RCB Twitter : ಇಂದು ಮುಂಜಾನೆ RCB ತಂಡದ ಟ್ವೀಟರ್ ಖಾತೆ ಹ್ಯಾಕ್…
IPL ಪ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಟ್ವೀಟರ್ ಖಾತೆಯನ್ನ ಹ್ಯಾಕ್ ಮಾಡಲಾಗಿದೆ. ಹ್ಯಾಕ್ ಮಾಡಲಾದ ನಂತರ ಟ್ವೀಟರ್ ಹ್ಯಾಂಡಲ್ ನೇಮ್ ಅನ್ನ ‘ಬೋರ್ಡ್ ಏಪ್ ಯಾಚ್ ಕ್ಲಬ್’ ಎಂದು ರೀ ನೇಮ್ ಮಾಡಲಾಗಿದೆ. ನಾನ್-ಫಂಗಬಲ್ ಟೋಕನ್ (ಎನ್‌ಎಫ್‌ಟಿ) ಸರಣಿಗೆ ಸಂಬಂಧಿಸಿದ ಟ್ವೀಟ್‌ಗಳನ್ನ ಪೋಸ್ಟ್ ಮಾಡಲಾಗಿದೆ. ಹ್ಯಾಕ್ ಮಾಡಲಾದ ನಂತರ RCB ಇನ್ನೂ ಖಾತೆಯನ್ನ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ.
21 ಜನವರಿ 2023 ರಂದು ಮುಂಜಾನೆ 4 ಗಂಟೆಯ ಸುಮಾರಿಗೆ RCB ಟ್ವಿಟರ್ ಹ್ಯಾಂಡಲ್ ಹ್ಯಾಕ್ ಮಾಡಲಾಗಿದೆ. ಸಧ್ಯಕ್ಕೆ ನಾವು ಟ್ವಿಟರ್ ಖಾತೆಯ ಪ್ರವೇಶವನ್ನ ಕಡಿದುಕೊಂಡಿದ್ದೇವೆ. ಟ್ವಿಟರ್ ಶಿಫಾರಸು ಮಾಡಿದ ಎಲ್ಲಾ ಭದ್ರತಾ ಕ್ರಮಗಳನ್ನು ತೆಗೆದುಕೊಂಡರೂ ಈ ದುರದೃಷ್ಟಕರ ಘಟನೆಯು ನಮ್ಮ ನಿಯಂತ್ರಣವನ್ನು ಮೀರಿ ಸಂಭವಿಸಿದೆ.
ಇಂದು ನಮ್ಮ ಟ್ವೀಟರ್ ಹ್ಯಾಂಡಲ್‌ನಿಂದ ಸಂಭವಿಸಿದ ಟ್ವೀಟ್‌ಗಳು/ರೀಟ್ವೀಟ್‌ಗಳು ಮತ್ತು ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ಇದನ್ನು ಆದಷ್ಟು ಬೇಗ ಪರಿಹರಿಸಲು ನಾವು ಟ್ವಿಟರ್ ಬೆಂಬಲ ತಂಡದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಶೀಘ್ರದಲ್ಲೇ ಹಿಂತಿರುಗುತ್ತೇವೆ” ಎಂದು RCB ತನ್ನ ಅಧಿಕೃತ Instagram ಖಾತೆಯಲ್ಲಿ ಪೋಸ್ಟ್ ಮಾಡಿದೆ.
2009 ರಲ್ಲಿ ಕ್ರಿಯೇಟ್ ಮಾಡಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಟ್ವಿಟರ್ ಖಾತೆಯು 6.4 ಮಿಲಿಯನ್ ಅಕೌಂಟ್ ಗಳು ಫಾಲೋ ಮಾಡುತ್ತಿವೆ. ದುರದೃಷ್ಟವಶಾತ್, ಖಾತೆಯನ್ನು ಹ್ಯಾಕ್ ಮಾಡಿರುವುದು ಇದೇ ಮೊದಲಲ್ಲ. ಸೆಪ್ಟೆಂಬರ್ 2021 ರಲ್ಲಿ ಹ್ಯಾಕ್ ಮಾಡಲಾಗಿತ್ತು. ಆದರೆ ಫ್ರ್ಯಾಂಚೈಸ್ ಅದನ್ನು ಮರುಸ್ಥಾಪಿಸಲು ತ್ವರಿತವಾಗಿ ಕ್ರಮ ಕೈಗೊಂಡಿತು.
RCB Twitter : RCB team’s twitter account hacked early today…








