RCB ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು ಇವರೇ..!!
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಕೆಲವು ತಂಡಗಳು ಒಮ್ಮೆಯೂ ಪ್ರಶಸ್ತಿಯನ್ನು ಗೆದ್ದಿಲ್ಲ. ಈ ಪೈಕಿ ಕಳೆದ 15 ವರ್ಷಗಳಿಂದ ಐಪಿಎಲ್ ಪ್ರಶಸ್ತಿಗಾಗಿ ಕಾಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಒಂದು..
ಪ್ರತಿ ಬಾರಿಯೂ ಫ್ಯಾನ್ಸ್ ಕಪ್ ನಮ್ದೇ ಕಪ್ ನಮ್ದೇ ಈ ಸಲ ಕಪ್ ನಮ್ದೇ ಅಂತ ಅದೆಷ್ಟೇ ಸ್ಟೇಟಸ್ ಗಳನ್ನ ಹಾಕಲಿ , ಟ್ರೆಂಡ್ ಮಾಡಲಿ RCB ಕಪ್ ಗೆದಿಲ್ಲ ,,, ಆದ್ರೂ RCB ಕ್ರೇಜ್ ಕಡಿಮೆಯಾಗಿಲ್ಲ , ಫ್ಯಾನ್ಸ್ ಸಂಖ್ಯೆ ಕುಸಿದಿಲ್ಲ , ಈ ಸಲ ಕಪ್ ನಮ್ದೇ ಅನ್ನೋ ಟ್ರೆಂಡ್ ಮತ್ತೆ ಮತ್ತೆ ಶುರುವಾಗದೇ ಇರಲ್ಲ.. ಆ ಮಟ್ಟಕ್ಕಿದೆ RCB ಕ್ರೇಜ್..
ಈ RCB ಅನ್ನೋದೇ ಒಂದು ಕ್ರೇಜ್… RCB ಕಪ್ ಗೆದ್ದಿಲ್ಲ ಅಂದ್ರೂ ಅಭಿಮಾನಿಗಳು ಅಭಿಮಾನ ಬಿಡಲ್ಲ.. ಇದಕ್ಕೆ ಅನ್ಸುತ್ತೆ ವಿಶ್ವದ ಅತ್ಯಂತ ಫೇಮಸ್ ಫ್ರಾಂಚೈಸಿಗಳು ಅಂತ ಬಂದ್ರೆ ಅಲ್ಲಿ RCB ಗೇನೇ ಅಗ್ರಮಾನ ಸ್ಥಾನ .. ಹಾಲಿ ಚಾಂಪಿಯನ್ ಯಾರೇ ಇರಲಿ RCB ಫ್ಯಾನ್ಸ್ ಕೂಗೇ ಜೋರಿರುತ್ತೆ.. ಬಹುಶಃ RCB ಅಂತಹ ಕ್ರೇಜಿ ಫ್ಯಾಂಡಮ್ ಮತ್ತೊಂದಿಲ್ಲ..
RCB ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮತ್ಯಾರೂ ಅಲ್ಲ ಅದು ರನ್ ಮಷಿನ್ ವಿರಾಟ್ ಕೊಹ್ಲಿ..
ವಿರಾಟ್ ಕೊಹ್ಲಿ – 223 ಪಂದ್ಯಗಳು, 6624 ರನ್
ಎಬಿ ಡಿವಿಲಿಯರ್ಸ್ – 156 ಪಂದ್ಯಗಳು, 4491 ರನ್
ಕ್ರಿಸ್ ಗೇಲ್ – 85 ಪಂದ್ಯಗಳು, 3163 ರನ್
ಜಾಕ್ವೆಸ್ ಕಾಲಿಸ್ – 42 ಪಂದ್ಯಗಳು, 1132 ರನ್
ರಾಹುಲ್ ದ್ರಾವಿಡ್ – 43 ಪಂದ್ಯಗಳು, 898 ರನ್
These are the highest run scorers for RCB..!!