RCB vs LSG | ರಾಯಲ್ ಚಾಲೆಂಜರ್ಸ್ Probable XIs
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಈ ಬಾರಿಯ ಐಪಿಎಲ್ ನಲ್ಲಿ ಎರಡೂ ತಂಡಗಳು ಆರು ಪಂದ್ಯಗಳನ್ನಾಡಿವೆ. ಇದರಲ್ಲಿ ತಲಾ ನಾಲ್ಕು ಪಂದ್ಯಗಳನ್ನು ಎರಡೂ ತಂಡಗಳು ಗೆದ್ದಿವೆ. ತಲಾ 2 ಪಂದ್ಯಗಳಲ್ಲಿ ಉಭಯ ತಂಡಗಳು ಸೋಲು ಕಂಡಿವೆ.
ಫಾಫ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಸಾಲಿಡ್ ಆಗಿದೆ. ಬ್ಯಾಟಿಂಗ್ ನಲ್ಲಿ ಕೊಂಚ ಸಮಸ್ಯೆಯಿದ್ದರೂ ಸಾಂಘೀಕ ಪ್ರದರ್ಶನ ಬೆಂಗಳೂರು ತಂಡದ ಆಸ್ತಿಯಾಗಿದೆ.
ಬ್ಯಾಟಿಂಗ್ ನಲ್ಲಿ ಮ್ಯಾಕ್ಸ್ ವೆಲ್, ದಿನೇಶ್ ಕಾರ್ತಿಕ್, ಶಹಬ್ಬಾಸ್ ತಂಡದ ಬೆನ್ನೆಲುಬಾಗಿದ್ದಾರೆ. ಬೌಲಿಂಗ್ ನಲ್ಲಿ ಹೆಜಲ್ ವುಡ್, ಹರ್ಷಲ್ ಪಟೇಲ್, ಸಿರಾಜ್, ಹಸರಂಗ ಎದುರಾಗಳ ಬೇಟೆಯಾಡುತ್ತಾರೆ.
ಆರ್ ಸಿಬಿಯ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ ಅನ್ನೋದ್ರರಲ್ಲಿ ಯಾವುದೇ ಅನುಮಾನ ಇಲ್ಲ. ಆದ್ರೆ ತಂಡಕ್ಕೆ ಹಿನ್ನಡೆಯಾಗುತ್ತಿರುವು ಟಾಪ್ ಆರ್ಡರ್ ನಲ್ಲಿ. ಮುಖ್ಯವಾಗಿ ತಂಡಕ್ಕೆ ಉತ್ತಮವಾದ ಆರಂಭ ಸಿಗುತ್ತಿಲ್ಲ.
ಫಾಫ್ ಮೊದಲ ಪಂದ್ಯದಲ್ಲಿ ಮಿಂಚಿದ್ದು ಬಿಟ್ಟರೇ ಉಳಿದ ಪಂದ್ಯಗಳಲ್ಲಿ ಕ್ರೀಸ್ ನಲ್ಲಿ ನಿಲ್ಲುತ್ತಿಲ್ಲ.
ಮತ್ತೊಬ್ಬ ಆರಂಭಿಕ ಅನೂಜ್ ರಾವತ್ ಮುಂಬೈ ವಿರುದ್ಧ ಉತ್ತಮ ಆಟವಾಡಿದ್ದು ಬಿಟ್ಟರೇ ಉಳಿದ ಪಂದ್ಯಗಳಲ್ಲಿ ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ.
ಹೀಗಾಗಿ ಲಕ್ನೋ ವಿರುದ್ದ ಪಂದ್ಯದಲ್ಲಿ ಬದಲಾವಣೆ ನಿರೀಕ್ಷಿಸಬಹುದಾಗಿದೆ.
ಇಲ್ಲದೇ ವಿರಾಟ್ ಕೊಹ್ಲಿ ಅವರ ಅಸ್ಥಿರ ಪ್ರದರ್ಶನ ಕೂಡ ತಂಡಕ್ಕೆ ಮೈನಸ್ ಪಾಯಿಂಟ್ ಆಗುತ್ತಿದೆ.
ವಿರಾಟ್ ಈ ಹಿಂದಿನ ಟಚ್ ಕಳೆದುಕೊಂಡಿರುವುದು ತಂಡದ ಮೇಲೆ ಪರಿಣಾಮ ಬೀರುತ್ತಿದೆ.
ಈ ಸಮಸ್ಯೆಗೆ ಪರಿಹಾರ ಸಿಕ್ಕರೇ ಆರ್ ಸಿಬಿ ಮತ್ತಷ್ಟು ಬಲಿಷ್ಟವಾಗಿರಲಿದೆ. rcb-vs-lsg-royal-challengers-probable-xis
Royal-challengers-probable-xis
ಫಾಫ್ ಡು ಪ್ಲೆಸಸ್ (ನಾಯಕ)
ವಿರಾಟ್ ಕೊಹ್ಲಿ
ಅನುಜ್ ರಾವತ್
ಗ್ಲೇನ್ ಮ್ಯಾಕ್ಸ್ ವೆಲ್
ಸುಯಾಶ್ ಪ್ರಭುದೇಸಾಯಿ
ಶಹಬಾಝ್ ಅಹಮ್ಮದ್
ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್ )
ಹರ್ಷೆಲ್ ಪಟೇಲ್
ವನಿಂದು ಹಸರಂಗ
ಜೋಶ್ ಹ್ಯಾಝೆಲ್ ವುಡ್
ಮಹಮ್ಮದ್ ಸೀರಾಜ್