Ravi Shastri | ರಾಹುಲ್ ತ್ರಿಪಾಠಿ ಬಗ್ಗೆ ರವಿಶಾಸ್ತ್ರಿ ಮೆಚ್ಚುಗೆ
ಮಹಾರಾಷ್ಟ್ರ ಬ್ಯಾಟರ್, ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ರಾಹುಲ್ ತ್ರಿಪಾಟಿ ಮೇಲೆ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಪ್ರಶಂಸೆಗಳ ಸುರಿಮಳೆ ಗೈದಿದ್ದಾರೆ.
ಆತ ಕ್ರೀಸ್ ನಲ್ಲಿದ್ದರೇ ಸ್ಕೋರ್ ಬೋರ್ಡ್ ಓಡುತ್ತಲೇ ಇರುತ್ತದೆ ಎಂದು ಕೊಂಡಾಡಿದ್ದಾರೆ.
ಎದುರಾಳಿ ಬೌಲರ್ ಗಳಿಗೆ ಯಾವುದೇ ಚಾನ್ಸ್ ನೀಡದೇ ಅವರು ಅಬ್ಬರಿಸುತ್ತಿದ್ದಾರೆ ಎಂದಿದ್ದಾರೆ.
ಇಂಡಿಯನ್ ಪ್ರಿಮಿಯರ್ ಲೀಗ್ 2022ರಲ್ಲಿ ಸನ್ ರೈಸರ್ಸ್ ಪರವಾಡಿದ ರಾಹುಲ್ ತ್ರಿಪಾಠಿ, 14 ಪಂದ್ಯಗಳಲ್ಲಿ 413 ರನ್ ಗಳಿಸಿದ್ದರು.

ಈ ಹಿನ್ನೆಲೆಯಲ್ಲಿ ಅವರನ್ನ ಐರ್ಲೆಂಡ್ ಪ್ರವಾಸಕ್ಕೆ ಅವರನ್ನ ಆಯ್ಕೆ ಮಾಡಲಾಗಿದೆ.
ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.
ಈ ಬಗ್ಗೆ ಮಾತನಾಡಿದ ರವಿಶಾಸ್ತ್ರಿ, ಆತ ಕ್ರೀಸ್ ನಲ್ಲಿದ್ದರೇ ಸ್ಕೋರ್ ಬೋರ್ಡ್ ಓಡುತ್ತಲೇ ಇರುತ್ತದೆ.
ಬಾಲ್ ಅನ್ನು ಸರಿಯಾಗಿ ಗುರ್ತಿಸಿ ಶಾಟ್ ಹೊಡೆಯೋದ್ರಲ್ಲಿ ತ್ರಿಪಾಠಿ ನಿಸ್ಸೀಮ.
ಮುಖ್ಯವಾಗಿ ಒನ್ ಡೌನ್ ನಲ್ಲಿ ಬಂದು ಅದ್ಭುತ ಇನ್ನಿಂಗ್ಸ್ ಗಳನ್ನು ಕಟ್ಟುತ್ತಾರೆ ಎಂದು ಹೇಳಿದ್ದಾರೆ.








