ಆಟಗಾರರ ಮನೋಸ್ಥೈರ್ಯ ಹೆಚ್ಚಿಸುವಲ್ಲಿ ರವಿಶಾಸ್ತ್ರಿ ಪಂಟರ್ – ಗವಾಸ್ಕರ್ ಬಣ್ಣನೆ
ಆತ ಗದರಿಸುತ್ತಾನೆ. ಏನು ಮಾಡಬೇಕು ಎಂಬುದನ್ನು ತಿಳಿಸುತ್ತಾನೆ. ಅತ್ಯುತ್ತಮವಾಗಿ ಏನು ಮಾಡಬಹುದು ಎಂಬುದನ್ನು ಹೇಳಿಕೊಡುತ್ತಾನೆ. ನೀವು ಏನು ಎಂಬುದನ್ನು ತೋರಿಸಿಕೊಡುತ್ತಾನೆ.
ಇದು ಟೀಮ್ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ ಬಗ್ಗೆ ವಿಶ್ವ ಕ್ರಿಕೆಟ್ ನ ದಂತಕಥೆ ಸುನಿಲ್ ಗವಾಸ್ಕರ್ ಹೇಳಿರುವ ಮೆಚ್ಚುಗೆಯ ಮಾತುಗಳು.
ರವಿಶಾಸ್ತ್ರಿ ಊಹೆಗೂ ನಿಲುಕದ ಮಾರ್ಗದರ್ಶಕ. ಯುವ ಆಟಗಾರರನ್ನು ಉತ್ತೇಜಿಸುವಂತಹ ಮೆಂಟರ್ ಎಂದು ಸುನೀಲ್ ಗವಾಸ್ಕರ್ ಬಣ್ಣಿಸಿದ್ದಾರೆ.
ಅಭ್ಯಾಸ ವೇಳೆ ರವಿಶಾಸ್ತ್ರಿ ಜೊತೆ ನೀವು ಕೇವಲ 10ರಿಂದ 15 ನಿಮಿಷಗಳ ಕಾಲ ಕಳೆಯಿರಿ. ಯುವ ಆಟಗಾರರ ಮನೋಸ್ಥೈರ್ಯವನ್ನು ಹೆಚ್ಚಿಸುವ ಸಾಮಥ್ರ್ಯವನ್ನು ಅವರು ಹೊಂದಿದ್ದಾರೆ. ಇದು ನಂಬಲು ಅಸಾಧ್ಯವಾದದ್ದು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಬ್ಯಾಟಿಂಗ್ ಕೋಚ್ ಅರುಣ್ ಬಗ್ಗೆಯೂ ಸುನಿಲ್ ಗವಾಸ್ಕರ್ ಮೆಚ್ಚುಗೆಯ ಮಾತುಗಳನ್ನಾಡಿದ್ರು.








