RCB vs PBKS Match | ಚಾಲೆಂಜರ್ಸ್ ಗೆ ಪಂಜಾಬ್ ಕಿಂಗ್ಸ್ ಸವಾಲು

1 min read
rcb-vs-pbks-match-head-to-head-records saaksha tv

rcb-vs-pbks-match-head-to-head-records saaksha tv

RCB vs PBKS Match | ಚಾಲೆಂಜರ್ಸ್ ಗೆ ಪಂಜಾಬ್ ಕಿಂಗ್ಸ್ ಸವಾಲು

15ನೇ ಸೀಸನ್ ನ ಇಂಡಿಯನ್ ಪ್ರಿಮಿಯರ್ ಲೀಗ್  ನ 60ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದೆ. ಈ ಎರಡೂ ತಂಡಗಳು ಈ ಸೀಸನ್ ನಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಮೊದಲ ಬಾರಿ ಎದುರುಬದುರಾದಾಗ ಪಂಜಾಬ್ ಕಿಂಗ್ಸ್ ತಂಡ ಜಯ ಸಾಧಿಸಿತ್ತು.

ಫಾಫ್ ಡುಪ್ಲಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಸೀಸನ್ ನಲ್ಲಿ 12 ಪಂದ್ಯಗಳನ್ನಾಡಿದೆ. ಈ ಪೈಕಿ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಐದು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ 14 ಅಂಕಗಳೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕನೇ ಸ್ಥಾನದಲ್ಲಿದೆ.

ಇತ್ತ ಮಯಾಂಕ್ ಅಗರ್ ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡ 15ನೇ ಸೀಸನ್ ನಲ್ಲಿ 11 ಪಂದ್ಯಗಳನ್ನಾಡಿದೆ, ಇದರಲ್ಲಿ ಐದು ಪಂದ್ಯಗಳನ್ನು  ಪಂಜಾಬ್ ತಂಡ ಗೆದ್ದುಕೊಂಡಿದ್ದರೇ ಆರು ಪಂದ್ಯಗಳಲ್ಲಿ ಸೋಲು ಕಂಡಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ಪಂಜಾಬ್ ತಂಡ ಎಂಟನೇ ಸ್ಥಾನದಲ್ಲಿದೆ.

rcb-vs-pbks-match-prediction saaksha tv
rcb-vs-pbks-match-prediction saaksha tv

ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೆಣಸಾಟ ನಡೆಸಿತ್ತು. ಇದರಲ್ಲಿ ಆರ್ ಸಿಬಿ ತಂಡ 67 ರನ್ ಗಳಿಂದ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಫಾಫ್ ಡುಪ್ಲಸಿಸ್ 73 ರನ್, ಪಟಿದಾರ್ 48 ರನ್ ಗಳಿಸಿದ್ದರು. ಅಲ್ಲದೇ ವನಿಂದು ಹಸರಂಗ ಐದು ವಿಕೆಟ್ ಪಡೆದು ಆರ್ ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಗೆಲುವಿನೊಂದಿಗೆ ಆರ್ ಸಿಬಿ ಪಾಳಯದಲ್ಲಿ ಆತ್ಮವಿಶ್ವಾಸ ಡಬಲ್ ಆಗಿದ್ದು, ಇಂದಿನ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸದಲ್ಲಿದೆ.

ಮತ್ತೊಂದು ಕಡೆ ಪಂಜಾಬ್ ಕಿಂಗ್ಸ್ ತಂಡ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಆರು ವಿಕೆಟ್ ಗಳಿಂದ ಸೋಲು ಕಂಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆದ್ದು ಪ್ಲೇ ಆಫ್ಸ್ ಗೆ ಹತ್ತಿರವಾಗಲು ಪ್ಲಾನ್ ಮಾಡಿಕೊಂಡಿದೆ.   

ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಾಂಘೀಕ ಆಟ ಆನೆ ಬಲವಾಗಿದೆ. ವಿರಾಟ್ ಕೊಹ್ಲಿ ಫಾರ್ಮ್ ಆರ್ ಸಿಬಿಗೆ ದೊಡ್ಡ ತಲೆ ನೋವಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಂ ಬ್ಯಾಕ್  ಮಾಡುವ ಸಾಧ್ಯತೆಗಳಿವೆ. ಆದ್ರೆ ನಾಯಕ ಫಾಫ್ ಡುಪ್ಲಸಿಸ್, ಗ್ಲೇನ್ ಮ್ಯಾಕ್ಸ್ ವೆಲ್, ದಿನೇಶ್ ಕಾರ್ತಿಕ್ ಆರ್ ಸಿಬಿಯ ಬೆನ್ನೆಲುಬಾಗಿದ್ದಾರೆ. ಜೊತೆಗೆ ರಜತ್ ಪಟಿದಾರ್, ಮಹಿಪಾಲ್ ಲೋಮ್ರೋರ್ ಫಾರ್ಮ್ ಆರ್ ಸಿಬಿಗೆ ಬೂಸ್ಟ್ ನೀಡಿದೆ. ಬೌಲಿಂಗ್ ನಲ್ಲಿ ಆರ್ ಸಿಬಿಗೆ ಯಾವುದೇ ತೊಂದರೇ ಇಲ್ಲ. ಜೋಷ್ ಹೆಜಲ್ ವುಡ್, ಹರ್ಷಲ್ ಪಟೇಲ್, ಹಸರಂಗ ವಿಕೆಟ್ ಬೇಟೆಯಾಡುತ್ತಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡಕ್ಕೆ ಅಸ್ಥಿರ ಪ್ರದರ್ಶನ ದೊಡ್ಡ ಸಮಸ್ಯೆಯಾಗಿದೆ. ಶಿಖರ್ ಧವನ್, ಭನುಕಾ ರಾಜಪಕ್ಷೆ, ಲಿಯಾಮ್ ಲಿವೀಂಗ್ ಸ್ಟೋರ್ ತಂಡದ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ. ಜಾನಿ ಬೈರ್ ಸ್ಟೋ, ಮಯಾಂಕ್ ಮತ್ತಷ್ಟು ಪರಿಣಾಮಕಾರಿಯಾಗಬೇಕಿದೆ. ಬೌಲಿಂಗ್ ನಲ್ಲಿ ರಿಷಿ ಧವನ್, ಕಗಿಸೋ ರಬಾಡ, ಅರ್ಷದೀಪ್ ಸಿಂಗ್ ವೇಗದ ಅಸ್ತ್ರಗಳಾಗಿದ್ದಾರೆ. rcb-vs-pbks-match-prediction

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd