ವಾಟ್ಸಾಪ್ ಗ್ರೂಪ್ ನಲ್ಲಿ “ಕೈ” ಮಾಜಿ ಜಿಲ್ಲಾಧ್ಯಕ್ಷನ ಕಾಮದಾಟ

ವಿಜಯಪುರ : ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ರವಿಗೌಡ ಪಾಟೀಲ್ ವಿಜಯಪುರ ಡಿಸಿಸಿ (ಮೀಡಿಯಾ ಮತ್ತು ಟಿವಿ) ಗ್ರೂಪ್ ನಲ್ಲಿ ಅಶ್ಲೀಲ ಫೋಟೋ ಹಂಚಿಕೊಂಡಿದ್ದಾರೆ. ಇದು ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ನಿನ್ನೆ ರಾತ್ರಿ 8 ಗಂಟೆಗೆ ಅಶ್ಲೀಲ ಫೋಟೋವೊಂದನ್ನು ರವಿಗೌಡ ವಾಟ್ಸಾಪ್ ಗೆ ಶೇರ್ ಮಾಡಿದ್ದು, ಫೋಟೋ ನೋಡಿದ ಸದಸ್ಯರು ವಾಟ್ಸಪ್ ಗ್ರೂಪ್ ನಿಂದ ಹೊರ ಬಂದಿದ್ದಾರೆ. ಅಲ್ಲದೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೋಡೆ ಅವರು ರವಿಗೌಡ ಪಾಟೀಲ್ ಅವರನ್ನು ವಾಟ್ಸಾಪ್ ಗ್ರೂಪ್ ನಿಂದಲೇ ರಿಮೂವ್ ಮಾಡಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡಿರುವ ರವಿಗೌಡ ಪಾಟೀಲ, ಎಲ್ಲರಲ್ಲೂ ಕ್ಷಮೆ ಕೇಳಿದ್ದಾರೆ. ನಿನ್ನೆ ರಾತ್ರಿ ನಾನು ವಾಶ್ ರೂಂ ಗೆ ಹೋಗಿದ್ದೆ. ಮನೆಯಲ್ಲಿ ಮೂರ್ನಾಲ್ಕು ವರ್ಷದ ಮಕ್ಕಳು ಮೊಬೈಲ್ ತೆಗೆದುಕೊಂಡು ಆಟವಾಡುತ್ತಿದ್ದರು. ಈ ವೇಳೆ ಅವರಿಗೆ ಗೊತ್ತಾಗದೇ ಈ ರೀತಿ ಮಾಡಿರಬಹುದು. ರಾತ್ರಿ ವಸಂತ ಹೊನಮೋಡೆ ಮೊಬೈಲ್ ಕರೆ ಮಾಡಿದಾಗಲೇ ವಿಷಯ ಗೊತ್ತಾಗಿದ್ದು. ನನಗೆ ವಾಟ್ಸಾಪ್ ನಿರ್ವಹಣೆ ಕುರಿತು ಅಷ್ಟೋಂದು ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This