ಅದ್ದೂರಿಯಾಗಿ ಬಿಡುಗಡೆಯಾಯಿತು “ರೇಮೊ” ಚಿತ್ರದ ಟೀಸರ್..!

1 min read

ಅದ್ದೂರಿಯಾಗಿ ಬಿಡುಗಡೆಯಾಯಿತು “ರೇಮೊ” ಚಿತ್ರದ ಟೀಸರ್..!

ರೋಗ್ ಸಿನಿಮಾದಲ್ಲಿ ಸಖತ್ ವಿಭಿನ್ನವಾಗಿ ನಟಿಸಿ ವಿಭಿನ್ನ ಪಾತ್ರದೊಂದಿಗೆ ಜನಮೆಚ್ಚುಗೆ ಪಡೆದಿದ್ದ ನಟ ಇಶಾನ್ ಇದೀಗ ಮತ್ತೆ ಅಂತಹದ್ದೇ ಡಿಫರೆಂಟ್ ಪಾತ್ರದ ಮೂಲಕ ಜನರ ಮುಂದೆ ಬರ್ತಿದ್ದಾರೆ.. ‘Raymo’ ಸಿನಿಮಾ ಮೂಲಕ ಮೋಡಿ ಮಾಡಲು ಹೊರಟಿದ್ದಾರೆ.. ಇದೀಗ ರೆಮೋ ಸಿನಿಮಾದ ಟೀಸರ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿ ಭಾರೀ ಸೌಂಡ್ ಮಾಡ್ತಿದೆ.. ವಿಭಿನ್ನ ಟೈಟಲ್ ನಿಂದಲೇ ಸಿನಿಮಾ ಜನರನ್ನ ಆಕರ್ಶಿಸುತ್ತಿದೆ.. ಸಿನಿಮಾದಲ್ಲಿ ಇಸಾನ್ ರೆಮೋ ಎಂಬ ಪಾತ್ರ ನಿಭಾಸ್ತಾಯಿದ್ದು, ಅವರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಬಣ್ಣ ಹಚ್ಚಿದ್ದಾರೆ..

ಸಿ.ಆರ್.ಮನೋಹರ್ ನಿರ್ಮಾಣದ, ಪವನ್ ಒಡೆಯರ್ ನಿರ್ದೇಶನದ, ಇಶಾನ್ ಹಾಗೂ ಆಶಿಕಾ ರಂಗನಾಥ್ ಜೋಡಿಯ “ರೇಮೊ” ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ‌ ಮಂಡಳಿ ಅಧ್ಯಕ್ಷ ಜೈರಾಜ್, ಮಾಜಿ ಅಧ್ಯಕ್ಷ ಸಾ ರಾ ಗೋವಿಂದು, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಹಾಗೂ ನಿರ್ಮಾಪಕರಾದ ಕೆ.ಮಂಜು, ಎಂ.ಜಿ.ರಾಮಮೂರ್ತಿ, ಉಮಾಪತಿ ಶ್ರೀನಿವಾಸ್ ಗೌಡ, ಉಮೇಶ್ ಬಣಕಾರ್ , ಎ.ಗಣೇಶ್ , ಎಂ.ಎನ್ ಸುರೇಶ್, ಆನಂದ್ ಆಡಿಯೋ ಶ್ಯಾಮ್, ನಿರ್ದೇಶಕರಾದ ಯೋಗರಾಜ್ ಭಟ್, ಹರ್ಷ, ನಾಗಣ್ಣ, ವಿಜಯ್ ಕುಮಾರ್ ಕೊಂಡ ಹಾಗೂ ಉದ್ಯಮಿ ಸಿ.ಜೆ ರಾಯ್ ಸೇರಿದಂತೆ ಅನೇಕ ಗಣ್ಯರು ಟೀಸರ್ ಬಿಡುಗಡೆಗೆ ಆಗಮಿಸಿ ಶುಭ‌ ಕೋರಿದರು.

ನಮ್ಮದು ತುಂಬು ಕುಟುಂಬ.‌ ಇಶಾನ್ ನನ್ನ ತಮ್ಮ(ಚಿಕ್ಕಪ್ಪನ ಮಗ). ನಮ್ಮ ಮನೆಗೆ ಬಂದವರೆಲ್ಲಾ ಇಶಾನನ್ನು ಹೀರೋ ಮಾಡಿ ಎನ್ನುತ್ತಿದ್ದರು. “ರೋಗ್” ಚಿತ್ರದ ಮೂಲಕ ಇಶಾನ್ ಹೋರೋ ಆದ. ನಂತರ ಪವನ್ ಒಡೆಯರ್ ಈ ಚಿತ್ರದ ಕಥೆ ಹೇಳಿದರು. ಇಷ್ಟವಾಯಿತು. ನಾನು ಸಿನಿಮಾ ನೋಡಿದ್ದೀನಿ. ಚೆನ್ನಾಗಿದೆ. ಇಡೀ ಚಿತ್ರತಂಡದ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಸಮಾರಂಭಕ್ಕೆ ಪ್ರೀತಯಿಟ್ಟು ಬಂದಿರುವ ಎಲ್ಲಾ ಗಣ್ಯರಿಗೆ ಧನ್ಯವಾದಗಳು ಎಂದರು ಸಿ.ಆರ್.ಮನೋಹರ್.

ನನ್ನ ಚಿತ್ರ ನಿಮ್ಮ ನಿರೀಕ್ಷೆಯನ್ನು ಹುಸಿ ಮಾಡಲ್ಲ ಎಂದು ಹೇಳಲು ಇಚ್ಛಿಸುತ್ತೇನೆ.
ನಾನು ಬರೆದಂತ ಪಾತ್ರಗಳನ್ನು ಪ್ರೀತಿಯಿಂದ ಅಪ್ಪಿಕೊಂಡು ನಟಿಸಿದ್ದ ಕಲಾವಿದರಿಗೆ, ನಾನು ಕಂಪೋಸ್ ಮಾಡಿದ ಬ್ಯುಟಿಫುಲ್ ವಿಸ್ಯುಲೈಸೇಶನಿಗೆ ಕೊಡುಗೆ ನೀಡಿರುವ ತಂತ್ರಜ್ಞರಿಗೆ ಇದೆಲ್ಲಕ್ಕೂ ಸಾಥ್ ನೀಡಿದ ನಿರ್ಮಾಪಕ‌ ಮನೋಹರ್ ಅವರಿಗೆ ತುಂಬು ಹೃದಯದ ಧನ್ಯವಾದ ಎನ್ನುತ್ತಾರೆ ನಿರ್ದೇಶಕ ಪವನ್ ಒಡೆಯರ್.

ನಾನು ದುಬೈನಲ್ಲಿ ಪವನ್ ಒಡೆಯರ್ ಅವರನ್ನು ಭೇಟಿ ಮಾಡಿದ್ದು, ಆಗ ಈ ಚಿತ್ರದ ಬಗ್ಗೆ ಮಾತನಾಡಿಕೊಂಡೆವು. ನಂತರ ಈ ಚಿತ್ರದ ಜರ್ನಿ ಆರಂಭವಾಯಿತು. ನನ್ನ ಅಣ್ಣ ಮನೋಹರ್ ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಅವರ ಹಾಗೂ ನನ್ನ ಮತ್ತೊಬ್ಬ ಅಣ್ಣ ಸಿ.ಆರ್ ಗೋಪಿ ಅವರ ಪ್ರೀತಿಗೆ ನಾನು ಚಿರ ಋಣಿ. ಪವನ್ ಒಡೆಯರ್ ನಿರ್ದೇಶನದಲ್ಲಿ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಆಶಿಕಾ ರಂಗನಾಥ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ, ಅರ್ಜುನ್ ಜನ್ಯ ಅವರ ಸಂಗೀತ, ವೈದಿ ಅವರ‌ ಛಾಯಾಗ್ರಹಣ ಎಲ್ಲವೂ ಚೆನ್ನಾಗಿದೆ. ಚಿತ್ರ ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು ನಾಯಕ ಇಶಾನ್.

ಚಿತ್ರದ ಟೀಸರ್ ನೋಡಿದವರು ನಿಮ್ಮ ಹಾಗೂ ಇಶಾನ್ ಅವರ ಜೋಡಿ ತುಂಬಾ ಚೆನ್ನಾಗಿದೆ ಎನ್ನುತ್ತಿದ್ದಾರೆ. ಮೋಹನ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀ‌ನಿ. ಅವಕಾಶ ನೀಡಿದ್ದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕಿ ಆಶಿಕಾ ರಂಗನಾಥ್.
.
ಚಿತ್ರದಲ್ಲಿ ನಟಿಸಿರುವ ರಾಜೇಶ್ ನಟರಂಗ, ಶರಣ್ಯ ಶರಣ್ ಹಾಗೂ ವಸ್ತ್ರ ವಿನ್ಯಾಸ ಮಾಡಿರುವ ಅಪೇಕ್ಷ ಪವನ್ ಒಡೆಯರ್ ಈ ಚಿತ್ರದ ಬಗ್ಗೆ ಮಾತನಾಡಿದರು.

ಶಿವಶಂಕರ್ ಮಾಸ್ಟರ್ ನೆರವಿಗೆ ಬಂದ ಸೋನು ಸೂದ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd