ಮ್ಯಾಕ್ಸ್ ವೆಲ್, ಸ್ಟಾರ್ಕ್, ಜೆಮಿಸನ್ ಮೇಲೆ ಆರ್ ಸಿಬಿ ಕಣ್ಣು..!
ನಾವು ಈಗಾಗಲೇ ಐಪಿಎಲ್ ತಂಡಗಳ ರಿಟೈನ್ – ರಿಲೀಸ್ ಮಾಡಿದ ಆಟಗಾರರ ಪಟ್ಟಿಯನ್ನ ನೋಡಿಬಿಟ್ಟಿದ್ದೀವಿ. ಅಚ್ಚರಿ ಎಂಬಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 10 ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದೆ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಯಾಕೆಂದ್ರೆ 2020ರ ಐಪಿಎಲ್ ಸೀನನ್ ನಲ್ಲಿ ಆರ್ ಬಿಸಿ ಉತ್ತಮವಾದ ಪ್ರದರ್ಶನವನ್ನೇ ನೀಡಿದೆ. ಮೂರು ವರ್ಷಗಳ ಬಳಿಕ ಪ್ಲೇ ಅಪ್ ಗೂ ಕೂಡ ಎಂಟ್ರಿ ಕೊಟ್ಟಿತ್ತು. ಟೂರ್ನಿ ಆರಂಭದಲ್ಲಿ ಕಪ್ ಗೆಲ್ಲುವ ಸೂಚನೆಯನ್ನೂ ಕೂಡ ಕೊಡ್ತು. ಆದ್ರೆ ಟೂರ್ನಿಯ ದ್ವಿತಿಯಾರ್ಧದಲ್ಲಿ ಬರೊಬ್ಬರಿ ಐದು ಪಂದ್ಯಗಳನ್ನ ಸೋತರೂ ಒಟ್ಟಾರೆ 2020 ಆರ್ ಸಿಬಿಗೆ ಒಳ್ಳೆ ಸೀಸನ್ ಆಗಿತ್ತು.
ಆದರೂ ಕೂಡ 10 ಮಂದಿ ಆಟಗಾರರನ್ನು ಬಿಟ್ಟುಕೊಟ್ಟಿದೆ ಅಂದ್ರೆ, ಎಲ್ಲೋ ಒಂದು ಕಡೆ ಟೀಂ ಮ್ಯಾನೆಜ್ ಮೆಂಟ್, ತಂಡಕ್ಕೆ ಹೊಸ ಲುಕ್ ಕೊಡಲು ಪ್ರಯತ್ನ ಮಾಡಿದಂತಿದೆ.
ಹಾಗಾದ್ರೆ ಹೊಸ ಲುಕ್ ಕೊಡಲು ಏನು ಮಾಡ್ಬೇಕು..?
ಸದ್ಯದ ಮಾಹಿತಿ ಪ್ರಕಾರ ಆರ್ ಸಿಬಿ 13 ಆಟಗಾರರನ್ನ ಖರೀದಿ ಮಾಡಬಹುದು. ನಾಲ್ಕು ವಿದೇಶಿ ಆಟಗಾರರನ್ನೂ ಸೇರಿಸಿ. ಆದ್ರೆ ಈಗಾಗಲೇ ಟ್ರೆಡಿಂಗ್ ರೂಪದಲ್ಲಿ ಆರ್ ಸಿಬಿ ತಂಡ, ಆಸ್ಟ್ರೇಲಿಯಾದ ಎಡಗೈ ವೇಗಿ ಡೇನಿಯಲ್ ಸೆಮ್ಸ್, ಮತ್ತು ವೇಗದ ಬೌಲಿಂಗ್ ಜೊತೆ ಬ್ಯಾಟಿಂಗ್ ಕೂಡ ಮಾಡಬಲ್ಲ ಹರ್ಷಲ್ ಪಟೇಲ್ ಅವರನ್ನ ಟ್ರೆಡಿಂಗ್ ರೂಪದಲ್ಲಿ ಡೆಲ್ಲಿಯಿಂದ ತೆಗೆದುಕೊಂಡಿದ್ದಾರೆ. ಹೀಗಾಗಿ ಇನ್ನ 11 ಮಂದಿ ಆಟಗಾರರನ್ನ ಮಾತ್ರ ಖರೀದಿ ಮಾಡಬಹುದು.
ಈ 11 ಮಂದಿ ಆಟಗಾರರಲ್ಲಿ 3 ವಿದೇಶಿ ಆಟಗಾರರನ್ನು ಖರೀದಿ ಮಾಡಬೇಕು. ಇದ್ರಲ್ಲಿ ಹೆಚ್ಚು ಜಾಗ್ರತೆ ವಹಿಸಿಬೇಕು. ಯಾಕೆಂದ್ರ ಸದ್ಯ ಆರ್ ಸಿಬಿ ಟೀಂನಲ್ಲಿ ಐದು ಮಂದಿ ವಿದೇಶಿ ಆಟಗಾರರಿದ್ದಾರೆ. ಇದರಲ್ಲಿ ಎಬಿಡಿ ವಿಲಿಯರ್ಸ್ ಮಾತ್ರ ಆಡುವ ಹನ್ನೊಂದರಲ್ಲಿ ಇರ್ತಾರೆ. ಇನ್ನುಳಿದಂತೆ ನಾಲ್ವರು ( ಪಿಲಿಪ್, ಜಂಪಾ, ರಿಚರ್ಡ್ ಸನ್, ಸ್ಯಾಮ್ ಸನ್) ವಿದೇಶ ಆಟಗಾರರ ಪೈಕಿ ಇಂತಹವರು ಖಂಡಿತವಾಗಿ ತಂಡದಲ್ಲಿ ಆಡೇ ಆಡ್ತಾರೆ ಅನ್ನೋ ಪ್ಲೇಯರ್ ಗಳಿಲ್ಲ. ಹೀಗಾಗಿ ಹರಾಜು ಪ್ರಕ್ರಿಯೆಯಲ್ಲಿ ಬಹಳ ಜಾಗ್ರತೆ ವಹಿಸಿ, ಖಂಡಿತವಾಗಿ ಆಡುವ ಹನ್ನೊಂದರಲ್ಲಿ ಬರುವ ಆಟಗಾರರನ್ನು ಖರೀದಿ ಮಾಡಬೇಕು. ಅಂದಹಾಗೆ ಆರ್ ಸಿಬಿ ಬಳಿ ಸದ್ಯ 35 ಕೋಟಿ ಇದೆ.
ಮೊದಲು ಬ್ಯಾಟಿಂಗ್ ವಿಚಾರಕ್ಕೆ ಬಂದ್ರೆ ಕಳೆದ ಕೆಲ ಸೀಸನ್ ಗಳಿಂದ ಆರ್ ಸಿಬಿಗೆ ಬ್ಯಾಟಿಂಗ್ ವಿಭಾಗ ತಲೆನೋವಾಗಿತ್ತು. ಮುಖ್ಯವಾಗಿ ಕೆಳಕ್ರಮಾಂಕದಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಕೊಹ್ಲಿ, ಎಬಿಡಿ ಬಿಟ್ಟರೇ ಉಳಿದ ಬ್ಯಾಟ್ಸ್ ಮೆನ್ ಗಳು ನಿರೀಕ್ಷೆಗಳನ್ನ ಉಳಿಸಿಕೊಂಡಿಲ್ಲ. ಮೂರನೇ ಬ್ಯಾಟ್ಸ್ ಮೆನ್ ಆಗಿ ವಿರಾಟ್ ಬಂದ್ರೆ, ನಾಲ್ಕನೇ ಸ್ಥಾನದಲ್ಲಿ ಎಬಿಡಿ ಕ್ರೀಸ್ ಗೆ ಬರ್ತಾರೆ. ಇದಾದ ಬಳಿಕ ತಂಡದಲ್ಲಿ ಐದು ಮತ್ತು ಆರನೇ ಸ್ಥಾನವನ್ನ ತುಂಬುವ ಆಟಗಾರನ ಕೊರತೆ ಇದೆ. ಇದೇ ಕಾರಣಕ್ಕೆ ಕಳೆದ ಸೀಸನ್ ನಲ್ಲಿ ವಿರಾಟ್ – ಎಬಿಡಿ ನಿಧಾನಗತಿ ಬ್ಯಾಟಿಂಗ್ ಗೆ ಮೊರೆ ಹೋಗಿದ್ದರು. ಹೀಗಾಗಿ ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಐದು ಮತ್ತು ಆರನೇ ಸ್ಥಾನವನ್ನ ತುಂಬುವಂತಹ ಆಟಗಾರನಿಗೆ ಆರ್ ಸಿಬಿ ಬಲೆ ಬೀಸಬೇಕಿದೆ.
ಸ್ಟೀವ್ ಸ್ಮಿತ್ ಗೆ ಮಣೆ..?
ಈ ಬಾರಿ ಹರಾಜಿನಲ್ಲಿ ಸ್ಟೀವ್ ಸ್ಮಿತ್ ಕೂಡ ಇರಲಿದ್ದಾರೆ. ಟೆಕ್ನಿಕಲಿ ನೋಡಿದ್ರೆ ಸ್ಮಿತ್ ಒಳ್ಳೆಯ ಬ್ಯಾಟ್ಸ್ ಮೆನ್. ಆರ್ ಸಿಬಿ ಸ್ಮಿತ್ ಗೆ ಮಣೆ ಹಾಕುತ್ತಾ, ಅಂದ್ರೆ ಸಾಧ್ಯತೆ ತುಂಬಾ ಕಡಿಮೆ ಇದೆ. ಯಾಕೆಂದ್ರೆ ಐದನೇ ಸ್ಥಾನದಲ್ಲಿ ಬಿಗ್ ಹಿಟ್ಟಿಂಗ್ ಪ್ಲೇಯರ್ ಗಳ ಅವಶ್ಯಕತೆ ಇರುತ್ತೆ. ಕೊನೆಯಲ್ಲಿ ಮೂರು ಅಥವಾ ನಾಲ್ಕು ಓವರ್ ಗಳು ಮಾತ್ರ ಬಾಕಿ ಇರುತ್ವೆ ಈ ಸಮಯದಲ್ಲಿ ದೊಡ್ಡ ಹೊಡೆತಗಳ ಅವಶ್ಯಕತೆ ಇರುತ್ತೆ. ಆದ್ರೆ ಸ್ಮಿತ್ ಬಿಗ್ ಹಿಟ್ಟಿಂಗ್ ಪ್ಲೇಯರ್ ಅಲ್ಲ.
ಗ್ಲೇನ್ ಮ್ಯಾಕ್ಸ್ ವೆಲ್ : ಸದ್ಯ ಹರಾಜಿನಲ್ಲಿ ಮ್ಯಾಕ್ಸ್ ವೆಲ್ ನತ್ತ ಆರ್ ಸಿಬಿ ಒಲವು ತೋರಿಸುವ ಸಾಧ್ಯತೆಗಳಿವೆ. ಯಾಕೆಂದ್ರೆ ಐದನೇ ಸ್ಥಾನಕ್ಕೆ ಮ್ಯಾಕ್ಸಿ ಹೇಳಿ ಮಾಡಿಸಿದ ಆಟಗಾರ. ಆದ್ರೆ ಕಳೆದ ಸೀಸನ್ ನಲ್ಲಿ ಅವರ ಪ್ರದರ್ಶನ ಹೇಳಿಕೊಳ್ಳುವ ರೀತಿ ಇರಲಿಲ್ಲ. ಆದ್ರೆ ಒಬ್ಬ ಆಪ್ ಬ್ರೇಕ್ ಸ್ಪಿನ್ನರ್ ಗಾಗಿ ಫೀಲ್ಡರ್ ಆಗಿ ಅವರು ನೀಡುವ ಪ್ರದರ್ಶನ ತಂಡಕ್ಕೆ ಉಪಯುಕ್ತವಾಗಿರುತ್ತೆ.
ಕ್ಯಾಮರನ್ ಗ್ರೀನ್ :
ಗ್ರೀನ್ ಟೆಸ್ಟ್ ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ. ಆದ್ರೆ ಏಕದಿನ, ಟಿ 20ಯಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಆರನೇ ಬೌಲರ್ ಆಗಿ ಕೂಡ ಅವರನ್ನ ಬಳಸಿಕೊಳ್ಳಬಹುದು.
ಇಂಡಿಯನ್ಸ್ ಗೆ ಮಣೆ ಹಾಕ್ತಾರಾ..?
ವಿದೇಶಿ ಆಟಗಾರರಲ್ಲಿ ಮ್ಯಾಕ್ಸಿ ಬಿಟ್ಟರೇ ಬೇರೆ ಯಾವ ಆಟಗಾರನೂ ಬೆಟರ್ ಆಪ್ಷನ್ ಆಗಿ ಕಾಣ್ತಿಲ್ಲ. ಹೀಗಾಗಿ ಇಂಡಿಯನ್ಸ್ ಪ್ಲೇಯರ್ ಕಡೆ ಒಲವು ತೋರಿಸಿದ್ರೆ, ಮುಷ್ತಾಕ್ ಅಲಿ ಟ್ರೋಪಿಯಲ್ಲಿ ಮಿಂಚಿನ ತಮಿಳುನಾಡಿನ ಶಾರುಖ್ ಖಾನ್, ಕೇರಳದ ಅಜರುದ್ದೀನ್ ಅವರನ್ನ ಬಿಡ್ ಮಾಡಬಹುದು.
ಸಾಲಿಡ್ ಪ್ಲೇಯರ್ ಗಳತ್ತ ನೋಡೋದಾದ್ರೆ, ಕರುಣ್ ನಾಯರ್, ಕೇಧಾರ್ ಜಾದವ್ ರನ್ನ ಕೂಡ ಕನ್ಸಿಡೇರ್ ಮಾಡಬಹುದು.
ಇನ್ನು ಓಪನರ್ ವಿಚಾರಕ್ಕೆ ಬಂದ್ರೆ, ಪಿಂಚ್ ಅವರನ್ನ ಬಿಟ್ಟುಕೊಟ್ಟಿರುವುದರಿಂದ ಆರ್ ಸಿಬಿಗೆ ಆರಂಭಿಕರ ಅವಶ್ಯಕತೆ ಇದೆ. ಹೀಗಾಗಿ ಡೇವಿಡ್ ಮಲನ್, ಜೇಸನ್ ರಾಯ್ ಅವರಿಗೆ ಮಣೆ ಹಾಕುವ ಸಾಧ್ಯತೆಗಳಿವೆ.
ಬೌಲಿಂಗ್ ವಿಚಾರಕ್ಕೆ ಆರ್ ಸಿಬಿಗೆ ಡೆತ್ ಓವರ್ ಗಳಲ್ಲಿ ರನ್ ಗೆ ಕಡಿವಾಣ ಹಾಕುವ ವೇಗಿಯ ಅವಶ್ಯಕತೆ ಇದೆ. ಸಿರಾಜ್, ಸೈನಿ ಇದ್ದರೂ ಕೂಡ ಇವರ ಮೇಲೆ ಹೆಚ್ಚು ನಿರೀಕ್ಷೆಗಳಿಲ್ಲ. ಹೀಗಾಗಿ ವಿದೇಶಿ ವೇಗಿಗಳಿಗೆ ಮಣಿ ಹಾಕಬೇಕಾಗುತ್ತದೆ. ಹರಾಜಿನಲ್ಲಿ ನ್ಯೂಜಿಲೆಂಡ್ ನ ಖೈಲ್ ಜೇಮಿಸನ್, ಆಸ್ಟ್ರೇಲಿಯಾದ ಸಾರ್ಕ್ ಇದ್ದು, ಈ ಇಬ್ಬರು ವೇಗಿಗಳಿಗೆ ಆರ್ ಸಿಬಿ ಮಣೆ ಹಾಕುವ ಸಾಧ್ಯತೆಗಳಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel