RBI repo rate: 35 ಪಾಯಿಂಟ್ ಗಳಿಂದ 6.25% ಗೆ ರೆಪೋ ದರ ಹೆಚ್ಚಿಸಿದ RBI…
ಮೂರು ದಿನಗಳ ಕಾಲ ನಡೆದ ವಿತ್ತೀಯ ನೀತಿ ಸಮಿತಿ (ಎಂಪಿಸಿ) ಸಭೆಯ ನಂತರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೊ ದರವನ್ನು 35 ಬೇಸಿಸ್ ಪಾಯಿಂಟ್ಗಳಿಂದ (ಬಿಪಿಎಸ್) 6.25 % ಕ್ಕೆ ಹೆಚ್ಚಿಸಲಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಈಗ ಆರ್ಬಿಐನ ರೆಪೊ ದರ ಶೇ.5.4 ರಿಂದ ಶೇ.6.25ಕ್ಕೆ ಏರಿಕೆಯಾಗಿದೆ. ಈ ಹಿಂದೆ, ಆರ್ಬಿಐ ಅಕ್ಟೋಬರ್ ಮತ್ತು ಆಗಸ್ಟ್ನಲ್ಲಿಯೂ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿತ್ತು. ಮೇ ತಿಂಗಳಿನಲ್ಲಿ ನಡೆದ ಎಂಪಿಸಿ ಸಭೆಯಲ್ಲೂ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ಗಳಿಂದ 4.90% ಕ್ಕೆ ಹೆಚ್ಚಿಸಲಾಗಿದೆ.
ಸೆಂಟ್ರಲ್ ಬ್ಯಾಂಕ್ ಕೊನೆಯದಾಗಿ ಸೆಪ್ಟೆಂಬರ್ 30 ರಂದು ಪ್ರಮುಖ ಬೆಂಚ್ಮಾರ್ಕ್ ದರವನ್ನು 50 ಬೇಸಿಸ್ ಪಾಯಿಂಟ್ಗಳಿಂದ ಹೆಚ್ಚಿಸಿತ್ತು. ಇದರೊಂದಿಗೆ, ಏಪ್ರಿಲ್ 2022 ರಿಂದ ರೆಪೊ ದರವನ್ನು 225 bps ಹೆಚ್ಚಿಸಲಾಗಿದೆ.
ಸೆಪ್ಟೆಂಬರ್ 30 ರಂದು ತನ್ನ ಕೊನೆಯ ನೀತಿ ಹೇಳಿಕೆಯಲ್ಲಿ, RBI ಯ MPC FY23 ಗಾಗಿ GDP ಬೆಳವಣಿಗೆಯನ್ನು 7 ಶೇಕಡಾ ಮತ್ತು ಚಿಲ್ಲರೆ ಹಣದುಬ್ಬರವನ್ನು 6.7 ಶೇಕಡಾ ಎಂದು ಅಂದಾಜಿಸಿದೆ.
RBI repo rate: RBI hiked repo rate by 35 points to 6.25%…