ರೆಪೋ ದರ ಯಥಾಸ್ಥಿತಿ – RBI : ಹಾಗಾದ್ರೆ ರೆಪೋ, ರಿವರ್ಸ್ ರೆಪೋ ದರ ಎಂದರೇನು..?
ಮುಂಬೈ : ಕಳೆದ ವರ್ಷವು ನಮ್ಮ ಸಾಮಥ್ರ್ಯ ಮತ್ತು ಸಹಿಷ್ಣುತೆಯನ್ನು ಪರೀಕ್ಷಿಸಿದರೆ, 2021 ಭಾರತದ ಇತಿಹಾಸದ ಹಾದಿಯಲ್ಲಿ ಹೊಸ ಆರ್ಥಿಕ ಯುಗಕ್ಕೆ ವೇದಿಕೆ ಕಲ್ಪಿಸುತ್ತಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಜೊತೆಗೆ ಈ ಬಾರಿ ಕೂಡ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.
ಹಣಕಾಸು ನೀತಿ ಸಮಿತಿಯು ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ಫೆಬ್ರವರಿ 3ರಿಂದ ಇಂದಿನವರೆಗೆ ಸಭೆ ನಡೆಸಿದ್ದು, ಪ್ರಸ್ತುತ ದೇಶೀಯ ಮತ್ತು ಜಾಗತಿಕ ಮಟ್ಟದಲ್ಲಿನ ಆರ್ಥಿಕ ಸ್ಥಿತಿ ಹಾಗೂ ಆರ್ಥಿಕ ಬೆಳವಣಿಗೆಗಳ ಕುರಿತು ಚರ್ಚಿಸಿದೆ.
ರೆಪೋ ದರ ಯಥಾಸ್ಥಿತಿ, ಹೊಸ ಆರ್ಥಿಕ ಯುಗಕ್ಕೆ 2021 ವೇದಿಕೆ : ಶಕ್ತಿಕಾಂತ್ ದಾಸ್
ಈ ವೇಳೆ ಭಾರತೀಯ ರಿಸರ್ವ್ ಬ್ಯಾಂಕ್ ನ ವಿತ್ತೀಯ ನೀತಿ ಸಮಿತಿ (ಎಂಪಿಸಿ) ಸಲಹೆ ಮೇರೆಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿರುವುದಾಗಿ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಬ್ಯಾಂಕ್ ದರ ಹಾಗೂ ಎಂಎಸ್ ಎಲ್ ಆರ್ ದರ ಕೂಡಾ ಮೊದಲಿದ್ದ ಶೇ. 4.25 ರಲ್ಲಿ ಹಾಗೂ ರಿವರ್ಸ್ ರೆಪೋ ದರ ಶೇಕಡಾ 3.35 ರಲ್ಲೇ ಮುಂದುವರೆಯಲಿದೆ.
ಇತ್ತ RBI ರೆಪೋ ದರ ಘೋಸಿಸುತ್ತಿದ್ದಂತೆ ಮುಂಬೈ ಶೇರುಪೇಟೆಯ ಶುಕ್ರವಾರ ( ಫೆಬ್ರವರಿ -5) ರ ಆರಂಭಿಕ ವಹಿವಾಟು ದಾಖಲೆ ಮಟ್ಟ ತಲುಪಿದೆ. ಹಾಗಾದ್ರೆ ರೆಪೋ ದರ , ರಿವರ್ಸ್ ರೆಪೋ ದರ ಎಂದ್ರೇನು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
RBI ರೆಪೋ ದರ ಘೋಷಣೆ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ 330 ಅಂಕ ಏರಿಕೆ..!
ರೆಪೊ ದರ – ಆರ್ ಬಿಐ ಬ್ಯಾಂಕುಗಳಿಗೆ ಸಾಲ ನೀಡುವ ದರವಾಗಿದೆ. ಈ ಸಾಲದೊಂದಿಗೆ ಬ್ಯಾಂಕುಗಳು ಗ್ರಾಹಕರಿಗೆ ಸಾಲವನ್ನು ನೀಡುತ್ತವೆ. ಕಡಿಮೆಯಾದ ರೆಪೊ ದರ ಎಂದರೆ ಗೃಹ ಸಾಲಗಳು, ವಾಹನ ಸಾಲಗಳು ಮುಂತಾದ ಬ್ಯಾಂಕಿನಿಂದ ಅನೇಕ ರೀತಿಯ ಸಾಲಗಳು ಕಡಿಮೆಯಾಗಿರುತ್ತವೆ.
ರಿವರ್ಸ್ ರೆಪೊ ದರ – ಇದು ರೆಪೊ ದರದ ಹಿಮ್ಮುಖವಾಗಿದೆ. ಬ್ಯಾಂಕುಗಳು ತಮ್ಮ ಪರವಾಗಿ ಆರ್‌ಬಿಐನಲ್ಲಿ ಠೇವಣಿ ಇರಿಸಿದ ಹಣಕ್ಕೆ ಬಡ್ಡಿಯನ್ನು ಪಡೆಯುವ ದರ ಇದು. ಮಾರುಕಟ್ಟೆಗಳಲ್ಲಿ ಹಣದ ದ್ರವ್ಯತೆಯನ್ನು ನಿಯಂತ್ರಿಸಲು ರಿವರ್ಸ್ ರೆಪೊ ದರವನ್ನು ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಹೆಚ್ಚು ಹಣವಿದ್ದಾಗಲೆಲ್ಲಾ, ಆರ್‌ಬಿಐ ರಿವರ್ಸ್ ರೆಪೊ ದರವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಹೆಚ್ಚಿನ ಬಡ್ಡಿ ಗಳಿಸಲು ಬ್ಯಾಂಕ್ ತನ್ನ ಹಣವನ್ನು ಅದರೊಂದಿಗೆ ಠೇವಣಿ ಮಾಡುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel