Ravi Shastri ಟೀಂ ಇಂಡಿಯಾದ ಬ್ಯಾಟಿಂಗ್ ಅದ್ಭುತ ಆದ್ರೆ..
ಟಿ 20 ವರ್ಲ್ಡ್ ಕಪ್ 2022 ನಲ್ಲಿ ಫೀಲ್ಡಿಂಗ್ ವಿಭಾಗದಲ್ಲಿ ಸುಧಾರಿಸದೇ ಇದ್ದರೇ ಟೀಂ ಇಂಡಿಯಾ ದೊಡ್ಡ ಆಘಾತವನ್ನು ಅನುಭವಿಸಲಿದೆ ಎಂದು ಟೀಂ ಇಂಡಿಯಾದ ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ಎಚ್ಚರಿಸಿದ್ದಾರೆ. ಭಾರತ ಬ್ಯಾಟಿಂಗ್ ಲೈನಪ್ ಅದ್ಭುತವಾಗಿದ್ದು, ಫೀಲ್ಡಿಂಗ್ ನಲ್ಲಿ ಸಮಸ್ಯೆ ಇದೆ ಎಂದಿದ್ದಾರೆ.
ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ನೈಪಣ್ಯಗಳ ಬಗ್ಗೆ ಗಮನ ಹರಿಸಬೇಕು. ಕಠಿಣವಾಗಿ ಶ್ರಮಿಸಿದ್ರೆ ಉತ್ತಮ ಫಲಿತಾಂಶ ಲಭಿಸಲಿದೆ. ಮುಖ್ಯವಾಗಿ ಪಾಕಿಸ್ತಾನ ವಿರುದ್ಧ ಆರಂಭವಾಗಲಿರುವ ಮ್ಯಾಚ್ ನಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು.

ಫೀಲ್ಡರ್ ಗಳು ಸೇವ್ ಮಾಡುವ 15 – 20 ರನ್ ಗಳೇ ತಂಡದ ಗೆಲುವುನ್ನು ನಿರ್ಧಾರ ಮಾಡುತ್ತವೆ. ನಿಜ ಹೇಳಬೇಕೆಂದರೇ ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌಥ್ ಆಫ್ರಿಕಾ ತಂಡಗಳ ಫೀಲ್ಡ್ ಸೆಟ್ಟಿಂಗ್ ಕ್ರೇಜಿಯಾಗಿರುತ್ತದೆ. ಅಷ್ಟೆ ಅಲ್ಲದೇ ಏಷ್ಯಾಕಪ್ ನಲ್ಲಿ ಶ್ರೀಲಂಕಾ ಹೇಗೆ ಫೀಲ್ಡಿಂಗ್ ಮಾಡಿತೋ ಎಲ್ಲರು ನೋಡಿದ್ದೇವೆ. ಫೈನಲ್ ನಲ್ಲಿ ಪಾಕಿಸ್ತಾನವನ್ನು ಹೇಗೆ ಸೋಲಿಸಿತ್ತೋ ಎಲ್ಲರಿಗೂ ನೆನಪಿದೆ. ಆದ್ರೆ ಭಾರತ ತಂಡದ ಫೀಲ್ಡಿಂಗ್ ಉತ್ತಮವಾಗಿಲ್ಲ. ಹೀಗಾಗಿ ಆ ವಿಷಯದಲ್ಲಿ ಖಂಡಿತವಾಗಿ ಸುಧಾರಿಸಬೇಕು ಎಂದಿದ್ದಾರೆ.
ಇನ್ನು ಬ್ಯಾಟಿಂಗ್ ಆರ್ಡರ್ ನಲ್ಲಿ ಭಾರತ ತಂಡ ಉತ್ತಮವಾಗಿದೆ. ನಾಲ್ಕನೇ ಸ್ಥಾನದಲ್ಲಿ ಸೂರ್ಯ, ಐದನೇ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ, ಆರನೇ ಸ್ಥಾನದಲ್ಲಿ ರಿಷಬ್ ಪಂತ್ ಅಥವಾ ದಿನೇಶ್ ಕಾರ್ತಿಕ್ ಇದ್ದರೇ ಟಾಪ್ ಆರ್ಡರ್ ಮತ್ತಷ್ಟು ಅದ್ಭುತವಾಗಿದೆ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.








