ಕನ್ನಡ…! ನಮ್ಮ ಅವ್ವ, ನಮ್ಮ ಜೀವ, ನಮ್ಮ ದೈವ..
ಈ ದೇಹದ ರಕ್ತದ ಕಣ ಕಣವೂ ಕನ್ನಡ ಕನ್ನಡ
ಕನ್ನಡ..! ಇದು ಕೇವಲ ಅಕ್ಷರವಲ್ಲ.. ನಮ್ಮ ಜೀವಂತಿಕೆಯ ಉಸಿರು.. ನಾಡು, ನುಡಿ,ಜನಾಂಗ, ಆಸ್ಮಿತತೆ ಮತ್ತು ಸಂಸ್ಕøತಿಯ ಪ್ರತಿಬಿಂಬ…
ಇಂದು ನಮ್ಮ ಅಮ್ಮನ ಉತ್ಸವ.. ಕನ್ನಡ ತಾಯಿಯ ಉತ್ಸವ.. ಕನ್ನಡ ಕುಲದೇವತೆಯ ಉತ್ಸವ.. ಕನ್ನಡ ರಾಜ್ಯೋತ್ಸವ.
ಕೊರೊನಾ ಸಂಕಷ್ಟದ ನಡುವೆ ನಾಡಿನ ಎಲ್ಲೆಡೆ ಜನರು ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಬಾರಿಸು ಕನ್ನಡದ ಡಿಂಡಿಂವ ಓ ಕರ್ನಾಟಕ ಹೃದಯ ಶಿವ ಎನ್ನುತ್ತಿದ್ದಾರೆ.
ಈ ಸಂಭ್ರಮವನ್ನು ಡಬಲ್ ಮಾಡಲು ನಮ್ಮ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕನ್ನಡದಲ್ಲಿಯೇ ಕನ್ನಡಿಗರಿಗೆ ಶುಭ ಕೋರಿದೆ..
ಹೌದು..! ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ, ಸೇರಿದಂತೆ ಕನ್ನಡಿಗ ದೇವದತ್ ಪಡಿಕ್ಕಲ್, ಎಬಿಡಿ ವಿಲಿಯರ್ಸ್, ಡೆಲ್ ಸ್ಟೇಯ್ನ್, ಶಾಬಾಜ್ ಅಹ್ಮದ್, ಉಮೇಶ್ ಯಾದವ್, ಶಿವಂ ದುಬೆ,
ಯಜುವೇಂದ್ರ ಚಹಲ್, ಮಹಮದ್ ಸಿರಾಜ್, ಪವನ್ ದೇಶಪಾಂಡೆ ಕನ್ನಡ ಭಾಷೆಯಲ್ಲೇ ಶುಭಕೋರಿದ್ದಾರೆ. ಆ ಮೂಲಕ ಆರ್ ಸಿಬಿ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಿದೆ.
ಈ ವಿಶೇಷ ವಿಡಿಯೋವನ್ನು ಆರ್ ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾವಿರಾರು ಮಂದಿ ಕನ್ನಡಿಗರು ಮತ್ತು ಆರ್ ಸಿಬಿ ಅಭಿಮಾನಿಗಳು ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ.
ಆರ್ ಸಿಬಿ ಆಟಗಾರರ ಈ ವಿಶೇಷ ವಿಡಿಯೋ ಕನ್ನಡಿಗರ ಸಂಭ್ರಮವನ್ನು ಡಬಲ್ ಮಾಡಿದೆ. ಎಲ್ಲರ ವಾಟ್ಸಾಪ್, ಫೇಸ್ ಬುಕ್ ಸ್ಟೇಟಸ್ ಗಳಲ್ಲಿ ಈ ವಿಡಿಯೋ ರಾರಾಜಿಸುತ್ತಿದೆ. ಇಂದು ಸೋಶಿಯಲ್ ಮೀಡಿಯಾ ಕನ್ನಡಮಯವಾಗಿದೆ.
ಕೊನೆಯದಾಗಿ ಮಾತು.. ನಮ್ಮೆಲ್ಲರ ಹೆಸರಾಗಲಿ ಕನ್ನಡ.. ನಮ್ಮ ಉಸಿರಾಗಲಿ ಕನ್ನಡ.. ಎಲ್ಲಾ ಕನ್ನಡದ ಅಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.