ಪ್ರಸಕ್ತ ಸಾಲಿನ ಐಪಿಎಲ್ ಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಎಲ್ಲ ತಂಡಗಳು ಐಪಿಎಲ್ ತಯಾರಿ ನಡೆಸಿವೆ. ಆರ್ ಸಿಬಿ ಕೂಡ ಇದಕ್ಕೆ ಹೊರತಲ್ಲ. ಹಿರಿಯ ಆಟಗಾರರು ಸದ್ಯದಲ್ಲಿಯೇ ತಂಡ ಸೇರಿಕೊಳ್ಳಲಿದ್ದು, ಈಗ ಆರ್ ಸಿಬಿ ವೇಳಾಪಟ್ಟಿ ನಿಮಗೆ ನೀಡುತ್ತಿದ್ದೇವೆ.
ದೇಶದಲ್ಲಿ ಲೋಕಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಈ ಬಾರಿ ಮೊದಲ ಹಂತದಲ್ಲಿ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಸದ್ಯ ಬಿಸಿಸಿಐ ಘೋಷಿಸಿದೆ. ಲೋಕಸಭೆ ಚುನಾವಣೆ ದಿನಾಂಕ ನೋಡಿಕೊಂಡು ಇನ್ನುಳಿದ ಪಟ್ಟಿ ಬಿಡುಗಡೆ ಮಾಡಲು ಬಿಸಿಸಿಐ ಮುಂದಾಗಿದೆ.
ಮಾರ್ಚ್ 22 ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ರಾಯಲ್ ಚಾಲೆಂಜರ್ಸ್ ಸೆಣಸಾಟ ನಡೆಸಲಿದೆ. 2ನೇ ಪಂದ್ಯ ಮಾರ್ಚ್ 25ರಂದು ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯಲಿದೆ. ಮೂರನೇ ಪಂದ್ಯ ಮಾರ್ಚ್ 29 ರಂದು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆಯಲಿದೆ. ನಾಲ್ಕನೇ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ನಡೆಯಲಿದೆ. 5ನೇ ಪಂದ್ಯ ಏಪ್ರಿಲ್ 6 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯಲಿದೆ. ಉದ್ಘಾಟನಾ ಪಂದ್ಯ ರಾತ್ರಿ 8 ಕ್ಕೆ ನಡೆಯಲಿದ್ದು, ಇನ್ನುಳಿದ ಪಂದ್ಯಗಳು ಸಂಜೆ 7.30ಕ್ಕೆ ಆರಂಭವಾಗಲಿವೆ.