RBI ಹೆಸರಲ್ಲಿ ಜನರ ಬಳಿ ಹಣ ಪಡೆಯುತ್ತಾ ವಂಚಿಸುತ್ತಿದ್ದ ಗ್ಯಾಂಗ್ ಅರೆಸ್ಟ್
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಹಣ ಪಡೆದು ಉದ್ಯಮಿಗಳನ್ನು ವಂಚಿಸುತ್ತಿದ್ದ ಮಹಿಳೆಯ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ಕೋಟೆ ಬಡಾವಣೆಯಲ್ಲಿರುವ ಮನೆ ಮೇಲೆ ರೇಡ್ ನಡೆಸಿದ್ದಾರೆ.. ಆರೋಪಿ ಅರ್ಚನಾ ಎಂಬಾಕೆ ವಿದೇಶದಿಂದ ಹಣ ಬಂದಿದೆ ಟ್ಯಾಕ್ಸ್ ಕಟ್ಟಿ ಹಣ ಪಡೆಯಬೇಕಿದೆ ಎಂದು ಹೇಳಿ ಜನರನ್ನ ವಂಚಿಸುತ್ತಿದ್ದಳು ಎನ್ನಲಾಗಿದೆ.
ಕೋಟೆ ಬಡಾವಣೆಯ ಬೆಸ್ಕಾಂ ಸಿಬ್ಬಂದಿಯಾಗಿದ್ದ ಅರ್ಚನಾ ಹಾಗೂ ಆಕೆಯ ತಂಡ RBI ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡ್ತಿದ್ದರು.. ಈ ಮೋಸದ ಜಾಲಕ್ಕೆ ಸಹಕರಿಸುತ್ತಿದ್ದ ನಟ ಶಂಕರ್ ಬಂಧನವಾಗಿದೆ. ಅಲ್ಲದೇ ಅರ್ಚನ ಸಹೋದರ ಶ್ರೀಹರಿ, ಶ್ರೀಪತಿಯನ್ನೂ ಬಂಧಿಸಲಾಗಿದೆ.
24 ಕೋಟಿ ಸೆಸ್ ಹಣವನ್ನು RBI ಗೆ ಪಾವತಿಸಬೇಕು. ನಂತರ ಆರು ಲಕ್ಷ ಮೂವೈತ್ತೇದು ಸಾವಿರ ಕೋಟಿ ರೂಪಾಯಿ ಬರುತ್ತೆ ಎಂದು ಈ ಖತರ್ನಾಕ್ ಗ್ಯಾಂಗ್ ಜನರಿಂದ ಹಣ ಪಡೆದು ವಂಚನೆ ಮಾಡುತ್ತಿತ್ತು. ಬೆಂಗಳೂರಿನ ವಂಶಿಕೃಷ್ಣ ಎನ್ನುವವರಿಗೆ 2ಕೋಟಿ 2 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಲಾಗಿದೆ.. ಬಳಿಕ ಈ ಪ್ರಕರಣ ಬೆಳಕಿಗೆ ಬಮದಿದ್ದು, ಪೊಲೀಸರು ಆರೋಪಿಗಳನ್ನ ಬಂಧಿಸಿ ತನಿಖೆ ಆರಂಭಿಸಿದ್ಧಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.