RCB | ವಿರಾಟ್ ಕಿಂಗ್ ಅಲ್ಲ.. ಕ್ರಿಕೆಟ್ ನ CEO
ಯಸ್…!! ಕಿಂಗ್ ಕೊಹ್ಲಿ ಇನ್ ಬ್ಯಾಕ್.. That is Virat. ಇದು ಪ್ರಸ್ತುತ ಕ್ರಿಕೆಟ್ ಜಗತ್ತಿನ ಹರ್ಷೋದ್ಘಾರ.
ವಿಶ್ವ ಕ್ರಿಕೆಟ್ ನ ಕಿಂಗ್ಸ್ ವಿರಾಟ್ ಕೊಹ್ಲಿಯ ಕಥೆ ಮುಗೀತು.. ಅವರು ರೆಸ್ಟ್ ಪಡೆದುಕೊಳ್ಳಬೇಕು.. ಅನ್ನೋ ಮಾತುಗಳಿಗೆ ವಿರಾಟ್ ಕೊಹ್ಲಿ ಬ್ಯಾಟ್ ನಿಂದಲೇ ಉತ್ತರ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತಮ್ಮನ್ನು ಟ್ರೋಲ್ ಮಾಡುತ್ತಿದ್ದವರಿಗೆ.. ಮೈಕ್ ಮುಂದೆ ಯದ್ವಾತದ್ವಾ ಟೀಕೆ ಮಾಡುತ್ತಿದ್ದವರಿಗೆ ವಿರಾಟ್ ಕೊಹ್ಲಿ ಮುಟ್ಟಿ ನೀಡಿಕೊಳ್ಳುವಂತಹ ತಿರುಗೇಟು ನೀಡಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧ ಅಬ್ಬರಿಸುವ ಮೂಲಕ ವಿರಾಟ್ ಕೊಹ್ಲಿ ಐ ಯಾಮ್ ಬ್ಯಾಕ್ ಎಂದು ಸಂದೇಶವನ್ನು ರವಾನಿಸಿದ್ದಾರೆ.
ಹೌದು…!! ಈ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಡ್ ಫಾರ್ಮ್ ನಲ್ಲಿದ್ದರು. ಗುಜರಾತ್ ಪಂದ್ಯಕ್ಕೂ ಮುನ್ನಾ ವಿರಾಟ್ 9 ಪಂದ್ಯಗಳಲ್ಲಿ ಕೇವಲ 128 ರನ್ ಗಳಿಸಿದ್ದರು.
ಹೀಗಾಗಿ ಸಾಕಷ್ಟು ಮಂದಿ ವಿರಾಟ್ ಕೊಹ್ಲಿ ಬಗ್ಗೆ ಟೀಕೆ ಮಾಡಿದ್ದರು. ಟೀಂ ಇಂಡಿಯಾದ ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ಕೂಡ ವಿರಾಟ್ ಕೊಹ್ಲಿ ಐಪಿಎಲ್ ನಿಂದ ರೆಸ್ಟ್ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದರು.
ಅಲ್ಲದೇ ವಿರಾಟ್ ಕೊಹ್ಲಿಯನ್ನು ಆರ್ ಸಿಬಿ ಪ್ಲೇಯಿಂಗ್ ಇಲೆವೆಲ್ ನಿಂದ ಕೈಬಿಡಬೇಕು ಎಂದು ಪುಕ್ಕಟ್ಟೆ ಸಲಹೆ ನೀಡಿದ್ದರು.

ಸೋಶಿಯಲ್ ಮೀಡಿಯಾದಲ್ಲಂತೂ ಬಾಯಿಗೆ ಬಂದಂತೆ, ಲಂಗು ಲಗಾಮು ಇಲ್ಲದಂತೆ, ಬಾಯಿಗೆ ಬಂದ ಹಾಗೆ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದರು.
ಈ ಎಲ್ಲಾ ಟೀಕೆ ಟಿಪ್ಪಣಿಗಳಿಗೆ, ಪುಕ್ಕಟ್ಟೆ ಸಲಹೆ ನೀಡುತ್ತಿದ್ದ ಸೋಶಿಯಲ್ ಮೀಡಿಯಾ ಕ್ರಿಕೆಟ್ ಪಂಡಿತರಿಗೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಉತ್ತರ ನೀಡಿದ್ದಾರೆ.
ಗುಜರಾತ್ ವಿರುದ್ಧ 53 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 58 ರನ್ ಗಳಿಸಿದರು. ಇದರಲ್ಲಿ ಆಕರ್ಷಕ ಆರು ಬೌಂಡರಿ, ಮನಮೋಹಕ ಒಂದು ಸಿಕ್ಸರ್ ಇದೆ. ಕೊಹ್ಲಿ 109.43ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದರು.
ಇನ್ನು ಹಿರಿಯ ಕ್ರಿಕೆಟಿಗರು ಕೂಡ ವಿರಾಟ್ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿರಾಟ್ ಅರ್ಧಶತಕ ಬಾರಿಸುತ್ತಿದ್ದಂತೆ ಟೀಂ ಇಂಡಿಯಾದ ಮಾಜಿ ಆಟಗಾರ ವಾಸೀಂ ಜಾಫರ್ ದಿ ರಿಟರ್ನ್ ಆಫ್ ದಿ ಕಿಂಗ್ ಎಂದು ಟ್ವೀಟ್ ಮಾಡಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿ ಫಾರ್ಮ್ ಗೆ ಬರುತ್ತಿದ್ದಂತೆ ಸೋಶಿಯಲ್ ಮೀಡಿಯಾಗೆ ಬೆಂಕಿ ಬಿದ್ದಿದೆ. ವಾಟ್ಸಾಪ್ ಗಳನ್ನು ಕಿಂಗ್ಸ್ ಸ್ಟೇಟಸ್ ಗಳು ರಾರಾಜಿಸುತ್ತಿವೆ.
ಟ್ವಿಟ್ಟರ್ ನಲ್ಲಿ ವಿರಾಟ್ ಹೆಸರು ಟ್ರೆಂಡ್ ಆಗುತ್ತಿದೆ. ಫೇಸ್ ಬುಕ್ ನಲ್ಲಿ ಕೊಹ್ಲಿ ಪೋಸ್ಟ್ ಗಳು ಪ್ರಜ್ವಲಿಸುತ್ತಿವೆ.
ಒಟ್ಟಾರೆ ವಿರಾಟ್ ಕೊಹ್ಲಿ ಫಾರ್ಮ್ ಗೆ ಬರುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ವಿರಾಟ್ ಕ್ರಿಕೆಟ್ ನ ಕಿಂಗ್ ಅಲ್ಲ. ಕ್ರಿಕೆಟ್ ನ ಸಿಇಓ ಎನ್ನುತ್ತಾ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ.
rcb-Virat kohli CEO OF Cricket IPL 2022








