು. ಅನೇಕರು ಪುಸ್ತಕದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಬೆಳಗೆರೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ವಿರೋಧದ ನಡುವೆಯೇ ಪುಸ್ತಕ ಬಿಡುಗಡೆಯಾಗಿತ್ತು.
ಇನ್ನೂ ನಟಿ ಶ್ರುತಿ ಅವರು ಸಹ ರವಿ ಬೆಳಗೆರೆ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ನಟಿ ಶ್ರುತಿ ಬಗ್ಗೆ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಲೇಖನ ಬಂದಾಗ, ಈ ಬಗ್ಗೆ ಬಹಿರಂಗವಾಗಿಯೇ ಪ್ರತಿಕ್ರಿಯೆ ನೀಡಿದ್ದ ಶ್ರುತಿ ಅವರು ಬೆಳಗೆರೆ ಹಣ ಕೇಳಿದ್ದರು, ಕೊಡದೇ ಇದ್ದಿದ್ದಕ್ಕೆ ನನ್ನ ಬಗ್ಗೆ ಕೆಟ್ಟದಾಗಿ ಬರೆದಿದ್ದಾರೆ ಎಂದು ಆರೋಪಿಸಿ ಕಿಡಿಕಾರಿದ್ರು.
Ravi belagere
‘ಅಕ್ಷರ ಮಾಂತ್ರಿಕ’ನ ನಿಧನಕ್ಕೆ ಸಂತಾಪ ಸೂಚಿಸಿದ ‘ನವರಸ ನಾಯಕ’
`ದುರ್ಯೋಧನ’ನ ಜೊತೆ ಸಿನಿಮಾ ಮಾಡ್ತಾರಂತೆ `ಕೌರವ’
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel