RCB-vs-PBKS match | ಪಂಜಾಬ್ ವಿರುದ್ಧ ಸೋತ ಚಾಲೆಂಜರ್ಸ್..

1 min read
ipl-2022-punjab beat sunrisers saaksha tv

ipl-2022-punjab beat sunrisers saaksha tv

RCB-vs-PBKS match | ಪಂಜಾಬ್ ವಿರುದ್ಧ ಸೋತ ಚಾಲೆಂಜರ್ಸ್..

ನಿರ್ಣಾಯಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೆಲುವು ಸಾಧಿಸಿದೆ. ಮುಂಬೈನ ಬ್ರೆಬೋರ್ನ್ ಅಂಗಳದಲ್ಲಿ ನಡೆದ ಡು ಆರ್ ಡೈ ಪಂದ್ಯದಲ್ಲಿ ಪಂಜಾಬ್ ತಂಡ ಆರ್ ಸಿಬಿ ವಿರುದ್ಧ 54 ರನ್ ಗಳಿಂದ ಜಯ ಸಾಧಿಸಿ ಪ್ಲೇ ಆಫ್ಸ್ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ.

ಬ್ರೇಬೋರ್ನ್ ಮೈದಾನದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದ್ರೆ ಫಾಫ್ ಐಡಿಯಾಗಳನ್ನು ಪಂಜಾಬ್ ತಂಡದ ಬ್ಯಾಟರ್ ಗಳು ಉಲ್ಟಾ ಮಾಡಿದರು. ಮುಖ್ಯವಾಗಿ ಆರಂಭದಲ್ಲಿ ಜಾನಿ ಬೈರ್ ಸ್ಟೋ ಸಿಡಿಲಬ್ಬರದ ಆಟದ ಪ್ರದರ್ಶನ ನೀಡಿದರು.  ಶಿಖರ್ ಧವನ್ ಹಾಗೂ ಬೈರ್ ಸ್ಟೋ ಮೊದಲ ವಿಕೆಟ್ ಗೆ ಐದು ಓವರ್ ಗಳಲ್ಲಿ ಆರವತ್ತು ರನ್ ಗಳಿಸಿದರು. ಈ ಹಂತದಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ 21 ರನ್ ಗಳಿಸಿದ್ದ ಶಿಖರ್ ಧವನ್ ಅವರ ವಿಕೆಟ್ ಪಡೆದರು. ಇದಾದ ಬೆನ್ನಲ್ಲೆ ಭಾನುಕ ರಾಜಪಕ್ಸೆ ಕೂಡ ಒಂದು ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ಇತ್ತ ವಿಕೆಟ್ ಗಳು ಬೀಳುತ್ತಿದ್ದರೂ ತನಗೆ ಸಂಬಂಧವಿಲ್ಲ ಎಂಬಂತೆ ಬ್ಯಾಟ್ ಬೀಸಿದ ಜಾನಿ ಬೈರ್ ಸ್ಟೋ ಕೇವಲ 29 ಎಸೆತಗಳಲ್ಲಿ ಏಳು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳ ಸಮೇತ 66 ರನ್ ಚಚ್ಚಿದರು. ಪರಿಣಾಮ ಪಂಜಾಬ್ ತಂಡ ಕೇವಲ 9 ಓವರ್ ಗಳಲ್ಲಿ 100ರ ಗಡಿ ತಲುಪಿತು.

rcb-vs-pbks-match-Punjab Kings won by 54 runs saaksha tv
rcb-vs-pbks-match-Punjab Kings won by 54 runs saaksha tv

ಇದಾದ ಬಳಿಕ ನಾಯಕ ಮಯಾಂಕ್ ಅಗರ್ ವಾಲ್ ಜೊತೆ ಸೇರಿದ ಲಿಯಾಮ್ ಲೀವಿಂಗ್ ಸ್ಟೋನ್ ಅರ್ಧಶತಕದ ಜೊತೆಯಾಟವಾಡಿದರು. ಮಯಾಂಕ್ 19 ರನ್ ಗಳಿಸಿ ಔಟ್ ಆದ್ರು. ಆದ್ರೆ ಲಿವಿಂಗ್ ಸ್ಟೋನ್ ಆರ್ ಸಿಬಿ ಬೌಲರ್ ಗಳನ್ನು ಚೆಂಡಾಡಿದರು. ಕೊನೆಯಲ್ಲಿ ಬೌಂಡರಿ ಸಿಕ್ಸರ್ ಗಳ ಸುರಿಮಳೆಗೈದ ಲಿಯಾಮ್ ಕೇವಲ 42 ಎಸೆತಗಳಲ್ಲಿ 70 ರನ್ ಚಚ್ಚಿದರು. ಅಂತಿಮವಾಗಿ ಪಂಜಾಬ್ ತಂಡ ಒಂಭತ್ತು ವಿಕೆಟ್ ಕಳೆದುಕೊಂಡು 210 ರನ್ ಗಳಿಸಿತು. ಆರ್ ಸಿಬಿ ಪರ ಹರ್ಷಲ್ ನಾಲ್ಕು ವಿಕೆಟ್ ಪಡೆದರು.

210 ರನ್ ಗಳ ಬೃಹತ್ ಮೊತ್ತದ ಗುರಿಯನ್ನು ಬೆನ್ನಹತ್ತಿದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ಗೆ ನಷ್ಟಕ್ಕೆ 155 ರನ್ ಗಳಿಸಿ ಸೋಲಿಗೆ ಶರಣಾಯಿತು.

ವಿರಾಟ್ ಕೊಹ್ಲಿ ಡುಪ್ಲೆಸಿಸ್ ಉತ್ತಮವಾಗಿಯೇ ಇನ್ನಿಂಗ್ಸ್ ಆರಂಭಿಸಲು ಮುಂದಾದರು.‌ಆದರೆ 33 ರನ ಗಳಿಸಿದ್ದಾಗ ಕೊಹ್ಲಿ 20 ರನ್ ಗಳಿಸಿ ಔಟಾದರು. ಇದರ ಬೆನ್ನಲ್ಲೇ ಡುಪ್ಲೆಸಿಸ್ 10 ರನ್ ಗಳಿಸಿ ನಿರ್ಗಮಿಸಿದರು. ಮಹಿಪಾಲ್ ಕೊಡ ಹೆಚ್ಚು ಹೊತ್ತು ನಿಲ್ಲದೆ ಆರು ರನ್ ಗಳಿಸಿ ಪೆವಿಲಿಯನ್ ಕಡೆ ಹೆಜ್ಜೆಹಾಕಿದರು.

ಈ ಹಂತದಲ್ಲಿ ರಜತ್ ಪಟ್ಟಿದಾರ್ ಹಾಗೂ ಮ್ಯಾಕ್ಸ್ ವೆಲ್ 4ನೇ ವಿಕೆಟ್ ಗೆ ಜತೆಯಾಗಿ ತಂಡದ ಮೊತ್ತವನ್ನು ಮುನ್ನಡೆಸಿದರು. ಪಟ್ಟಿದಾರ್ 26 ಹಾಗೂ ಮ್ಯಾಕ್ಸ್ ವೆಲ್ 35 ರನ್ ಗಳಿಸಿ ಔಟಾದರು.

ದಿನೇಶ್ ಕಾರ್ತಿಕ್11, ಶಹಬಾಜ್ 9, ಹರ್ಷಲ್ ಪಟೇಲ್ 11 ಹಾಗೂ ಹಸರಂಗ ಕೇವಲ ಒಂದು ರನ್ ಗಳಿಸಿ ನಿರ್ಗಮಿಸಿದರು.

ಪಂಜಾಬ್ ಪರ ಕಗಿಸೊ ರಬಾಡಾ 3, ರಿಷಿ ಧವನ್ ಹಾಗೂ ರಾಹುಲ್ ಚಹರ್ ತಲಾ ಎರಡು ವಿಕೆಟ್ ಕಬಳಿಸಿದರು. rcb-vs-pbks-match-Punjab Kings won by 54 runs

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd