Jadeja : ರಾಕ್ ಸ್ಟಾರ್ ಜಡೇಜಾ ಚರಿತ್ರೆ ಅವತಾರ
ಟೀಂ ಇಂಡಿಯಾದ ರಾಕ್ ಸ್ಟಾರ್ ಸರ್ ರವೀಂದ್ರ ಜಡೇಜಾ ಮೊಹಾಲಿಯಲ್ಲಿ ಸಿಂಹಳಿಯರ ಬೇಟೆಯಾಡುತ್ತಿದ್ದಾರೆ. ಮೊಹಾಲಿ ಮೈದಾನದಲ್ಲಿ ಜಡೇಜಾ ರಣಬೇಟೆಗಾರನ ಅವತಾರವೆತ್ತಿದ್ದಾರೆ. ಈ ಪಂದ್ಯ ಟೀಂ ಇಂಡಿಯಾ ವರ್ಸಸ್ ಶ್ರೀಲಂಕಾ ಎನ್ನುವುದ್ದಕ್ಕಿಂತ… ರವೀಂದ್ರ ಜಡೇಜಾ ವರ್ಸಸ್ ಶ್ರೀಲಂಕಾ ಎಂಬಂತಾಗಿದೆ.
ಹೌದು…! ಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ 150 ಕ್ಕೂ ಹೆಚ್ಚು ರನ್ ಗಳು.. ಬೌಲಿಂಗ್ ನಲ್ಲಿ ಐದು ವಿಕೆಟ್‌ಗಳೊಂದಿಗೆ, ಆಲ್ ರೌಂಡರ್ ಆಟ ಅಂದ್ರೆ ಏನು ಅಂತಾ ವಿಶ್ವ ಕ್ರಿಕೆಟ್ ಗೆ ಜಡೇಜಾ ತೋರಿಸಿಕೊಟ್ಟಿದ್ದಾರೆ. ಅಲ್ಲದೇ ಸ್ವದೇಶಿ ಪಿಚ್‌ಗಳಲ್ಲಿ ಅವರ ಬೌಲಿಂಗ್ ಎಷ್ಟು ಅಪಾಯಕಾರಿ ಎಂಬುದನ್ನು ಜಡೇಜಾ ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ರವೀಂದ್ರ ಜಡೇಜಾ, 228 ಎಸೆತಗಳಲ್ಲಿ 17 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ ಔಟಾಗದೆ 175 ರನ್ ಗಳಿಸಿದ್ದರು. ನಂತರ 13 ಓವರ್ ಬೌಲ್ ಮಾಡಿ 41 ರನ್ ನೀಡಿ ಐದು ವಿಕೆಟ್ ಪಡೆದಿದ್ದಾರೆ. ಆ ಮೂಲಕ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಜಡೇಜಾ ಸಿಂಹಳೀಯರ ಬೇಟೆಯಾಡಿದ್ದಾರೆ. ಇದರೊಂದಿಗೆ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್ ನಲ್ಲಿ ಕೆಲ ಅಪರೂಪದ ದಾಖಲೆಗಳನ್ನು ಮಾಡಿದ್ದಾರೆ.
ಜಡೇಜ ಬರೆದ ದಾಖಲೆಗಳು ಹೀಗಿವೆ..
ಒಂದೇ ಟೆಸ್ಟ್ ಪಂದ್ಯದಲ್ಲಿ 150ಕ್ಕೂ ಹೆಚ್ಚು ರನ್ ಗಳಿಸಿ.. ಐದು ವಿಕೆಟ್ ಪಡೆದ ವಿಶ್ವದ ಆರನೇ ಆಟಗಾರ.. ಟೀಂ ಇಂಡಿಯಾದ ಮೂರನೇ ಆಟಗಾರ. ಈ ಹಿಂದೆ ವಿನೂ ಮಂಕಡ್ 1952 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಬ್ಯಾಟಿಂಗ್‌ನಲ್ಲಿ 184 ರನ್ ಗಳಿಸಿ , ಐದು ವಿಕೆಟ್‌ಗಳನ್ನು ಪಡೆದಿದ್ದರು. 1962 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ ಭಾರತದ ಮತ್ತೊಬ್ಬ ಕ್ರಿಕೆಟಿಗ, ಪಾಲಿ ಉಮ್ರಿಗರ್ ಔಟಾಗದೆ 172 ರನ್ ಗಳಿಸಿ, ಐದು ವಿಕೆಟ್‌ಗಳನ್ನು ಪಡೆದಿದ್ದರು.
ಜಡೇಜಾ 2017ರಲ್ಲಿ ಟೆಸ್ಟ್‌ನಲ್ಲಿ ಕೊನೆಯದಾಗಿ ಐದು ವಿಕೆಟ್‌ಗಳನ್ನು ಉರುಳಿಸಿದ್ದರು. ಆಗಲೂ ಎದುರಾಳಿ ಶ್ರೀಲಂಕಾ ತಂಡವೇ ಆಗಿತ್ತು.
ಇನ್ನು ಜಡೇಜಾ ಒಟ್ಟಾರೆ ಟೆಸ್ಟ್ ಕ್ರಿಕೆಟ್ ನಲ್ಲಿ ಐದು ವಿಕೆಟ್ ಗಳ ಗುಚ್ಚವನ್ನು ಕಬಳಿಸುತ್ತಿರುವುದು ಇದು ಹತ್ತನೇ ಬಾರಿ. ravindra-jadeja-6th-player-150-plus-score-5-wicket on test cricket