R Ashwin | ಡೇಲ್ ಸ್ಟೇನ್ ದಾಖಲೆ ಮುರಿದ ಅಶ್ವಿನ್
ಟೆಸ್ಟ್ ಕ್ರಿಕೆಟ್‌ನಲ್ಲಿ 440ನೇ ವಿಕೆಟ್ ಪಡೆದ ಸಾಧನೆ
ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಪಟ್ಟಿಯಲ್ಲಿ 8ನೇ ಸ್ಥಾನ
86ನೇ ಟೆಸ್ಟ್ ನಲ್ಲಿ ರವಿಚಂದ್ರನ್ ಅಶ್ವಿನ್ 440 ವಿಕೆಟ್
ಶ್ರೀಲಂಕಾ ವಿರುದ್ಧವೇ 62 ವಿಕೆಟ್ ಪಡೆದ ರವಿಚಂದ್ರನ್
ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಉತ್ತಮ ಫಾರ್ಮ್ ನಲ್ಲಿದ್ದು, ದಾಖಲೆಗಳನ್ನ ಮುರಿಯೋದೇ ಅಭ್ಯಾಸ ಮಾಡಿಕೊಂಡಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಮೂರು ದಾಖಲೆಗಳನ್ನ ನಿರ್ಮಿಸಿದ್ದಾರೆ.
ಶ್ರೀಲಂಕಾದ ಎರಡನೇ ಇನ್ನಿಂಗ್ಸ್‌ನಲ್ಲಿ ಲಂಕಾದ ಬ್ಯಾಟ್ಸ್‌ಮನ್ ಧನಂಜಯ ಡಿ ಸಿಲ್ವಾರನ್ನ ಅಶ್ವಿನ್ ಔಟ್ ಮಾಡಿದರು.
ಇದರೊಂದಿಗೆ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್‌ರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನ ಮುರಿದರು.
ಅಶ್ವಿನ್ ಈವರೆಗೂ ತಮ್ಮ 86 ಟೆಸ್ಟ್ ಪಂದ್ಯಗಳಲ್ಲಿ 440 ವಿಕೆಟ್ ಪಡೆದುದ್ದಾರೆ. ಸ್ಟೇನ್ 93 ಪಂದ್ಯಗಳಲ್ಲಿ 439 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ 440ನೇ ವಿಕೆಟ್ ಪಡೆದ ಸಾಧನೆಯೊಂದಿಗೆ, ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಜಿಗಿದ್ದಾರೆ.
ಇದಲ್ಲದೇ ಇದೇ ಪಂದ್ಯದಲ್ಲಿ ಅಶ್ವಿನ್ ಮತ್ತೊಂದು ದಾಖಲೆಯನ್ನ ಮಾಡಿದ್ದಾರೆ. ಅದು ಏನಂದರೇ ಶ್ರೀಲಂಕಾ ವಿರುದ್ಧವೇ 62 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಈ ಮೂಲಕ ಏಷ್ಯಾದ ರಾಷ್ಟ್ರಗಳ ವಿರುದ್ಧ 59 ವಿಕೆಟ್ ಪಡೆದ ಆಸ್ಟ್ರೇಲಿಯಾದ ಲೆಜೆಂಡ್ ಶೇನ್ ವಾರ್ನ್ ದಾಖಲೆಯನ್ನ ಹಿಂದಿಕ್ಕಿದ್ದಾರೆ.
ಇನ್ನು ಏಷ್ಯಾದ ರಾಷ್ಟ್ರಗಳ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಶ್ವಿನ್ 4ನೇ ಸ್ಥಾನಕ್ಕೆ ತಲುಪಿದ್ದಾರೆ.
ಈ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಶ್ರೀಲಂಕಾ ವಿರುದ್ಧ 18 ಟೆಸ್ಟ್ ಪಂದ್ಯಗಳಲ್ಲಿ 74 ವಿಕೆಟ್ ಕಬಳಿಸಿ ಮೊದಲ ಸ್ಥಾನದಲ್ಲಿದ್ದಾರೆ.