IPL 2022 | ಧವನ್ ಅದ್ಭುತ ಆಟಗಾರ.. ರವಿಶಾಸ್ತ್ರಿ ಪ್ರಶಂಸೆ
ಏಪ್ರಿಲ್ 25 ರಂದು ವಾಂಖಡೆಯಲ್ಲಿ ನಡೆದ ಹಾಲಿ ಚಾಂಪಿಯನ್ ಚೈನ್ಸೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಆರಂಭಿಕ ಆಟಗಾರ ಶಿಖರ್ ಧವನ್ ಅಮೋಘ ಇನ್ನಿಂಗ್ಸ್ ಆಡಿದರು.
ಈ ಪಂದ್ಯದಲ್ಲಿ ಧವನ್ 88 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಲ್ಲದೇ ಶಿಖರ್ ಧವನ್ ಈ ಆವೃತ್ತಿಯಲ್ಲಿ ಉತ್ತಮ ಫಾರ್ಮ್ ನಲ್ಲಿದ್ದಾರೆ.
ಸದ್ಯ ಶಿಖರ್ ಧವನ್ ಫಾರ್ಮ್ ಬಗ್ಗೆ ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದು, ಧವನ್ ಮೇಲೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ದಿನದಿಂದ ದಿನಕ್ಕೆ ಶಿಖರ್ ಧವನ್ ತಮ್ಮ ಆಟವನ್ನು ಸುಧಾರಿಸಿಕೊಳ್ಳುತ್ತಿದ್ದಾರೆ. ಅವರು ಪಿಚ್ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಂಡದಲ್ಲಿ ತಮ್ಮ ಪಾತ್ರಕ್ಕಂತೆ ಆಡುತ್ತಿದ್ದಾರೆ.
ಅವರ ಶಾಟ್-ಆಯ್ಕೆ, ಮೈದಾನಕ್ಕ ತಕ್ಕಂತೆ ಆಡುವುದು, ಸರಿಯಾದ ಬೌಲರ್ ಅನ್ನು ಆರಿಸಿಕೊಂಡು ಅಟ್ಯಾಕ್ ಮಾಡುವುದು ಈಗ ಧವನ್ ಆಟದಲ್ಲಿ ನೋಡುತ್ತಿದ್ದೇವೆ. ಧವನ್ ಅದ್ಭುತ ಆಟಗಾರ.
ಐಪಿಎಲ್‌ನಲ್ಲಿ 6000 ರನ್, 200 ಐಪಿಎಲ್ ಪಂದ್ಯಗಳು, ಪಂದ್ಯಶ್ರೇಷ್ಠ ಪ್ರಶಸ್ತಿ, ಧವನ್ ಅವರಿಂದ ನಮ್ಮದೇ ಶೈಲಿಯಲ್ಲಿ ಪಂದ್ಯವನ್ನು ಮುಗಿಸಿದ್ದನ್ನು ನೋಡಿದ್ದೇವೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ravi-shastri-lauds-senior-indian-batter shikhar dhawan