Ravi belagere
ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕರು, ಹಿರಿಯ ಪ್ರತ್ರಕರ್ತರು , ಲೇಖಕರು ಆಗಿದ್ದ ರವಿ ಬೆಳಗೆರೆ ಅವರು ತಡರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಬೆಳಗೆರೆ ಅವರು ಅಸ್ತಂಗತರಾಗುವುದಕ್ಕೂ ಮೊದಲ ಏನಾಯ್ತು, ಎಲ್ಲಿದ್ದರು ಎಂಬ ವಿಚಾರವನ್ನ ಅವರ ಪುತ್ರ ಕರ್ಣ ತಿಳಿಸಿದ್ದಾರೆ. ಮೊದಲಿಗೆ ತಂದೆಯ ಸಾವಿನ ಬಗ್ಗೆ ಭಾವನಾತ್ಮಕವಾಗಿ ಮಾತು ಆರಂಭಿಸಿದ ಕರ್ಣ , ನಮ್ಮ ತಂದೆ ಇಂದು ನಮ್ಮ ಜೊತೆ ಇಲ್ಲ ಎಂಬ ನೋವು ಕಾಡುತ್ತಿದೆ. ಅವರ ಬಗ್ಗೆ ಒಂದು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ನಮ್ಮ ಇಡೀ ಕುಟುಂಬ ಹಾಗೂ ಅವರನ್ನೇ ನಂಬಿಕೊಂಡಿದ್ದವರಿಗೆ ತುಂಬಾ ದುಃಖ ತಂದಿದೆ ಎಂದಿದ್ದಾರೆ.
ಉಸಿರು ನಿಂತರೂ, ಬೆಳಗೆರೆ ಅಕ್ಷರಗಳು ಎಂದಿಗೂ ಅಜರಾಮರ
ಮುಂದುವರೆದು ರಾತ್ರಿ 12.15ರ ಸುಮಾರಿಗೆ ಅಪ್ಪನಿಗೆ ಹೃದಯಾಘಾತ ಆಗಿದೆ. ಅವರು ರಾತ್ರಿ ಕಚೇರಿಯಲ್ಲಿಯೇ ಉಳಿದುಕೊಂಡಿದ್ದರು. ನಾನು ಮನೆಯಲ್ಲಿದ್ದೆ. ದೂರವಾಣಿ ಮೂಲಕ ವಿಷಯ ತಿಳಿಯಿತು. ಕೂಡಲೇ ಕಚೇರಿಗೆ ದೌಡಾಯಿಸಿದೆ. ಅದಾಗಲೇ ನಾನು ಬರುವಷ್ಟರಲ್ಲಿ ಅಪ್ಪಾಜಿ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಬಳಿಕ ವೈದ್ಯರು ಅವರು ಕೊನೆಯುಸಿರೆಳೆದಿರೋದಾಗಿ ಖಚಿತಪಡಿಸಿದರು ಎಂದು ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಇದೇ ವೇಳೆ ಅಪ್ಪನ ಆರೋಗ್ಯ ಸ್ಥಿತಿ ಬಗ್ಗೆ ಮಾತನಾಡಿದ ಕರ್ಣ, ಡಯಾಬಿಟೀಸ್ ಮತ್ತು ಸಣ್ಣಪುಟ್ಟ ಅನಾರೋಗ್ಯ ಇತ್ತು. ಆದರೂ ಆ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಿನ್ನೆ ಸಹ ನಮ್ಮ ಮನೆಯಲ್ಲಿದ್ದರು. ಇದು ಬಹಳ ಅನಿರೀಕ್ಷಿತವಾಗಿ ಆಗಿರುವ ಘಟನೆ ಎಂದಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿದ ಕರ್ಣ, ಅಪ್ಪ ಕಟ್ಟಿ ಬೆಳೆಸಿದ ಪ್ರಾರ್ಥನಾ ಶಾಲೆ ಬಹಳ ದೊಡ್ಡ ಮಟ್ಟಕ್ಕೆ ಹೋಗಬೇಕು. ನಾನು ಮತ್ತು ನನ್ನ ಕುಟುಂಬ ಅದನ್ನು ತುಂಬಾ ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ ಎಂದು ಹೇಳಿಕೊಂಡಿದ್ದಾರೆ.
ಬೆಳಗೆರೆ ಸಿನಿಮಾ ಜರ್ನಿ : ಸಿನಿಮಾರಂಗದವರ ಜೊತೆಗಿನ ವಿವಾದಗಳು..!
‘ಇದು ರವಿ ಅವರ ‘ಸಾವಲ್ಲ’, ‘ಹುಟ್ಟು’ : ಯೋಗರಾಜ್ ಭಟ್
‘ಅಕ್ಷರ ಮಾಂತ್ರಿಕ’ನ ನಿಧನಕ್ಕೆ ಸಂತಾಪ ಸೂಚಿಸಿದ ‘ನವರಸ ನಾಯಕ’
Ravi belagere
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel