ಅಬುಧಾಮಿಯಲ್ಲಿ ರೆಡ್ ಬುಲ್ಸ್ – ಆರೆಂಜ್ ಆರ್ಮಿ ಮೆಗಾ ದಂಗಾಲ್
ಅಬುಧಾಬಿಯಲ್ಲಿ ಇಂದು ಮೆಗಾ ದಂಗಾಲ್ ನಡೆಯಲಿದೆ. ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಲಿವೆ.
ಸತತ ನಾಲ್ಕು ಮ್ಯಾಚ್ ಗಳನ್ನು ಸೋತರೂ ಪ್ಲೇ ಆಪ್ ಎಂಟ್ರಿ ಪಡೆದಿರುವ ಆರ್ ಸಿಬಿ ಇಂದಿನ ಪಂದ್ಯದಲ್ಲಿ ಗೆಲ್ಲುವ ಒತ್ತಡದಲ್ಲಿದ್ದರೇ ಬ್ಯಾಕ್ ಟು ಬ್ಯಾಕ್ ಮ್ಯಾಚ್ ಗಳನ್ನು ಗೆದ್ದು ಹೈದರಾಬಾದ್ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ಇನ್ನು ಇಂದಿನ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರ ಬೀಳಲಿದೆ. ಹೀಗಾಗಿ ಇಂದಿನ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರಲಿದೆ.
ಬದಲಾಗಬೇಕಿದೆ ಆರ್ ಸಿಬಿ : ತಂಡದಲ್ಲಿಲ್ಲ ಜೋಷ್..!
ಟೂರ್ನಿಯ ಆರಂಭದಲ್ಲಿ ರೆಡ್ ಹಾರ್ಸ್ ಫಾರ್ಮ್ ನಲ್ಲಿ ಮುನ್ನುಗಿದ್ದ ಆರ್ ಸಿಬಿ ನಿರ್ಣಯಕ ಹಂತದಲ್ಲಿ ಜೋಷ್ ಕಳೆದುಕೊಳ್ತು. ಪರಿಣಾಮ ಬ್ಯಾಕ್ ಟು ಬ್ಯಾಕ್ 4 ಮ್ಯಾಚ್ ಗಳನ್ನು ಸೋಲಬೇಕಾಯಿತು.
ಸದ್ಯ ಪ್ಲೇ ಆಪ್ ತಲುಪಿರುವ ಆರ್ ಸಿಬಿ ತನ್ನ ಆಟವನ್ನು ಬದಲಿಸಬೇಕಿದೆ. ಮುಖ್ಯವಾಗಿ ನಾಯಕ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಆಟವಾಡಬೇಕಿದೆ. ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಗಳು ಸ್ಪೋಟಕ ಇನ್ನಿಂಗ್ಸ್ ಕಟ್ಟಬೇಕಿದೆ.
ಮಿಡಲ್ ಆರ್ಡರ್ ನಲ್ಲಿ ವಿರಾಟ್, ಎಬಿಡಿ ಅಬ್ಬರಿಸಲೇಬೇಕಿದೆ. ಕೊನೆಯಲ್ಲಿ ಶಿವಂ ದುಬೆ, ಸುಂದರ್ ಸಿಕ್ಸರ್ ಗಳ ಸುರಿಮಳೆ ಸುರಿಸಬೇಕಿದೆ. ಇದನ್ನು ಬಿಟ್ಟರೇ ತಂಡಕ್ಕೆ ಇನ್ನೂ ಒಬ್ಬ ಬ್ಯಾಟ್ಸ್ ಮೆನ್ ನ ಅವಶ್ಯಕತೆ ಇದೆ.
ಐಪಿಎಲ್ 2020- ಫೈನಲ್ ಗೆ ಎಂಟ್ರಿಯಾದ ಮುಂಬೈ ಇಂಡಿಯನ್ಸ್.. ಬೂಮ್ರಾ ದಾಳಿಗೆ ಡೆಲ್ಲಿ ತತ್ತರ ..!
ಬೆಂಗಳೂರು ತಂಡ ಬೌಲರ್ ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಸೂಕ್ತ ಸಂದರ್ಭದಲ್ಲಿ ವಿಕೆಟ್ ಪಡೆಯುತ್ತಿಲ್ಲ. ಚಹಾಲ್ ತಮ್ಮ ವಿಕೆಟ್ ಅಭಿಯಾನವನ್ನು ಮುಂದುವರೆಸಿದ್ರೆ, ವಾಷಿಂಗ್ಟನ್ ಸುಂದರ್ ರನ್ ಗಳಿಕೆಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಮೊಹಮ್ಮದ್ ಸಿರಾಜ್ ಮತ್ತು ಕ್ರಿಸ್ ಮೋರಿಸ್ ಉತ್ತಮವಾಗಿ ಸ್ಪೆಲ್ ಮಾಡುತ್ತಿದ್ದಾರೆ. ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದ ಸೈನಿ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಜೊತೆಗೆ ಇಂದಿನ ಪಂದ್ಯದಲ್ಲಿ ಮೋರಿಸ್ ಕಣಕ್ಕಿಳಿಯುವುದು ಅನುಮಾನವಾಗಿದೆ.
ಇತ್ತ ಹೈದರಾಬಾದ್ ವಿಚಾರಕ್ಕೆ ಬಂದ್ರೆ ಟೂನಿಯ ಆರಂಭದಲ್ಲಿ ಮಂಕಾಗಿದ್ದ ಹೈದರಾಬಾದ್, ಪಂಜಾಬ್ ವಿರುದ್ಧದ ಸೋಲಿನ ಬಳಿಕ ಭರ್ಜರಿ ಕಮ್ ಬ್ಯಾಕ್ ಮಾಡಿದೆ. ಅದರಲ್ಲೂ ನಾಯಕ ಡೇವಿಡ್ ವಾರ್ನರ್ ಫಾರ್ಮ್ ಗೆ ಮರಳಿರುವುದು ತಂಡದ ಬಲ ಹೆಚ್ಚಿಸಿದೆ.
ಇನ್ನು ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ, ಮನೀಶ್ ಪಾಂಡೆ, ವಿಲಿಯಮ್ ಸನ್ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ.
ಇನ್ನು ಬೌಲಿಂಗ್ ನಲ್ಲೂ ಹೈದರಾಬಾದ್ ಬೌಲಿಂಗ್ ಶಕ್ತಿಯುತವಾಗಿದೆ. ಸಂದೀಪ್ ಶರ್ಮಾ, ನಟರಾಜನ್, ರಶೀದ್ ಖಾನ್ ಹಾಗೂ ಜೇಸನ್ ಹೋಲ್ಡರ್ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದು, ಇಂದಿನ ಪಂದ್ಯದಲ್ಲೂ ಮಿಂಚುವ ವಿಶ್ವಾಸ ಹೊಂದಿದ್ದಾರೆ.
ತಂಡಗಳ ಬಲಾಬಲ ನೋಡಿದ್ರೆ ಇಂದಿನ ಪಂದ್ಯದಲ್ಲಿ ಹೈದರಾಬಾದ್ ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ, 3 ವರ್ಷದ ಬಳಿಕ ಪ್ಲೇ ಅಪ್ ಗೆ ಬಂದಿರುವ ಆರ್ ಸಿಬಿ ಸುಲಭವಾಗಿ ಮ್ಯಾಚ್ ಬಿಟ್ಟುಕೊಡಲ್ಲ ಅನ್ನೋದಂತೂ ನಿಜ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel