ಮ್ಯಾಕ್ಸಿ ಅಲ್ಲ.. ಫಾಫ್ ಅಲ್ಲ.. ದಿನೇಶ್ RCB ನಾಯಕ..!!!!
IPL-2022 ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬಿಸಿಸಿಐ ಈ ವರ್ಷದ ಐಪಿಎಲ್ ವೇಳಾಪಟ್ಟಿಯನ್ನು ಭಾನುವಾರ ಪ್ರಕಟಿಸಿದೆ.
ಈ ಋತುವಿನಲ್ಲಿ ಇನ್ನೂ ಎರಡು ಹೊಸ ತಂಡಗಳು ಸೇರ್ಪಡೆಯಾಗಿರುವುದರಿಂದ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ಇನ್ನಷ್ಟು ರಸಭರಿತವಾಗಲಿದೆ.
ಈ ಬಾರಿಯ ಟೂರ್ನಿಗಾಗಿ ಈಗಾಗಲೇ ಎಲ್ಲಾ ತಂಡಗಳು ಸಿದ್ಧವಾಗಿವೆ.
ಆದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಾತ್ರ ಇನ್ನೂ ತಂಡದ ನಾಯಕನನ್ನೇ ಘೋಷಣೆ ಮಾಡಿಲ್ಲ.
ಆರ್ ಸಿಬಿ ತಂಡದ ನಾಯಕ ಯಾರು ಅನ್ನೋದು ಸದ್ಯ ಮಿಲಿಯನ್ ಡಾಲರ್ ಗಳ ಪ್ರಶ್ನೆಯಾಗಿದೆ.
ನಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ನಾಯಕತ್ವದ ರೇಸ್ನಲ್ಲಿ ಆಸೀಸ್ ಆಲ್ ರೌಂಡರ್ ಮ್ಯಾಕ್ಸ್ವೆಲ್ ಮತ್ತು ಸೌತ್ ಆಫ್ರಿಕಾದ ಸ್ಟಾರ್ ಡು ಪ್ಲೆಸಿಸ್ ಹೆಸರು ಕೇಳಿಬರುತ್ತಿದೆ.
ಆದ್ರೆ ಮ್ಯಾಕ್ಸ್ವೆಲ್ ತನ್ನ ಮದುವೆಯ ಕಾರಣದಿಂದ ಐಪಿಎಲ್ನ ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಡು ಪ್ಲೆಸಿಸ್ ಗೆ ಆರ್ ಸಿಬಿ ನಾಯಕನ ಪಟ್ಟ ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿತ್ತು.
ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ದಿನೇಶ್ ಕಾರ್ತಿಕ್ ಹೆಸರು ಮುನ್ನೆಲೆಗೆ ಬಂದಿದೆ.
ಕಾರ್ತಿಕ್ ಅವರು ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಸೇವೆ ಸಲ್ಲಿಸಿದ್ದರಿಂದ ಆರ್ಸಿಬಿ ಫ್ರಾಂಚೈಸಿ ಕಾರ್ತಿಕ್ ಕಡೆಗೆ ಒಲವು ತೋರುತ್ತಿದೆಯಂತೆ.
ದಿನೇಶ್ ಕಾರ್ತಿಕ್ ಐಪಿಎಲ್ ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಆಟಗಾರನಾಗಿದ್ದಾರೆ. ಜೊತೆಗೆ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ಮ್ಯಾಕ್ಸ್ ವೆಲ್, ಡುಪ್ಲಸೀಸ್ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ.
ಮುಖ್ಯವಾಗಿ ಟೀಂ ಇಂಡಿಯಾದ ಆಟಗಾರನಾಗಿರುವುದರಿಂದ ದಿನೇಶ್ ಕಾರ್ತಿಕ್ ಗೆ ನಾಯಕತ್ವ ನೀಡಲು ಫ್ರಾಂಚೈಸಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಐಪಿಎಲ್-2022 ಮೆಗಾ ಹರಾಜಿನಲ್ಲಿ, ಆರ್ಸಿಬಿ ಕಾರ್ತಿಕ್ಗೆ ರೂ. 5.5 ಕೋಟಿಗೆ ಖರೀದಿಸಿದ್ದಾರೆ.
rcb-new-captain-dinesh-kartik