ಅಂತಹ ಮಧುರ ಕ್ಷಣಗಳು ಮತ್ತೆ ಬರುವುದಿಲ್ಲ..!
ನ್ಯೂಡೆಲ್ಲಿ : ಆಸ್ಟ್ರೇಲಿಯಾ ಟೂರ್ ನಲ್ಲಿ ನಾಯಕ ವಿರಾಟ್ ಕೊಹ್ಲಿ ಅವರನ್ನು ನಾವು ಖಚಿತವಾಗಿ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಟೀಂ ಇಂಡಿಯಾದ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.
ಆದ್ರೆ ಪ್ರಸ್ತುತ ಟೀಂ ನಲ್ಲಿ ಯುವ ಪ್ರತಿಭೆಗಳೇ ತುಂಬಿದ್ದು, ಭಾರತಕ್ಕೆ ಹಿಂದುರುಗುವ ಕೊಹ್ಲಿ ನಿರ್ಣಯದಿಂದ ತಮ್ಮನ್ನು ತಾವು ನಿರೂಪಿಸಿಕೊಳ್ಳುವ ಅಧ್ಬುತ ಅವಕಾಶ ಯುವಕರಿಗೆ ದೊರಕಿದೆ ಎಂದಿದ್ದಾರೆ.
ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಜನವರಿಯಲ್ಲಿ ಮಗುವಿಗೆ ಜನ್ಮ ನೀಡುತ್ತಿರೋದು ತಿಳಿದಿರುವ ವಿಷಯ. ಹೀಗಾಗಿ ಪ್ರಸವ ಸಮಯದಲ್ಲಿ ಪತ್ನಿಯ ಜೊತೆ ಇರಲು ಕೊಹ್ಲಿ ಪಿತೃತ್ವ ರಜೆ ತೆಗೆದುಕೊಂಡಿದ್ದಾರೆ.
ಈ ನೇಪಥ್ಯದಲ್ಲಿ ಡಿಸೆಂಬರ್ 17ರಿಂದ ಆರಂಭವಾಗುವ ಮೊದಲ ಟೆಸ್ಟ್ ಪಂದ್ಯದ ಬಳಿಕ ಕೊಹ್ಲಿ ಸ್ವದೇಶಕ್ಕೆ ವಾಪಸ್ ಆಗಲಿದ್ದಾರೆ.
ಕೊಹ್ಲಿ ಜೊತೆಗಿನ ವಿವಾದ : ಮೌನ ಮುರಿದ ಯಾದವ್ ಹೇಳಿದ್ದೇನು..?
ಈ ಕ್ರಮವಾಗಿ ಕೊಹ್ಲಿ ನಿರ್ಣಯ ಪ್ರತಿಷ್ಟಾತ್ಮಕ ಬೋರ್ಡರ್ -ಗವಾಸ್ಕರ್ ಟ್ರೋಫಿಯನ್ನು ಮತ್ತೆ ದಕ್ಕಿಸಿಕೊಳ್ಳಬೇಕೆಂದಿರುವ ಟೀಂ ಇಂಡಿಯಾ ಮೇಲೆ ಅದರಲ್ಲೂ ಬ್ಯಾಟಿಂಗ್ ವಿಭಾಗದಲ್ಲಿ ಪ್ರಭಾವ ಬೀರಲಿದೆ ಎಂದು ಕ್ರಿಕೆಟ್ ದಿಗ್ಗಜರು ಅಭಿಪ್ರಾಯಪಟ್ಟಿದ್ದಾರೆ.
ಈ ವಿಷಯವಾಗಿ ಸ್ಪಂದಿಸಿರುವ ರವಿ ಶಾಸ್ತ್ರಿ, ಕೊಹ್ಲಿ ಸರಿಯಾದ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ವಿರಾಟ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಕಳೆದ ಐದಾರು ವರ್ಷಗಳ ಟೀಂ ಇಂಡಿಯಾದ ನಿರಂತರ ಗೆಲುವುಗಳನ್ನು ಗಮನಿಸಿದ್ರೆ ಅವುಗಳ ಹಿಂದೆ ಕೊಹ್ಲಿ ಇದ್ದಾನೆ ಎನ್ನುವುದು ಸ್ಪಷ್ಟ. ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ಆತ ಸಫಲನಾಗಿದ್ದಾನೆ.
ಆ ರೀತಿಯ ಆಟಗಾರ, ನಾಯಕನನ್ನು ಆಸೀಸ್ ವಿರುದ್ಧದ ಸರಣಿಯಲ್ಲಿ ಖಚಿತವಾಗಿ ಮಿಸ್ ಮಾಡಿಕೊಳ್ಳುತ್ತೇವೆ. ಆದ್ರೆ ಜೀವನದಲ್ಲಿ ಅಂತಹ ಮಧುರ ಕ್ಷಣಗಳು ( ಮೊದಲ ಸಂತಾನಕ್ಕೆ ಸಂಬಂಧಿಸಿದ) ಆಸ್ವಾಧಿಸುವ ಸಮಯ ಮತ್ತೆ ಮತ್ತೆ ಬರೋದಿಲ್ಲ.
ಕೊಹ್ಲಿಗೆ ಸ್ವದೇಶಕ್ಕೆ ವಾಪಸ್ ಆಗುವ ಅವಕಾಶ ಲಭಿಸಿದೆ. ಹೀಗಾಗಿ ಭಾರತಕ್ಕೆ ಹಿಂದುರುಗಲಿದ್ದಾರೆ. ಅದರಿಂದ ಕೊಹ್ಲಿ ತುಂಬಾ ಸಂತೋಷವಾಗಿ ಇದ್ದಾನೆ ಎಂದು ಭಾವಿಸುತ್ತಿದ್ದೇನೆ. ಆತ ಸರಿಯಾದ ನಿರ್ಣಯ ತೆಗೆದುಕೊಂಡಿದ್ದಾನೆ ಎಂದು ವಿರಾಟ್ ಪರ ರವಿಶಾಸ್ತ್ರಿ ಬ್ಯಾಟ್ ಬೀಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










