ಭೂಗತ ಪಾತಕಿ ರವಿ ಪೂಜಾರಿ ಜಾಮೀನು ಅರ್ಜಿ ತಿರಸ್ಕರಿಸಿದ ನಗರ ನ್ಯಾಯಾಲಯ

ಭೂಗತ ಪಾತಕಿ ರವಿ ಪೂಜಾರಿ ಜಾಮೀನು ಅರ್ಜಿ ತಿರಸ್ಕರಿಸಿದ ನಗರ ನ್ಯಾಯಾಲಯ

ಬೆಂಗಳೂರು, ಅಗಸ್ಟ್ 1: ಇಬ್ಬರನ್ನು ಗುಂಡಿಕ್ಕಿ ಕೊಂದ ಶಬ್ನಮ್ ಡೆವಲಪರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ರವಿ ಪೂಜಾರಿಯ ಜಾಮೀನು ಅರ್ಜಿಯನ್ನು ನಗರ ನ್ಯಾಯಾಲಯ ತಿರಸ್ಕರಿಸಿದೆ. ಕೆಲವು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದ್ದು, ಪೂಜಾರಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಪೂಜಾರಿ ಪರ ವಕೀಲರು ವಾದಿಸಿದ್ದಾರೆ. ಆದರೆ ಪೂಜಾರಿ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಜಾಮೀನು ನೀಡಿದರೆ ಇದೇ ರೀತಿಯ ಅಪರಾಧಗಳನ್ನು ಮುಂದುವರಿಸಬಹುದು ಎಂದು ಕೋರ್ಟ್ ಹೇಳಿದೆ.
ರವಿ ಪೂಜಾರಿಯನ್ನು ಸೆನೆಗಲ್‌ನಿಂದ ಹಸ್ತಾಂತರಿಸಲಾಗಿದ್ದು, ಈ ವರ್ಷದ ಫೆಬ್ರವರಿಯಲ್ಲಿ ಬೆಂಗಳೂರಿಗೆ ಕರೆತರಲಾಯಿತು. ಆತನ ವಿರುದ್ಧದ ಪ್ರಕರಣಗಳಲ್ಲಿ ತನಿಖೆ ಮುಂದುವರೆಸುತ್ತಿದ್ದಾಗ, ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ವರದಿಯಾದ 2007 ರ ಶಬ್ನಮ್ ಡೆವಲಪರ್ಸ್ ಶೂಟಿಂಗ್ ಪ್ರಕರಣದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ರವಿ ಪೂಜಾರಿ ವಿರುದ್ಧ ಯಾವುದೇ ಪ್ರಾಥಮಿಕ ದಾಖಲೆಗಳಿಲ್ಲ ಮತ್ತು ಆತನನ್ನು ಈ ಪ್ರಕರಣದಲ್ಲಿ ತಪ್ಪಾಗಿ ಸೇರಿಸಿಕೊಳ್ಳಲಾಗಿದೆ ಎಂಬ ಕಾರಣಕ್ಕೆ ಪೂಜಾರಿ ವಕೀಲರು ಪ್ರಧಾನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯ
ನ್ನು ಸಲ್ಲಿಸಿದ್ದರು.


ಘಟನೆಯಲ್ಲಿ ‌ಪಾಲ್ಗೊಂಡಿದ್ದರು ಎಂದು ಸಾಬೀತು ಪಡಿಸಲು ಪ್ರಾಸಿಕ್ಯೂಷನ್ ವಿಫಲಗೊಂಡ ಹಿನ್ನೆಲೆಯಲ್ಲಿ ಒಂಬತ್ತು ಸಹ-ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಇದಲ್ಲದೆ, ಪೂಜಾರಿ ವಿರುದ್ಧ ಪೊಲೀಸರು ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ ಎಂದು ಪ್ರತಿವಾದಿ ವಕೀಲರು ವಾದಿಸಿದರು. ಆದರೆ, ರವಿ ಪೂಜಾರಿ ಗೆ ಜಾಮೀನು ನೀಡುವುದನ್ನು ಪ್ರಾಸಿಕ್ಯೂಷನ್ ಆಕ್ಷೇಪಿಸಿ, ಆತನನ್ನು ಪೊಲೀಸರು ಬಹಳ ಕಷ್ಟದಿಂದ ಹಿಡಿದಿರುವುದಾಗಿ ವಾದಿಸಿದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ನ್ಯಾಯಾಧೀಶ ಸುಭಾಷ್ ಶಂಕದ್, ಕಳೆದ 12 ವರ್ಷಗಳಿಂದ ಆರೋಪಿ ಪರಾರಿಯಾಗಿದ್ದಾನೆ ಎಂದು ನಾನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ ಮತ್ತು ಇತರ ಪ್ರಕರಣಗಳಲ್ಲಿಯೂ ಅವನು ಪರಾರಿಯಾಗಿದ್ದಾನೆ ಎಂದು ತೋರಿಸಲಾಗಿದೆ. ಆರೋಪಿಯ ವರ್ತನೆ ಅತನು ಪರಾರಿಯಾಗುವ ಸ್ವಭಾವದವನು ಎಂದು ತೋರಿಸುತ್ರಿದ್ದು, ಜಾಮೀನು ನೀಡಿದ ಪಕ್ಷದಲ್ಲಿ ಅವನು ನ್ಯಾಯದಿಂದ ತಪ್ಪಿಸಿಕೊಳ್ಳುವ ಎಲ್ಲ ಅವಕಾಶಗಳಿವೆ ಎಂದು ಹೇಳಿದರು.

ಪೂಜಾರಿ ಭೂಗತ ಲೋಕದವನು ಮತ್ತು ಹಲವಾರು ಸಮಾಜವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಪೂಜಾರಿ ವಿರುದ್ಧದ ಆರೋಪವು ಸ್ವಭಾವತಃ ಘೋರವಾಗಿದೆ ಮತ್ತು ಜಾಮೀನು ಮಂಜೂರು ಮಾಡಿದರೆ ಅವರು ಇದೇ ರೀತಿಯ ಅಪರಾಧಗಳನ್ನು ಮುಂದುವರಿಸುತ್ತಾನೆ. ಆದ್ದರಿಂದ ಆತನ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This